ಕೊರೋನಾ ಹಾಟ್‌ಸ್ಪಾಟ್‌ ಕೊಪ್ಪಳದಲ್ಲಿ ತಗ್ಗುತ್ತಿರುವ ವೈರಸ್‌ ಅಬ್ಬರ..!

ದಿನೇ ದಿನೇ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖ| ಶನಿವಾರ ಕೇವಲ 20 ಪಾಸಿಟಿವ್‌ ಪ್ರಕರಗಳು ಪತ್ತೆ| ಸೆಪ್ಟೆಂಬರ್‌ ತಿಂಗಳಲ್ಲಿ ತೀರಾ ಅಪಾಯಕಾರಿ ಮಟ್ಟ ತಲುಪಿತ್ತು| ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿ ಕ್ಷೀಣಿಸುತ್ತಲೇ ಇದೆ| 

Number of Corona Cases is Declining in Koppal Districtgrg

ಕೊಪ್ಪಳ(ಅ.04): ಕೊರೋನಾ ಹಾಟ್‌ಸ್ಪಾಟ್‌ ಕೊಪ್ಪಳ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕೊರೋನಾ ಅಬ್ಬರ ತಗ್ಗುತ್ತಿದೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಶನಿವಾರ ಕೇವಲ 20 ಪಾಸಿಟಿವ್‌ ಪ್ರಕರಣ ದೃಢಪಟ್ಟಿವೆ. 

ಸೆಪ್ಟೆಂಬರ್‌ ತಿಂಗಳಲ್ಲಿ ತೀರಾ ಅಪಾಯಕಾರಿ ಮಟ್ಟ ತಲುಪಿತ್ತು. ಆದರೆ, ಈಗ ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿ ಕ್ಷೀಣಿಸುತ್ತಲೇ ಇದೆ. ಹಾಗಂತ ಟೆಸ್ಟ್‌ ಕಡಿಮೆಯಾಗಿಲ್ಲ. ಶನಿವಾರ 2400 ಟೆಸ್ಟ್‌ ಮಾಡಲಾಗಿದ್ದು, ಕೇವಲ 20 ಪಾಸಿಟಿವ್‌ ಪ್ರಕರಣ ಪತ್ತೆಯಾಗಿವೆ. 

ಗಂಗಾವತಿ: ಕೊರೋನಾ ನಿವಾರಣೆಗಾಗಿ ಅಂಜನಾದ್ರಿ ಪರ್ವತದಲ್ಲಿ ಭರತನಾಟ್ಯ ಸೇವೆ

ಇನ್ನು ಕೋವಿಡ್‌ಗೆ ಇಬ್ಬರು ಮೃತಪಟ್ಟಿದ್ದಾರೆ. 110 ಜನರು ಗುಣಮುಖವಾಗಿದ್ದು, ಇದರೊಂದಿಗೆ ಗುಣಮುಖರಾದವರ ಸಂಖ್ಯೆ 9972ಕ್ಕೆ ಏರಿಕೆಯಾಗಿದ್ದರೆ ಸೋಂಕಿತರ ಸಂಖ್ಯೆ 11878ಕ್ಕೆ ಏರಿಕೆಯಾಗಿದೆ.
 

Latest Videos
Follow Us:
Download App:
  • android
  • ios