ಇಂಡಿ: ಶತಮಾನ ಕಂಡ ಸರ್ಕಾರಿ ಶಾಲೆಗಿಲ್ಲ ಮೂಲ ಸೌಕರ್ಯ

1991 ರಲ್ಲಿ ಆರಂಭವಾದ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದ ಸರ್ಕಾರಿ ಶಾಲೆ ಶತಮಾನ ದಾಟಿದರೂ ಸೌಕರ್ಯ ಸಿಕ್ಕಿಲ್ಲ| 8 ಕೋಣೆಗಳಿದ್ದು, ಅದರಲ್ಲಿ 3 ಕೋಣೆಗಳ ಛಾವಣಿ ಶಿಥಿಲ| ಕೋಣೆಗಳು ಕೊರತೆಯಿಂದ ಮಕ್ಕಳ ಪಾಠ ಬೊಧನೆಗೆ ತೊಂದರೆ|

No Infrastructure in Government School in Indi in Vijayapura District

ಖಾಜು ಸಿಂಗೆಗೋಳ 

ಇಂಡಿ(ಜ.19): ಪತ್ರಾಸ್ ಶೆಡ್ಡಿನಲ್ಲೇ ಬಿಸಿಯೂಟ ಅಡುಗೆ ತಯಾರಿ, 8 ಕೋಣೆಗಳಲ್ಲಿ 4 ಕೋಣೆಗಳ ಛಾವಣಿ ಶಿಥಿಲ, ಶಿಥಿಲಗೊಂಡ ಕೋಣೆಯಲ್ಲಿಯೇ ನಲಿ, ಕಲಿ ತರಗತಿ, ಗ್ರಂಥಾಲಯ, ಗಣಕಯಂತ್ರ. ಗ್ರಾಮಸ್ಥರು ನೀಡಿರುವ ದೇಣಿಗೆಯಲ್ಲೇ ಅಂದಗೊಂಡಿರುವ ಶಾಲಾ ಆವರಣ, ಗೋಡೆ ಬರಹಗಳು. 1911ರಲ್ಲಿ ನಿರ್ಮಾಣವಾಗಿರುವ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ದುಸ್ಥಿತಿ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಶಾಲೆ ಆರಂಭವಾಗಿ ಶತಮಾನ ದಾಟಿದರೂ ಸರಿಯಾಗಿ ಸೌಕರ್ಯ ಸಿಗದೆ ನರಳಾಡುತ್ತಿದ್ದು, ಸೌಕರ್ಯ ಕಲ್ಪಿ ಸಬೇಕೆಂಬ ಆಗ್ರಹ ಗ್ರಾಮಸ್ಥರಿಂದ ಕೇಳಿಬಂದಿದೆ. 1 ರಿಂದ 7 ನೇ ತರಗತಿಯವರಿಗೆ ಶಿಕ್ಷಣ ನೀಡಲಾಗುತ್ತಿದೆ. ಶಾಲೆ ಅಭಿವೃದ್ಧಿ ಕಂಡಿಲ್ಲವಾದರೂ, ಮಕ್ಕಳ ಸಂಖ್ಯೆಗೇನು ಕೊರತೆ ಇಲ್ಲ. ಒಟ್ಟು 397 ಮಕ್ಕಳು ವಿವಿಧ ತರಗತಿಯಲ್ಲಿ ಪ್ರವೇಶ ಪಡೆದಿದ್ದಾರೆ. ಇಷ್ಟು ಮಕ್ಕಳಿಗೆ ಕೇವಲ 5 ಕೋಣೆಗಳಿವೆ. ಅವುಗಳ ಗೋಡೆಗಳು ಬಿರುಕು ಬಿಟ್ಟಿವೆ. ಮುಖ್ಯ ಶಿಕ್ಷಕ ಸೇರಿ ಎಲ್ಲ ತರಗತಿಗೆ ಶಿಕ್ಷಕರು ಇದ್ದು, ಶಿಕ್ಷಕರಿಗೂ- ಮಕ್ಕಳ ಸಂಖ್ಯೆಗೂ ಕೊರತೆ ಇಲ್ಲ. ಕೊರತೆ ಇದ್ದಿರುವುದು ಕೋಣೆಗಳು ಮತ್ತು ಮೂಲಭೂತ ಸೌಕರ್ಯಕ್ಕೆ ಮಾತ್ರ. 

