Chamarajanagaraದಲ್ಲಿ ಇದ್ರೂ ಇಲ್ಲದಾಗಿವೆ ಆಂಬ್ಯುಲೆನ್ಸ್ , ಚಾಲಕರ ನೇಮಕಾತಿಗೆ ಮೀನಾಮೇಷ!
- ಆಂಬ್ಯುಲೆನ್ಸ್ ಚಾಲಕರಿಗಾಗಿ ನಡೆಯದ ನೇಮಕಾತಿ
- ನಿಂತಲ್ಲೇ ಧೂಳು ಹಿಡಿಯುತ್ತಿರುವ ಆಂಬ್ಯುಲೆನ್ಸ್
- ರೋಗಿಗಳ ಪಾಲಿಗೆ ಇದ್ದರೂ ಇಲ್ಲದಂತಾದ ಆಂಬ್ಯುಲೆನ್ಸ್
- ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಡಳಿತ ಭವನ ಸೇರಿ ಆರು ಕಡೆ ಚಾಲಕರಿಲ್ಲದೇ ನಿಂತ ಆಂಬ್ಯುಲೆನ್ಸ್
ವರದಿ: ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣನ್ಯೂಸ್
ಚಾಮರಾಜನಗರ (ಜೂ.8): ಅದು ಹೇಳಿ ಕೇಳಿ ಮೊದ್ಲೇ ಹಿಂದುಳಿದ ಜಿಲ್ಲೆ. ಜೊತೆಗೆ ಅರಣ್ಯ, ಬೆಟ್ಟ, ಗುಡ್ಡಗಳು, ಇರುವ ಜಿಲ್ಲೆ ಸುಮಾರು ಅರ್ಧದಷ್ಟು ಅರಣ್ಯ ಹೊಂದಿದ್ದು ಇಲ್ಲಿ ವಾಸಿಸುವ ಅದೆಷ್ಟೊ ಜನರಿಗೆ ರಸ್ತೆ, ವಿಧ್ಯುಚ್ಚಕ್ತಿ ಸಂಪರ್ಕವೆ ಇಲ್ಲ ಈಗಿರುವಾಗ ಮಹದೇಶ್ವರಬೆಟ್ಟದ ಕಾಡಿನಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸಮಸ್ಸೆ ಉಂಟಾದರಂತು ದೇವರೆ ಗತಿ ಜೋಲಿ ಕಟ್ಟಿಕೊಂಡು ಆಸ್ಪತ್ರೆ ಇರುವ ಜಾಗಕ್ಕೆ ಕರೆತರಬೇಕಾದ ಪರಿಸ್ಥಿತಿ ಹಾಗು ಅಪಘಾತ ಸಂಭವಿಸಿದರಂತು ಕಿ.ಮೀ ದೂರ ರೋಗಿಯನ್ನು ಕರೆತರಬೇಕಾದರೆ ಬಲು ಕಷ್ಟ.
ಕಳೆದ ಕೋವಿಡ್ ಸಂಕಷ್ಟದ ಸಮಯದಲ್ಲಿ ರೋಗಿಗಳ ಸಾಗಾಟಕ್ಕೂ ಆಂಬ್ಯುಲೆನ್ಸ್ ಕೊರತೆಯಿತ್ತು.ಇದನ್ನು ಮನಗೊಂಡ ಅಧಿಕಾರಿಗಳು ಸಂಸದರ ನಿಧಿ,ಶಾಸಕರ ನಿಧಿಯಿಂದ ಆಂಬ್ಯುಲೆನ್ಸ್ ಖರೀದಿಗೆ ನಿರ್ಧರಿಸಿ ಆರು ಆಂಬ್ಯುಲೆನ್ಸ್ ಖರೀದಿ ಮಾಡಿದ್ದಾರೆ.ಆದ್ರೆ ಖರೀದಿಸಿ ನಾಲ್ಕು ತಿಂಗಳಾದರೂ ಕೂಡ ಚಾಲಕರನ್ನು ಮಾತ್ರ ನೇಮಿಸಿಲ್ಲ. ಜಿಲ್ಲಾಡಳಿತ ಭವನ, ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಉಪಯೋಗಕ್ಕೆ ಬಾರದೆ ಧೂಳು ಹೊಡೀತಿವೆ ಆಂಬ್ಯುಲೆನ್ಸ್ . ಚಾಲಕರ ನೇಮಕಕ್ಕೆ ಅಧಿಕಾರಿಗಳು ಯಾಕೆ ಮೀನಾ ಮೇಷ ಏಣಿಸಿತ್ತಿದ್ದಾರೆ ಇದರಿಂದ ಆಂಬ್ಯುಲೆನ್ಸ್ ಖರೀದಿಸಿ ಏನೂ ಪ್ರಯೋಜನ ಅಂತಾ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
CHIKKAMAGALURU : ಗಾಂಜಾ ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಹೊಸ ಪ್ಲಾನ್
