Asianet Suvarna News Asianet Suvarna News

ಬೆಂಗ್ಳೂರಲ್ಲಿ 3 ಲಕ್ಷ ದಾಟಿದ ಸಕ್ರಿಯ ಸೋಂಕಿತರ ಸಂಖ್ಯೆ

20870 ಹೊಸ ಪ್ರಕರಣ ಪತ್ತೆ| 132 ಮಂದಿಗೆ ಸೋಂಕಿಗೆ ಬಲಿ| 70 ವರ್ಷ ಮೇಲ್ಪಟ್ಟವರೇ ಹೆಚ್ಚು ಸಾವು| 9 ವರ್ಷದೊಳಗಿನ 644 ಮಕ್ಕಳಿಗೆ ಸೋಂಕು| ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 8,40,274ಕ್ಕೆ ಏರಿಕೆ|  

Number of Active Cases Crossing 3 lakhs in Bengaluru grg
Author
Bengaluru, First Published May 5, 2021, 7:11 AM IST

ಬೆಂಗಳೂರು(ಮೇ.05): ರಾಜಧಾನಿಯಲ್ಲಿ ಕೊರೋನಾ ಮಹಾಮಾರಿ ಆರ್ಭಟ ಮುಂದುವರಿದಿದ್ದು, ಮಂಗಳವಾರ 20,870 ಹೊಸ ಪ್ರಕರಣ ವರದಿಯಾಗಿವೆ. 132 ಜನರು ಮೃತಪಟ್ಟಿದ್ದಾರೆ.

ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 8,40,274ಕ್ಕೆ ಏರಿಕೆಯಾಗಿದೆ. 132 ಮಂದಿ ಸಾವಿನೊಂದಿಗೆ ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6,845ಕ್ಕೆ ಏರಿಕೆಯಾಗಿದೆ. ಈ ನಡುವೆ ಮಂಗಳವಾರ 13,946 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 5,31,716ಕ್ಕೆ ಏರಿಕೆಯಾಗಿದೆ. ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 3,01,712ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಕೋವಿಡ್‌ ವರದಿಯಲ್ಲಿ ತಿಳಿಸಿದೆ.

"

ಕರ್ಫ್ಯೂ ಜಾರಿ ಮಾಡಿದ್ರೂ ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಮೇ.04ರ ಅಂಕಿ-ಸಂಖ್ಯೆ ನೋಡಿ

9 ವರ್ಷದೊಳಗಿನ 644 ಮಕ್ಕಳಿಗೆ ಸೋಂಕು

ನಗರದಲ್ಲಿ ವರದಿಯಾಗಿರುವ ಒಟ್ಟು 20,870 ಸೋಂಕು ಪ್ರಕರಣಗಳ ಪೈಕಿ 9 ವರ್ಷದೊಳಗಿನ 644 ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ. 10-19 ವರ್ಷದೊಳಗಿನ 1,393, 20-29 ವರ್ಷದೊಳಗಿನ 4,607, 30-39 ವರ್ಷದೊಳಗಿನ 5,629, 40-49 ವರ್ಷದೊಳಗಿನ 3,645, 50-59 ವರ್ಷದೊಳಗಿನ 2,384, 60-69 ವರ್ಷದೊಳಗಿನ 1,557 ಹಾಗೂ 70 ವರ್ಷ ಮೇಲ್ಪಟ್ಟ 1,011 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

70 ವರ್ಷ ಮೇಲ್ಪಟ್ಟವರೇ ಹೆಚ್ಚು ಸಾವು

ಸಾವಿಗೀಡಾದ 132 ಮಂದಿ ಪೈಕಿ 70 ವರ್ಷ ಮೇಲ್ಪಟ್ಟ 40 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ 50-59 ವರ್ಷದೊಳಗಿನ 36, 60-69 ವರ್ಷದೊಳಗಿನ 27, 40-49 ವರ್ಷದೊಳಗಿನ 20, 30-39 ವರ್ಷದೊಳಗಿನ 7 ಹಾಗೂ 20-29 ವರ್ಷದೊಳಗಿನ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 132 ಸಾವು ಪ್ರಕರಣಗಳ ಪೈಕಿ 84 ಮಂದಿ ಪುರುಷರು ಹಾಗೂ 48 ಮಂದಿ ಮಹಿಳೆಯರು ಸೋಂಕಿಗೆ ಬಲಿಯಾಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios