ಚಾರಣಿಗರಿಲ್ಲದೆ ಕೊಡಗಿನ ಬೆಟ್ಟಗಳು ಖಾಲಿ ಖಾಲಿ

ಕೊಡಗಿನಲ್ಲಿ ಚಾರಣಕ್ಕೆ ಬರವಿಲ್ಲ. ಮಳೆಗಾಲ ಹೊರತುಪಡಿಸಿ ಇತರ ದಿನಗಳಲ್ಲಿ ತಡಿಯಂಡಮೋಳ್‌, ಇಗ್ಗುತ್ತಪ್ಪ ಬೆಟ್ಟ, ಮಲ್ಮ ಬೆಟ್ಟ, ಪೇರೂರು ಬೆಟ್ಟಪ್ರಮುಖವಾದ ಶಿಖರಗಳು ಏರಬಹುದು. ಪ್ರತಿವರ್ಷ ಅಕ್ಟೋಬರ್‌ನಿಂದ ಆರಂಭಿಸಿ ಮೇ ವರೆಗೂ ಈ ಬೆಟ್ಟಗಳಲ್ಲಿ ಚಾರಣಿಗರ ಚಟುವಟಿಕೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಲಾಕ್‌ಡೌನ್‌ ಆದ ಬಳಿಕ ಇಲ್ಲಿ ಚಾರಣಿಗರ ಸುಳಿವಿಲ್ಲ.

No trucking in madikeri due to lockdown

ನಾಪೋಕ್ಲು(ಮೇ 19): ಕೊಡಗಿನಲ್ಲಿ ಚಾರಣಕ್ಕೆ ಬರವಿಲ್ಲ. ಮಳೆಗಾಲ ಹೊರತುಪಡಿಸಿ ಇತರ ದಿನಗಳಲ್ಲಿ ತಡಿಯಂಡಮೋಳ್‌, ಇಗ್ಗುತ್ತಪ್ಪ ಬೆಟ್ಟ, ಮಲ್ಮ ಬೆಟ್ಟ, ಪೇರೂರು ಬೆಟ್ಟಪ್ರಮುಖವಾದ ಶಿಖರಗಳು ಏರಬಹುದು. ಪ್ರತಿವರ್ಷ ಅಕ್ಟೋಬರ್‌ನಿಂದ ಆರಂಭಿಸಿ ಮೇ ವರೆಗೂ ಈ ಬೆಟ್ಟಗಳಲ್ಲಿ ಚಾರಣಿಗರ ಚಟುವಟಿಕೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಲಾಕ್‌ಡೌನ್‌ ಆದ ಬಳಿಕ ಇಲ್ಲಿ ಚಾರಣಿಗರ ಸುಳಿವಿಲ್ಲ. ನಾಲ್ಕುನಾಡಿನ ಶಿಖರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು ವಾತಾವರಣ ತಂಪಾಗಿದೆ..

ಕೊಡಗಿನ ಅತ್ಯಂತ ಎತ್ತರವಾದ ತಡಿಯಂಡಮೋಳ್‌ ಶಿಖರ ನಿಸರ್ಗಸೌಂದರ್ಯಕ್ಕೆ, ಚಾರಣದ ಸವಾಲುಗಳಿಗೆ ಪ್ರಸಿದ್ಧವಾದುದು. ರಾಜ್ಯದ ಹಲವು ಭಾಗಗಳಿಂದ, ಹೊರರಾಜ್ಯ, ವಿದೇಶಗಳಿಂದ ಅಧಿಕ ಸಂಖ್ಯೆಯ ಚಾರಣಾಸಕ್ತರು ಇಲ್ಲಿಗೆ ಬರುತ್ತಿದ್ದರು. ಕಕ್ಕಬ್ಬೆ ಬಳಿಯ ಯವಕಪಾಡಿ ಗ್ರಾಮದಿಂದ ನಾಲ್ಕುನಾಡು ಅರಮನೆಯ ಮಾರ್ಗವಾಗಿ 8 ಕಿ.ಮೀ. ಎತ್ತರಕ್ಕೆ ಚಾರಣ ಕೈಗೊಂಡರೆ ತಡಿಯಂಡಮೋಳ್‌ ಶಿಖರವನ್ನು ತಲುಪಬಹುದು. ತಡಿಯಂಡಮೋಳ್‌ ಶಿಖರವು ಮಡಿಕೇರಿಯಿಂದ 48 ಕಿ.ಮೀ.ದೂರದಲ್ಲಿದೆ.

