ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿ ನಿರ್ಲಕ್ಷ್ಯಕ್ಕೆ ವೃದ್ಧ ಬಲಿ
* ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ
* ಇದೇ ಮಾರ್ಗದಲ್ಲೇ ಆಯ ತಪ್ಪಿ ಬಿದ್ದು ಮತ್ತೋರ್ವ ಮಹಿಳೆಗೆ ಗಾಯ
* ಸಿಟಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ಬೆಳಗಾವಿ(ಜು.18): ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ನಿರ್ಲಕ್ಷ್ಯಕ್ಕೆ ವೃದ್ಧರೊಬ್ಬರು ಬಲಿಯಾದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣ ಎದುರು ನಿನ್ನೆ(ಶನಿವಾರ) ತಡರಾತ್ರಿ ನಡೆದಿದೆ. ಗಾಂಧಿನಗರ ನಿವಾಸಿ ಮೆಹಮುದ್ ಅಬ್ದುಲ್ ದಸ್ತಗೀರ್ ಮುಲ್ಲಾ(65) ಮೃತ ದುರ್ದೈವಿಯಾಗಿದ್ದಾರೆ.
ರಸ್ತೆ ದಾಟುವಾಗ ಆಯತಪ್ಪಿ ನಿರ್ಮಾಣ ಹಂತದ ಡಿವೈಡರ್ ಮೇಲೆ ಬಿದ್ದು ಮೆಹಮುದ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಿರ್ಮಾಣ ಹಂತದ ಡಿವೈಡರ್ ನಿರ್ಮಿಸಲು ಹಾಕಲಾಗಿದ್ದ ಕಬ್ಬಿಣದ ಸರಳುಗಳ ಮೇಲೆ ಮೆಹಮುದ್ ಬಿದ್ದಿದ್ದರು. ತೀವ್ರ ರಕ್ತಸ್ರಾವವಾಗಿ ವೃದ್ಧ ಸಾವನ್ನಪ್ಪಿದ್ದಾರೆ. ಇದೇ ಮಾರ್ಗದಲ್ಲೇ ಆಯ ತಪ್ಪಿ ಬಿದ್ದು ಮತ್ತೋರ್ವ ಮಹಿಳೆಯೊಬ್ಬರು ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗೋಕಾಕ್: ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
ಬೆಳಗಾವಿ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಡಿವೈಡರ್ ನಿರ್ಮಾಣ ಮಾಡಲಾಗುತ್ತಿದೆ. ಡಿವೈಡರ್ ನಿರ್ಮಿಸಲು ಬಾರ್ ಬೆಂಡಿಂಗ್ ಮಾಡಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ತ್ವರಿತಗತಿ ಕಾಮಗಾರಿ ಮಾಡಿಸದೇ ಸ್ಮಾರ್ಟ್ ಸಿಟಿ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ.
ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕ ಹಾಕಲೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.