ಮೈಸೂರು(ಮೇ 21): ಆರಂಭ ಹಂತದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿದ್ದ ಮೈಸೂರು ಈಗ ಚೇತರಿಸಿಕೊಂಡಿದೆ. ಇಂದು ಸೋಂಕಿತರೊಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ಮೈಸೂರಿನಲ್ಲಿ ಕೋವಿಡ್19 ಆಕ್ಟಿವ್ ಕೇಸ್ ಆ್ಯಕ್ಟಿವ್ ಕೇಸ್ ಸಂಖ್ಯೆ ಒಂದಕ್ಕೆ ಇಳಿದಿದೆ. ಮೈಸೂರು ಕೋವಿಡ್ ಆಸ್ಪತ್ರೆಯಿಂದ ಮತ್ತೊಬ್ಬ ಕೊರೊನಾ ರೋಗಿ ಬಿಡುಗಡೆಯಾಗಿದ್ದಾರೆ.

SSLC ಪರೀಕ್ಷೆ ರದ್ದತಿಗೆ ಪಿಐಎಲ್: ಹೈಕೋರ್ಟ್ ಕೋರ್ಟ್ ಹೇಳಿದಿಷ್ಟು..?

ಈವರೆಗೆ ಆಸ್ಪತ್ರೆಯಿಂದ 91 ಜನ ಬಿಡುಗಡೆಯಾಗಿದ್ದಾರೆ. ಉಳಿದ ಓರ್ವನಿಗೆ ಚಿಕಿತ್ಸೆ ಮುಂದುವರಿದಿದೆ. ಒಟ್ಟಾರೆ ಮೈಸೂರಿನಲ್ಲಿ 92 ಮಂದಿ ಕೊರೋನಾ ಸೋಂಕಿತರು ದಾಖಲಾಗಿದ್ದು, ಸದ್ಯ ಜಿಲ್ಲೆಯಲ್ಲಿ 350 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 7 ದಿನಗಳ ಫೆಸಿಲಿಟಿ ಕ್ವಾರಂಟೈನ್‌ನಲ್ಲಿ 99 ಜನರಿದ್ದಾರೆ.