ಮಂಗಳೂರು(ಏ.22): ದೇಶಾದ್ಯಂತ ಅಗತ್ಯ ವಸ್ತು ಪೂರೈಕೆಗಾಗಿ ಕೊಂಕಣ ರೈಲ್ವೆ ಸರಕು ಟ್ರೈನ್‌ಗಳನ್ನು ಓಡಿಸುತ್ತಿದೆ. ಅದರಂತೆ ಓಖಾ ಹಾಗೂ ತಿರುವನಂತಪುರಂ ಮಧ್ಯೆ ಪಶ್ಚಿಮ ರೈಲ್ವೆ ಸಹಯೋಗದಲ್ಲಿ ಪಾರ್ಸೆಲ್‌ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ.

ಈ ರೈಲಿನಲ್ಲಿ ಔಷಧ, ಔಷಧೀಯ ಉಪಕರಣಗಳು, ಮಾವಿನ ಹಣ್ಣು ಮತ್ತಿತರ ವಸ್ತುಗಳಿರುತ್ತವೆ. ನಂ.00933 ಓಖಾ-ತಿರುವನಂತಪುರಂ ಪಾರ್ಸೆಲ್‌ ರೈಲು ಓಖಾದಿಂದ ಸೋಮವಾರ ಹೊರಟಿದ್ದು, ಬುಧವಾರ ಅಪರಾಹ್ನ 12 ಗಂಟೆಗೆ ತಿರುವನಂತಪುರಂ ತಲಪುವುದು.

ಬಂಟ್ವಾಳದಲ್ಲಿ 34 ಮಂದಿಗೆ ಹೋಮ್‌ ಕ್ವಾರಂಟೈನ್‌: ನಳಿನ್‌

ನಂ.00934 ತಿರುವನಂತಪುರಂ ಸೆಂಟ್ರಲ್‌-ಓಖಾ ವಿಶೇಷ ಪಾರ್ಸೆಲ್‌ ರೈಲು ಏ.22ರಂದು ಮಧ್ಯಾಹ್ನ 1ಕ್ಕೆ ಹೊರಟು ಮೂರನೇ ದಿನ ಮಧ್ಯಾಹ್ನ 1.40ಕ್ಕೆ ಓಖಾ ತಲುಪುವುದು.

ರೈಲಿಗೆ ಜಾಮ್ನಗರ್‌, ರಾಜ್ಕೋಟ್‌, ಸುರೇಂದ್ರನಗರ್‌, ಅಹಮದಾಬಾದ್‌, ಆನಂದ್‌, ವಡೋದರ, ಭರೂಚ್‌, ವಸಾಯ್‌ ರೋಡ್‌, ಪನ್ವೇಲ್, ರೋಹ, ರತ್ನಗಿರಿ, ಕಂಕವಾಲಿ, ಮಡಗಾಂವ್‌, ಉಡುಪಿ, ಮಂಗಳೂರು ಜಂಕ್ಷನ್‌, ಕಣ್ಣೂರು, ಕಲ್ಲಿಕೋಟೆ, ಶೋರನೂರು, ತ್ರಿಶೂರು, ಎರ್ನಾಕುಳಂ ಟೌನ್‌, ಕೊಟ್ಟಾಯಂ ಮತ್ತು ಕೊಲ್ಲಂ ಜಂಕ್ಷನ್‌ನಲ್ಲಿ ವಾಣಿಜ್ಯ ನಿಲುಗಡೆ ಇದೆ.

ಕೊರೋನಾ ಬಿಸಿ: ರಾಷ್ಟಟ್ರಪತಿ ಭವನದ 500 ಮಂದಿಗೆ ಕ್ವಾರಂಟೈನ್!

ಆಸಕ್ತ ಗ್ರಾಹಕರು ತಮ್ಮ ಸಾಮಗ್ರಿಗಳನ್ನು ಸಾಗಿಸಲು ಬಯಸುವುದಾದರೆ ಆಯಾ ನಿಲ್ದಾಣಗಳ ಪಾರ್ಸೆಲ್‌ ಕಚೇರಿಯನ್ನು ಸಂಪರ್ಕಿಸಿ ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