Asianet Suvarna News Asianet Suvarna News

ಜಿಲ್ಲೆಯಲ್ಲಿ ಸ್ಥಾಯಿ ಸಮಿತಿಗಳ ರಚನೆಗೆ ಗ್ರಹಣ

  •  ಪೌರಾಡಳಿತ ಅಧಿನಿಯಮದಂತೆ ರಚನೆ ಆಗಬೇಕಿದ್ದ ಸ್ಥಾಯಿ ಸಮಿತಿಗಳಿಗೆ ಗ್ರಹಣ 
  •  ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ಆಗದಿರುವುದು ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ
No standing committee  in chikkaballapur Zp snr
Author
Bengaluru, First Published Aug 18, 2021, 2:32 PM IST

 ಚಿಕ್ಕಬಳ್ಳಾಪುರ (ಆ.18):  ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೊಂಡು ವರ್ಷಗಳೆ ಕಳೆಯುತ್ತಿದ್ದರೂ ಪೌರಾಡಳಿತ ಅಧಿನಿಯಮದಂತೆ ರಚನೆ ಆಗಬೇಕಿದ್ದ ಸ್ಥಾಯಿ ಸಮಿತಿಗಳಿಗೆ ಗ್ರಹಣ ಬಡಿದಿದೆ.

ಹೌದು, ಅಧಿಕಾರ ವಿಕೇಂದ್ರೀಕರಣದ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸುಗಮವಾಗಿ ಶರವೇಗದಲ್ಲಿ ಸಾಗಬೇಕು, ಅಭಿವೃದ್ದಿ ಕಾಮಗಾರಿಗಳ ಮೇಲೆ ನಿಗಾ ಇರಬೇಕು, ಅಧ್ಯಕ್ಷ, ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕೌನ್ಸಿಲ್‌ ಸಭೆಗಳು ನಡೆಯಬೇಕೆಂಬ ಮಹತ್ವಕಾಂಕ್ಷೆ ಹೊತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾಯಿ ಸಮಿತಿಗಳ ರಚನೆಗೆ ಆಗುತ್ತವೆ. ಆದರೆ ಅಧಿಕಾರಿಗಳ ಮೌನದಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಿತಿಗಳ ರಚನೆಗೆ ಮೀನಮೇಷ ಎಣಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸ್ಥಾಯಿ ಸಮಿತಿಗಳ ರಚನೆ ಆಗಿಲ್ಲ

ನಗರಸಭೆ, ಪುರಸಭೆ ಹಾಗು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದ ಬೆನ್ನಲೇ ವಿರೋಧ ಪಕ್ಷಗಳ ಸದಸ್ಯರನ್ನು ಒಳಗೊಂಡಂತೆ ಸ್ಥಾಯಿ ಸಮಿತಿ ಕೂಡ ರಚನೆ ಆಗುತ್ತದೆ. ಅಧ್ಯಕ್ಷ, ಉಪಾಧ್ಯಕ್ಷರನ್ನು ಹೊರತುಪಡಿಸಿ ಸ್ಥಾಯಿ ಸಮಿತಿಗೆ ರಚನೆಗೊಳ್ಳುವ 8 , 9 ಮಂದಿ ಸದಸ್ಯರು ಸೇರಿ ಅಧ್ಯಕ್ಷರನ್ನಾಗಿ ಸಮಿತಿಗೆ ನೇಮಕ ಮಾಡಲಾಗುತ್ತದೆ.

ಬ್ಯಾನರ್‌ ಬದಲಾಗಿಲ್ಲ : ಇನ್ನೂ ಯಡಿಯೂರಪ್ಪನವರೇ ಸಿಎಂ

ಆದರೆ ಜಿಲ್ಲೆಯ ಜಿಲ್ಲಾ ಕೇಂದ್ರದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ಆಗದಿರುವುದು ಸಾಕಷ್ಟುಚರ್ಚೆಗೆ ಗ್ರಾಸವಾಗಿದ್ದು ಜೊತೆಗೆ ಆಡಳಿತರೂಢ ಸದಸ್ಯರಲ್ಲಿಯು ತೀವ್ರ ಅಸಮಾಧಾನಕ್ಕೆ ಈ ವಿಚಾರ ಕಾರಣವಾಗಿದೆ.