ಗಡಿ ಜಿಲ್ಲೆ ಚಾಮರಾಜನಗರ ಹಿಂದುಳಿದ ಜಿಲ್ಲೆ. ಕೊರೋನಾದಂತಹ ಸಂದಿಗ್ದ ಸಮಯದಲ್ಲಿ ಜಿಲ್ಲಾದ್ಯಂತ ಆಂಬ್ಯುಲೆನ್ಸ್ ಕೊರತೆಯಿತ್ತು. ಅದನ್ನು ಮನಗೊಂಡ ಶಾಸಕರು, ಸಂಸದರು ತಮ್ಮ ಅನುದಾನದಲ್ಲಿ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಆರು ಆಂಬ್ಯುಲೆನ್ಸ್ ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು. ಈ ಆಂಬ್ಯುಲೆನ್ಸ್ ಹಸ್ತಾಂತರ ಮಾಡಿ ಇದೀಗ ನಾಲ್ಕು ತಿಂಗಳು ಕಳೆದಿದೆ. ಆದ್ರೆ ಇಲ್ಲಿಯವರೆಗೂ ಚಾಲಕರ ನೇಮಕಾತಿಗೆ ಅಧಿಕಾರಿಗಳು ಮನಸ್ಸು ಮಾಡಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲೆಯ ಪಿಜಿ ಪಾಳ್ಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಜೊತೆಗೆ ಜಿಲ್ಲಾಡಳಿತ ಭವನದಲ್ಲಿ ಎರಡು ಆಂಬ್ಯುಲೆನ್ಸ್ ಧೂಳು ಹೊಡೀತಾ ನಿಂತಿದ್ರು ಕೂಡ ಅಧಿಕಾರಿಗಳು ಅತ್ತ ಗಮನಹರಿಸಿಲ್ಲ. ಅಲ್ಲದೇ ಪಿಜಿ ಪಾಳ್ಯ ವ್ಯಾಪ್ತಿಯಲ್ಲಿ ಅರಣ್ಯದಲ್ಲಿ ವಾಸಿಸುವ ಜನರೆ ಅಧಿಕವಾಗಿದ್ದು ಆರೋಗ್ಯದಲ್ಲಿ ವ್ಯತ್ಯಾಸವಾದರೆ ಇಲ್ಲಾ ಹೆರಿಗೆ ಸಂದರ್ಭಗಳಲ್ಲಿ ಇಂದಿಗೂ ಜೋಲಿ ಕಟ್ಟಿಕೊಂಡೆ ಆಸ್ಪತ್ರೆಗೆ ಕರೆತರುವ ವ್ಯವಸ್ಥೆ ಇದೆ.
ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ: Araga Jnanendra
ಹೀಗೆ ಕರೆತರುವ ವೇಳೆ ಅವಘಡಗಳು ಸಂಭವಿಸಿರುವ ಉದಾಹರಣೆಗಳು ಸಹ ಉಂಟು ಕಳೆದ ಎರಡು ತಿಂಗಳ ಬಸ್ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದರು. ಆ ವೇಳೆಯೂ ಕೂಡ ಗಾಯಾಳು ರವಾನೆಗೆ ಆಂಬ್ಯುಲೆನ್ಸ್ ಕೊರತೆ ಕಂಡುಬಂದಿತ್ತು. ಗರ್ಭಿಣಿಯರು ಅಥವಾ ಅಪಘಾತವಾದರೆ ಅವರ ರವಾನೆ ಮಾಡಬೇಕಾದರೆ ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿದೆ ಅಂತಾ ಅಳಲು ತೋಡಿಕೊಳ್ಳುತ್ತಿದ್ದಾರೆ.
ಇನ್ನೂ ಈ ಕುರಿತು ಸಂಸದರನ್ನ ಪ್ರಶ್ನಿಸಿದ್ರೆ ಶೀಘ್ರದಲ್ಲೇ ಆಂಬ್ಯುಲೆನ್ಸ್ ಸೌಲಭ್ಯ ಒದಗಿಸಲು ಡಿಎಚ್ಒ ಅವರಿಗೆ ಸೂಚಿಸ್ತೇನೆ.ನಾವು ಜನರಿಗೆ ಅನುಕೂಲವಾಗಲಿ ಅಂತಾ ಆಂಬ್ಯುಲೆನ್ಸ್ ಸೌಲಭ್ಯ ಕೊಟ್ಟಿದ್ದೇವೆ.ಈ ಮೊದಲೇ ಯಾವ ಭಾಗಕ್ಕೆ ಆಂಬ್ಯುಲೆನ್ಸ್ ಕೊಡಬೇಕು ಅಂತಾ ತೀರ್ಮಾನವಾಗಿದೆ.ಅಧಿಕಾರಿಗಳು ಚಾಲಕರ ನೇಮಿಸದಿದ್ರೆ ಈಗ್ಲೇ ಸೂಚನೆ ಕೊಡ್ತೇನೆ ಅಂತಾ ಹಾರಿಕೆ ಉತ್ತರ ಕೊಟ್ಟರು.
ಜನರಿಗೆ ತುರ್ತು ವಾಹನ ತುರ್ತಾಗಿ ಸಿಗಲಿ ಅಂತಾ ಲಕ್ಷಾಂತರ ರೂ ಖರ್ಚು ಮಾಡಿ ಆಂಬ್ಯುಲೆನ್ಸ್ ಖರೀದಿ ನಡೆದಿದೆ. ಆದ್ರೆ ಆ ಆಂಬ್ಯುಲೆನ್ಸ್ ಉಪಯೋಗ ಮಾತ್ರ ಆಗ್ತಿಲ್ಲ.ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಸಾರ್ವಜನಿಕರ ಸೇವೆಗೆ ಆಂಬ್ಯುಲೆನ್ಸ್ ಸೇವೆ ಒದಗಿಸಿಕೊಡ್ತರಾ ಅನ್ನೋದ್ನ ಕಾದುನೋಡಬೇಕಾಗಿದೆ.