ಬಿಸಿಯೂಟ ಕೋಣೆ ಇಲ್ಲ: 

ಪ್ರತಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅನ್ನಪೂಣೇಶ್ವರಿ ಕೋಣೆಗಳು ಇರುತ್ತವೆ. ಇಲ್ಲಿ ಮಾತ್ರ ಕೋಣೆ ಇಲ್ಲ. ಪತ್ರಾಸ್ ಶೆಡ್ಡಿನಲ್ಲೇ ಬಿಸಿಯೂಟ ತಯಾರಿ ಸಲಾಗುತ್ತದೆ. ಅದಕ್ಕೆ ಗಾಳಿ ಬರುವಂತೆ ಕಿಟಕಿಗಳೂ ಇಲ್ಲ. ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾಗಿ ಹಲವು ವರ್ಷಗಳೇ ಕಳೆದಿವೆ. ಆದರೂ ಇಲ್ಲಿ ಬಿಸಿಯೂಟ ತಯಾರಿಸುವ ಕೋಣೆ ಇಲ್ಲದಿರುವುದು ದುರ್ದೈದ. ಈ ಯೋಜನೆಯಡಿ ಅನುದಾನ ಬರುತ್ತಿದ್ದರೂ ಅಧಿಕಾರಿಗಳು ಮಾತ್ರ ಕೋಣೆ ನಿರ್ಮಾಣಕ್ಕೆ ನೀಡಿಲ್ಲ ಎಂಬ ಆರೋಪಗಳಿವೆ. 

ನಲಿ, ಕಲಿ ಕೋಣೆ ಶಿಥಿಲ: 

1 ರಿಂದ 3 ನೇ ತರಗತಿ ಮಕ್ಕಳಿಗೆ ಕೂಡ್ರಿಸಿ ಬೋಧಿಸುವುದರಿಂದ ಮಕ್ಕಳಿಗೆ ಪೂರಕ ಜ್ಞಾನ ದೊರೆಯುತ್ತದೆ ಎಂಬ ಸದುದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ನಲಿ, ಕಲಿ ಯೋಜ ನೆಯಡಿ ಮಕ್ಕಳಿಗೆ ಬೋಧಿಸಲು ಕೋಣೆಯ ಕೊರತೆ ಇದೆ. ಹೀಗಾಗಿ ಶಿಥಿಲಗೊಂಡಿರುವ ಕೋಣೆಯಲ್ಲೇ ಮಕ್ಕಳಿಗೆ ನಲಿ, ಕಲಿ ಪಾಠ ಬೋಧಿಸಲಾಗುತ್ತಿದೆ. ನಲಿಯುತ್ತ, ಕುಣಿಯುತ್ತ, ಓದುತ್ತ ಮೂರು ವರ್ಗದ ಮಕ್ಕಳೊಂದಿಗೆ ಬೆರೆತು ಶಿಕ್ಷಣದ ಪೂರಕ ಜ್ಞಾನ ಪಡೆ ದು ಕೊಳ್ಳಬೇಕಾದ ಮಕ್ಕಳು ಶಿಥಿಲಗೊಂಡ ಕೋಣೆ ಯಲ್ಲಿ ಭಯದಲ್ಲಿ ಪಾಠ ಆಲಿಸುವಂತಾಗಿದೆ. 

ಕೋಣೆಗಳ ಕೊರತೆ: 

ಶಾಲಾ ಆವರಣದಲ್ಲಿ ಒಟ್ಟು 8 ಕೋಣೆಗಳಿದ್ದು, ಅದರಲ್ಲಿ 3 ಕೋಣೆಗಳ ಛಾವಣಿ ಶಿಥಿಲಗೊಂಡು ಕಬ್ಬಿಣದ ರಾಡುಗಳು ಕಾಣಿಸುತ್ತಿವೆ. ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ಪ್ರತಿ ವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳ ಸಂಖ್ಯೆ ಇದ್ದರೂ ಕೋಣೆಗಳ ಕೊರತೆಯಿಂದ ಮಕ್ಕಳ ಪಾಠ, ಪ್ರವಚನಕ್ಕೆ ತೊಂದರೆಯಾಗಿದೆ. ಗ್ರಾಮಸ್ಥರ ಸಹಕಾರ: ಸರ್ಕಾರದ ಅನುದಾನ ಈ ಶಾಲೆ ಅಭಿವೃದ್ಧಿಗೆ ಲಭ್ಯ ಇಲ್ಲವಾದರೂ ಗ್ರಾಮಸ್ಥರು ಶಾಲಾ ಗೋಡೆ ಮೇಲೆ ರಾಷ್ಟ್ರ ನಾಯಕರ ಭಾವ ಚಿತ್ರ, ಧ್ವಜಕಂಬ ಕಟ್ಟಿ ಸೇರಿದಂತೆ ಇತರೆ ಕಾರ್ಯಗಳು ಮಾಡಲು ದೇಣಿಗೆ ನೀಡುತ್ತಿರುವುದು ಅಭಿನಂ ದಾ ರ್ಹ. ತಾಪಂ ಸದಸ್ಯ ಸಿದ್ದರಾಮ ತಳವಾರ ಶಾಲೆಯ ಗೇಟಿಗೆ ಬೋರ್ಡ್ ಮಾಡಿಸಿದ್ದಾರೆ. ಹೀಗೆ ಗ್ರಾ ಮಸ್ಥರ ಸಹಕಾರದಿಂದ ಇಲ್ಲಿನ ಶಿಕ್ಷಕರು ಶಾಲೆಗೆ ಬೇ ಕಾದ ಮೂಲಭೂತ ಸೌಲಭ್ಯದ ಕಾರ್ಯ ಮಾಡುತ್ತಿದ್ದಾರೆ.

