Asianet Suvarna News Asianet Suvarna News

ಮತದಾರ ಪಟ್ಟಿಪರಿಷ್ಕರಣೆಯ ಕುರಿತು ಹಳ್ಳಿಗಳಿಗೆ ಅಧಿಕಾರಿಗಳ ದಂಡು

ಮತದಾರರ ಪಟ್ಟಿಪರಿಷ್ಕರಣೆ ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರು ಬಬಲೇಶ್ವರ ಹಾಗೂ ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿಪರಿಷ್ಕರಣೆ ಕಾರ್ಯ ಪರಿಶೀಲಿಸಿದರು.

 officials to visits villages regarding voter list revision snr
Author
First Published Dec 5, 2022, 6:48 AM IST

ವಿಜಯಪುರ (ಡಿ.05):ಮತದಾರರ ಪಟ್ಟಿಪರಿಷ್ಕರಣೆ ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರು ಬಬಲೇಶ್ವರ ಹಾಗೂ ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿಪರಿಷ್ಕರಣೆ ಕಾರ್ಯ ಪರಿಶೀಲಿಸಿದರು.

ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಕಣಮುಚನಾಳ ಹಾಗೂ ಬ.ಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಉಕ್ಕಲಿ ಗ್ರಾಮದ (village ) ಮತಗಟ್ಟೆಸಂಖ್ಯೆ 13ರಲ್ಲಿ ಬರುವ ಮನೆ ಮನೆಗೆ ತೆರಳಿ, ಜನರಲ್ಲಿ ಮತದಾರರ ಪಟ್ಟಿಲ್ಲಿ ಹೆಸರು ನಮೂದಿಸುವ ಕುರಿತು ಜಾಗೃತಿ ಮೂಡಿಸುವುದರ ಮೂಲಕ ಮತಗಟ್ಟೆಅಧಿಕಾರಿಗಳು ನಿರ್ವಹಿಸುವ ಕಾರ್ಯವನ್ನು ಪರಿಶೀಲಿಸಿದರು.ತಮ್ಮ ವ್ಯಾಪ್ತಿಗೆ ಬರುವ ಪ್ರತಿ ಮನೆ ಮನೆಗೆ ತೆರಳಿ ಮತದಾರರ (voters)  ವಿವರ ಸಂಗ್ರಹಿಸಲು ಹಾಗೂ ಯುವ ಮತದಾರರನ್ನು ಹೆಚ್ಚಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ನಿಟ್ಟಿನಲ್ಲಿಯೂ ಕಾಯೋನ್ಮುಖರಾಗಲು ಮತಗಟ್ಟೆಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರು ಅಗತ್ಯ ಸಲಹೆ ಸೂಚನೆ ನೀಡಿದರು.

ಈ ವೇಳೆ ಬಬಲೇಶ್ವರ ತಹಶೀಲ್ದಾರ ಸಂತೋಷ ಮ್ಯಾಗೇರಿ, ಕಂದಾಯ ನಿರೀಕ್ಷಕ ಎಸ್‌.ಎ.ಗುಮಾಸ್ತೆ, ಬಸವನಬಾಗೇವಾಡಿ ತಹಶೀಲ್ದಾರ ಪ್ರೇಮ್‌ಸಿಂಗ್‌ ಪವಾರ್‌, ಕಂದಾಯ ನಿರೀಕ್ಷಕ ಎಸ್‌.ಎಚ್‌.ಶಿರಸ್ಯಾಡ ಹಾಗೂ ಮತಗಟ್ಟೆಅಧಿಕಾರಿಗಳು ಉಪಸ್ಥಿತರಿದ್ದರು.

 ಮುದ್ದೇಬಿಹಾಳ : ತಾಲೂಕಿನ ಹಳ್ಳೂರ, ಅಗಸಬಾಳ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮತದಾರರ ಮಾಹಿತಿ ಮತ್ತು ಪರಿಷ್ಕರಣೆ ಕುರಿತು ಪರಿಶೀಲನೆ ನಡೆಸಿದರು.

ಅಗಸಬಾಳ ಗ್ರಾಮದ ಮತಗಟ್ಟೆಸಂಖ್ಯೆ 51 ಹಾಗೂ ಹಳ್ಳೂರ ಗ್ರಾಮದ ಮತಗಟ್ಟೆಸಂಖ್ಯೆ 48 ಮತ್ತು 49ಕ್ಕೆ ಭೇಟಿ ನೀಡಿ ಬಿಎಲ್‌ಓಗಳು ಮನೆ ಮನೆಗಳಿಗೆ ತೆರಳಿ ಮತದಾರರ ಪರಿಷ್ಕರಣೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಪರಿಶೀಲಿಸಿದರು. ಅಲ್ಲದೇ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಹೆಸರು ಸೇರ್ಪಡೆ ಮಾಡುವಂತೆ ತಿಳಿಸಿದರು. ಯುವ ಮತದಾರರು ದಾಖಲೆಗಳನ್ನು ಪಡೆದು ಹೊಸ ವೋಟರ್‌ ಐಡಿಗಳನ್ನು ಪಡೆಯಿರಿ ಜೊತೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಇದೇಯೆ ಎಂದು ಪರಿಶೀಲಿಸಿಕೊಳ್ಳಿ. ಅಲ್ಲದೇ ಮದುವೆಯಾಗಿ ಗಂಡನ ಮನೆಗೆ ಹೋದವರ ಹೆಸರು ಪಟ್ಟಿಯಿಂದ ತೆಗೆದು ಹಾಕುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ತಹಸಿಲ್ದಾರ್‌ ಬಿ.ಎಸ್‌.ಕಡಕಭಾವಿ, ಢವಳಗಿ ಕಂದಾಯ ನಿರೀಕ್ಷಕ ಡಿ.ಎಸ್‌.ತಳವಾರ, ಗ್ರಾಮ ಲೆಕ್ಕಾಧಿಕಾರಿ ರಿಯಾಜ್‌ ನಾಯ್ಕೋಡಿ, ಎ.ಎಸ್‌.ಬಾಬಾನಗರ, ಮತಗಟ್ಟೆಅಧಿಕಾರಿ ಮೇಲ್ವಿಚಾರಕ ಎಂ.ಎಸ್‌.ಮಾಕೊಂಡ, ಗ್ರಾಪಂ ಸಿಬ್ಬಂದಿ ಎಂ.ಕೆ.ಗುಡಿಮನಿ ಮುಂತಾದವರು ಉಪಸ್ಥಿತರಿದ್ದರು.