ಬಸ್‌ಗಳಲ್ಲಿ 20 ಜನ ಮಾತ್ರ, ಹೀಗಿದೆ KSRTC, BMTC ಹೊಸ ರೂಲ್ಸ್..!

ಶಿಖರದ ಎತ್ತರ 1717ಮೀ. ಶಿಖರದ ಮೇಲ್ಮಟ್ಟವನ್ನು ಸುಮಾರು 10 ಕಿ.ಮೀ. ಸಾಗಿದರೆ ತಲುಪಬಹುದು. ಬೋಳು ಬೆಟ್ಟಗಳ ಏರುಹಾದಿಯಲ್ಲಿ ಸಾಗಿ ಶಿಖರವನ್ನೇರಿ ನಿಂತು ನೋಡಿದಾಗ ಅದ್ಭುತ ಪ್ರಕೃತಿ ಸೌಂದರ್ಯ ಚಾರಣಿಗರ ಆಯಾಸವನ್ನು ಮರೆಸುತ್ತದೆ. ದೂರದ ಸಮುದ್ರತೀರ, ಸುತ್ತಲಿನ ಮನಮೋಹಕ ನಿಸರ್ಗಸೌಂದರ್ಯ, ದೃಷ್ಟಿಗೆ ನಿಲುಕದಷ್ಟುಆಳ, ಅಗಲವಾದ ಹಸಿರು ಪರ್ವತ ಶ್ರೇಣಿಗಳು, ಎತ್ತರ ತಗ್ಗಿನ ರುದ್ರರಮಣೀಯ ದೃಶ್ಯಗಳು ಮನಸೆಳೆಯುತ್ತವೆ. ಇದೀಗ ಕಕ್ಕಬ್ಬೆ ವ್ಯಾಪ್ತಿಯ ರೆಸಾರ್ಟ್‌ಗಳು, ಹೋಂ ಸ್ಟೇಗಳು ಬಂದ್‌ ಆಗಿದ್ದು ಚಾರಣಿಗರಿಂದ ತಡಿಯಂಡಮೋಳ್‌ ದೂರವೇ ಉಳಿದಿದೆ.

ಕೊಳಚೆ ಪ್ರದೇಶ ಸಮಸ್ಯೆ ಅಧ್ಯಯನಕ್ಕೆ ಸಮಿತಿ ರಚನೆ; ಸಚಿವ ಈಶ್ವರಪ್ಪ

ಇಗ್ಗುತ್ತಪ್ಪ ಬೆಟ್ಟ,ಮಲ್ಮ ಬೆಟ್ಟಗಳು ಧಾರ್ಮಿಕ ಮಹತ್ವವನ್ನು ಪಡೆದುಕೊಂಡಿವೆ. ಹಬ್ಬ, ಹರಿದಿನಗಳು ಸ್ಥಗಿತಗೊಂಡಿರುವುದರಿಂದ ಸ್ಥಳೀಯರು, ಭಕ್ತರು ಅತ್ತ ಹೆಜ್ಜೆ ಹಾಕುತ್ತಿಲ್ಲ. ಎಲ್ಲ ಶಿಖರಗಳು ಪ್ಲಾಸ್ಟಿಕ್‌, ಬಾಟಲಿ ಮತ್ತಿತರ ತ್ಯಾಜ್ಯಗಳಿಂದ ಮುಕ್ತವಾಗಿ ಸ್ವಚ್ಛವಾಗಿವೆ.

Latest Videos
Follow Us:
Download App:
  • android
  • ios