ಪ್ರತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾಯಿ ಸಮಿತಿ ಹಾಗೂ ಅಶ್ರಯ ಸಮಿತಿ ರಚನೆಗೊಳ್ಳುತ್ತದೆ. ಸ್ಥಾಯಿ ಸಮಿತಿಗೆ ನಗರಸಭಾ ಸದಸ್ಯರನ್ನು ಒಮ್ಮತವಾಗಿ ಆಯ್ಕೆ ಮಾಡಲಾಗುತ್ತದೆ. ಅಶ್ರಯ ಸಮಿತಿಗೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಲಿದ್ದು ಸರ್ಕಾರದಿಂದ ಕೆಲ ನಾಮ ನಿರ್ದೇಶಿತ ಸದಸ್ಯರನ್ನು ಅಶ್ರಯ ಸಮಿತಿಗೆ ನೇಮಕ ಮಾಡಲಾಗುತ್ತದೆ.

ಸಮಿತಿ ರಚನೆಗೆ ಹಿಂದೇಟು

ಆದರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಇರುತ್ತದೆ. ಆದರೆ ಸ್ಥಾಯಿ ಸಮಿತಿ ರಚನೆಗೆ ಸ್ಥಳೀಯ ನಗರಸಭೆಗಳು ಹಿಂದೇಟು ಹಾಕುತ್ತಿರುವುದು ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ. ಅದರಲ್ಲೂ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ ವರ್ಷ ಕಳೆದರೂ ಸ್ಥಾಯಿ ಸಮಿತಿ ರಚನೆ ಏಕೆ ಮಾಡುತ್ತಿಲ್ಲ ಎಂಬುದು ನಗರಸಭಾ ಸದಸ್ಯರಿಗೆ ಯಕ್ಷಪ್ರಶ್ನೆ ಆಗಿದೆ.

ಈ ಬಗ್ಗೆ ಅಧಿಕಾರಿಗಳು ಮೌನ ವಹಿಸಿರುವುದು ಸಾಕಷ್ಟುಟೀಕೆಗೆ ಗುರಿಯಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಸಾರ್ವಜನಿಕ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ, ಉಸ್ತುವಾರಿ ಸೇರಿದಂತೆ ಹಲವು ಕ್ರಿಯಾ ಯೋಜನೆಗಳ ತಯಾರಿಯಲ್ಲಿಯೂ ಸ್ಥಾಯಿ ಸಮಿತಿ ಹೆಚ್ಚು ಪ್ರಾಮುಖ್ಯ ಪಡೆದಿದ್ದರೂ ಅಧಿಕಾರಿಗಳು ಆದೇಕೋ ಸಮಿತಿಗಳ ರಚನೆಗೆ ಮುಂದಾಗದಿರುವುದು ಅಧಿಕಾರ ವಂಚಿತ ನಗರಸಭಾ ಸದಸ್ಯರ ಕಣ್ಣು ಕೆಂಪಾಗಿಸಿದೆ.

ಜಿಲ್ಲೆಯ ಚಿಂತಾಮಣಿ ನಗರಸಭೆ, ಬಾಗೇಪಲ್ಲಿ ಪುರಸಭೆಯಲ್ಲಿ ಈಗಾಗಲೇ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆದಿದೆ. ಉಳಿದಂತೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು ನಗರಸಭೆಗಳಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಈ ಬಗ್ಗೆ ಶೀಘ್ರ ನೇಮಕ ಮಾಡುವಂತೆ ಪೌರಾಯುಕ್ತರಿಗೆ ಪತ್ರ ಬರೆದು ಸೂಚಿಸುತ್ತೇನೆ.

ಎಂ.ರೇಣುಕಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು.

ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದು ವರ್ಷ ಕಳೆಯುತ್ತಿದೆ. ಇದುವರೆಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡಿಲ್ಲ. ಅಧಿಕಾರ ಹಂಚಿಕೆ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಸ್ಥಾಯಿ ಸಮಿತಿ ರಚನೆ ಮಾಡುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಲಾಗಿದೆ.

ಹೆಸರು ಹೇಳಲು ಇಚ್ಛಿಸದ ನಗರಸಭಾ ಸದಸ್ಯ ಚಿಕ್ಕಬಳ್ಳಾಪುರ.

Follow Us:
Download App:
  • android
  • ios