ಬಾಗಲಕೋಟೆ : 2022-23ನೇ ಸಾಲಿನ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಈಗಾಗಲೇ ಆರಂಭವಾಗಿದ್ದು, ಡಿ.8ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ, ತೆಗೆದುಹಾಕುವುದು, ತಿದ್ದುಪಡಿ ಮಾಡುವ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಇರುತ್ತದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ 1,719 ಮತಗಟ್ಟೆಗಳಿದ್ದು, ಮತಗಟ್ಟೆಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದು, ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಲು ತಿಳಿವಳಿಕೆ ನೀಡಿ ಅವರಿಂದ ನಮೂನೆ 6 ರಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ಅದರಂತೆ ಮನೆಗಳಿಗೆ ಭೇಟಿ ನೀಡಿದ ಸಂದÜರ್ಭದಲ್ಲಿ ಯಾವುದಾದರು ಮತದಾರರು ಮರಣ ಹೊಂದಿದ್ದಲ್ಲಿ ಅಥವಾ ಮಹಿಳಾ ಮತದಾರರು ಮದುವೆಯಾಗಿ ಬೇರೆ ಗ್ರಾಮಗಳಲ್ಲಿ ನೆಲೆಸಿದ್ದಲ್ಲಿ ಅವರ ವಿವರಗಳನ್ನು ನಮೂನೆ 7ರಲ್ಲಿ ದಾಖಲಿಸಿ ನಿಯಮಾನುಸಾರ ಪರಿಶೀಲಿಸಿ ಕ್ರಮ ಜರುಗಿಸುತ್ತಿದ್ದಾರೆ. ಹಾಗೂ ಮತದಾರರ ಗುರುತಿನ ಚೀಟಿಯಲ್ಲಿ ತಿದ್ದುಪಡಿ, ವಿಳಾಸ ಬದಲಾವಣೆಗಳಿಗೆ ಸಂಬಂಧಿಸಿದಂತೆ ನಮೂನೆ 8ರಲ್ಲಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಿಶೇಷವಾಗಿ ಈ ವರ್ಷ ಭಾರತ ಚುನಾವಣಾ ಆಯೋಗದ ಪತ್ರ ಜುಲೈ 4, 2022ರ ನಿರ್ದೇಶನದಂತೆ ಮತದಾರರ ಪರಿಶೀಲನೆ ನಡೆದಿದ್ದು, ಮತದಾರರು ಆಧಾರ ಸಂಖ್ಯೆ, ಡ್ರೈವಿಂಗ್‌ ಲೈಸೆನ್ಸ್‌, ಪಡಿತರ ಕಾರ್ಡ್‌, ಪಾನ್‌ ಕಾರ್ಡ್‌, ಇತರೆ ದಾಖಲೆಗಳನ್ನು ಸಲ್ಲಿಸಬಹುದು. ಆಧಾರ ಕಾರ್ಡ್‌ ನೀಡುವುದು ಕಡ್ಡಾಯವಲ್ಲ. ಮತಗಟ್ಟೆಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿದಾಗ ಮರಣ ಪ್ರಕರಣಗಳು ಕಂಡು ಬರುತ್ತಿದ್ದು ಅವರ ವಿವರಗಳನ್ನು ನಮೂನೆ 7ರಲ್ಲಿ ಸಂಗ್ರಹಿಸಲಾಗುತ್ತಿದೆ. ಮತದಾರರ ನೋಂದಣಿ ಅಧಿಕಾರಿಗಳು ಸಾಂಖಿಕ ಇಲಾಖೆಯಿಂದ ಇ-ಜನ್ಮ ತಂತ್ರಾಂಶದಲ್ಲಿ ದಾಖಲಾದ ಮರಣ ಪ್ರಕರಣಗಳ ಪಟ್ಟಿಪಡೆದು ಪುನಃ ಮತಗಟ್ಟೆಮಟ್ಟದ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ ಮರಣ ಸಂಭವಿಸಿದ್ದು ದೃಢಪಟ್ಟಿದಲ್ಲಿ ಅಂಥ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಸೂಚನೆ ನೀಡಲಾಗಿದೆ.

ತಹಸೀಲದಾರರು ಮತ್ತು ಉಪವಿಭಾಗಾಧಿಕಾರಿಗಳು ಯಾವುದೇ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ಅಲೆಮಾರಿ ಜನಾಂಗ, ಗಿರಿಜನ ವಾಸಿಸುವ ಪ್ರದೇಶಗಳಿಗೆ ಹೋಗಿ ಮತದಾರರ ಪಟ್ಟಿಸಿದ್ಧಪಡಿಸುತ್ತಿದ್ದಾರೆ. ತೃತೀಯ ಲಿಂಗಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಕ್ರಮ ಜರುಗಿಸಲಾಗಿದೆ. ಯಾವುದೇ ಅರ್ಹ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios