ಧಾರವಾಡ, (ಏ.21): ಕೊರೋನಾ ಪರಿಹಾರ ನಿಧಿಗೆ ಬಸ್​ ಕಂಡಕ್ಟರ್​​ವೊಬ್ಬರು ದೇಣಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ನಿರ್ವಾಹಕರಾಗಿರುವ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಬಸವರಾಜ ನೀಲಪ್ಪ ಗಾಣಿಗೇರ ಅವರು ನೆರವು ನೀಡಿ ಮಾದರಿಯಾಗಿದ್ದಾರೆ. 

ಟಿಕೆಟ್-ಟಿಕೆಟ್ ಎನ್ನುತ್ತಲೇ ಉಚಿತ ಮಾಸ್ಕ್ ವಿತರಿಸಿದ KSRTC ಕಂಡಕ್ಟರ್

ತಮ್ಮ ಒಂದು ತಿಂಗಳ ವೇತನದ ಮೊತ್ತ 25 ಸಾವಿರ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದು, ಜಿಲ್ಲಾಧಿಕಾರಿಗಳಿಗೆ ಚೆಕ್​ ಹಸ್ತಾಂತರಿಸಿದ್ದಾರೆ.

ಚೆಕ್ ಸ್ವೀಕರಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಈ ಸಂಕಷ್ಟದ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಕಂಡಕ್ಟರ್ ಒಬ್ಬರು ಸ್ವಯಂಪ್ರೇರಣೆಯಿಂದ ತಮ್ಮ ಒಂದು ತಿಂಗಳ ವೇತನವನ್ನು ನೀಡಿರುವುದು ಸಮಾಜಕ್ಕೆ ಮಾದರಿಯಾದ ಕಾರ್ಯವಾಗಿದೆ. ಜಿಲ್ಲಾಡಳಿತ ಈ ಕಾರ್ಯವನ್ನು ಪ್ರಶಂಸೆ ಮಾಡುತ್ತದೆ ಎಂದರು.

ಈ ವೇಳೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕರಾದ ವಿವೇಕಾನಂದ ವಿಶ್ವಜ್ಞ, ಹನುಮಂತ ಬೋಜೇದಾರ್,ಬಸವರಾಜ ಅವಾರಿ,ಎಂ.ಎಸ್‌.ರೋಣದ,ವೆಂಕಟೇಶ ಹರ್ತಿ,ಡಾ.ಪಿ.ವಿ.ಸವದಿ ಮತ್ತಿತರರು ಇದ್ದರು.