ತುಮಕೂರು(ಫೆ.01): ಪಳಗಿದ ರಾಜಕಾರಣಿಯಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರನ್ನು ಯಾರೂ ಆಟ ಆಡಿಸಲು ಸಾಧ್ಯವಿಲ್ಲ. ಅವರೇ ಎಲ್ಲರನ್ನೂ ಆಟ ಆಡಿಸುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾರೂ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರನ್ನೂ ಆಟ ಆಡಿಸುವ ಸಾಮರ್ಥ್ಯ ಇರುವ ರಾಜಕಾರಣಿ ಯಡಿಯೂರಪ್ಪ. ಪಕ್ಷ ಕೆಲವೊಂದು ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳುತ್ತದೆ. ಬಿಜೆಪಿ ಹೈಕಮಾಂಡ್‌ ಬ್ಯುಸಿಯಾಗಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಸ್ವಲ್ಪ ವಿಳಂಬವಾಗಿದೆಯಷ್ಟೆ ಎಂದಿದ್ದಾರೆ.

ಆಪರೇಷನ್ ಕಮಲದ ಬಗ್ಗೆ ಪುಸ್ತಕ ಬರೀತಾರಂತೆ ಹಳ್ಳಿ ಹಕ್ಕಿ

ವೈದ್ಯರು, ಆಪರೇಷನ್‌ ಮಾಡುವಾಗ ಬಿಪಿ, ಶುಗರ್‌ ನಿಯಂತ್ರಣಕ್ಕೆ ತರುತ್ತಾರೆ. ಇಲ್ಲದೇ ಇದ್ದರೆ ಆಪರೇಷನ್‌ ಯಶಸ್ವಿಯಾಗಿ ರೋಗಿ ಸಾವಿಗೀಡಾಗಬಹುದು. ಹೀಗಾಗಿ ಯೋಚನೆ ಮಾಡಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ನುಡಿದರು.