ಇಂಡಿ ತಾಲೂಕಿನ ಶತಮಾನ ದಾಡಿದ ಹಲವು ಶಾಲೆಗಳ ಕೋಣೆಗಳು ಶಿಥಿಲಗೊಂಡಿರುವ ಬಗ್ಗೆ ಗಮನಕ್ಕೆ ಬಂದಿದೆ. ತಾಲೂಕಿನಲ್ಲಿ ಅತಿ ತುರ್ತಾಗಿ ಕೋಣೆಗಳ ದುರಸ್ತಿ ಮಾಡಿಸಬೇಕಾಗಿರುವ ಪಟ್ಟಿಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೋಣೆಗಳ ದುರಸ್ತಿ, ನಿರ್ಮಾಣಕ್ಕೆ ಇಲಾಖೆಗೆ ಅನುದಾನ ಲಭ್ಯ ಇರುವುದಿಲ್ಲ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಶಾಲಾ ಕೋಣೆಗಳ ದುರಸ್ತಿಗೆ 50 ಲಕ್ಷ ಅನುದಾನ ನೀಡಿದ್ದು, ತುರ್ತಾಗಿ, ಅವಶ್ಯಕ ಇರುವ ಶಾಲೆಗಳ ಕೋಣೆಗಳ ದುರಸ್ತಿಗೆ ಬಳಸಿಕೊಳ್ಳಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ. ಬಂಡಗಾರ ಅವರು ಹೇಳಿದ್ದಾರೆ. 

ಇಂಡಿ ನಾದ ಕೆಡಿ ಗ್ರಾಮದಲ್ಲಿರುವ ಕನ್ನಡ ಶಾಲೆಗೆ ಶತಮಾನ ದಾಟಿದೆ. ಕೋಣೆಗಳ ಕೊರತೆ ಇದೆ. ಮಕ್ಕಳ ಸಂಖ್ಯೆ, ಶಿಕ್ಷಕ ಕೊರತೆ ಇರುವುದಿಲ್ಲ. ಗ್ರಾಮಸ್ಥರ ಸಹಕಾರದಿಂದ ಇದ್ದಷ್ಟರಲ್ಲಿಯೇ ಶಾಲೆ ಅಭಿವೃದ್ಧಿಪಡಿಸಲಾಗುತ್ತದೆ. ಕೋಣೆಗಳು ಕೊರತೆಯಿಂದ ಮಕ್ಕಳ ಪಾಠ ಬೊಧನೆಗೆ ತೊಂದರೆಯಾಗಿದೆ ಎಂದು ನಾದ ಕೆಡಿ ಸಹಿಪ್ರಾ ಶಾಲೆಯ ಮುಖ್ಯಶಿಕ್ಷಕ ಆರ್.ಡಿ.ದಶವಂತ ತಿಳಿಸಿದ್ದಾರೆ.

ನಾದ ಕೆಡಿ ಗ್ರಾಮದಲ್ಲಿನ ಶಾಲೆಯಲ್ಲಿ ಬಿಸಿಯೂಟ ಕೋಣೆ ಪರಿಶೀಲಿಸಿದ್ದೇನೆ. ಈ ಶಾಲೆಯಲ್ಲಿ 2007-08 ರಲ್ಲಿ ಗ್ರಾಪಂ 1.50 ಲಕ್ಷ ಅನುದಾನದಲ್ಲಿ ಅಡುಗೆ ಕೋಣೆ ನಿರ್ಮಿಸಿದ್ದಾರೆ. 2012-13 ನೇ ಸಾಲಿನಿಂದ ಅಡು ಗೆ ಕೋಣೆ ನಿರ್ಮಾಣಕ್ಕೆ ಅನುದಾನ ಬಂದಿರುವುದಿಲ್ಲ. ಈ ಶಾಲೆಯ ಅಡುಗೆ ಕೋಣೆ ನಿರ್ಮಾಣ ವಿಶೇಷ ಪ್ರಕರಣವೆಂದು ಶಾಲೆಯ ಶಿಕ್ಷಕರಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಡುಗೆ ಕೋಣೆ ನಿರ್ಮಾಣಕ್ಕೆ ಅನುಮತಿ ಇದೆ. ಗ್ರಾಪಂಗೆ ಪತ್ರ ಬರೆಯಲಾಗುತ್ತದೆ ಎಂದು ಬಿಸಿಯೂಟ ಯೋಜನೆ ಅಧಿಕಾರಿ ಮಲ್ಲಿಜಾರ್ಜುನ ಯರಗುಡ್ಡಿ ತಿಳಿಸಿದ್ದಾರೆ.

ಅಕ್ಷರ ದಾಸೋಹ ಯೋಜನೆ ಯಡಿ ಅಡುಗೆ ಕೋಣೆ ನಿರ್ಮಾಣವಾಗಬೇಕಿತ್ತು. ಎರಡು ದಿನದಲ್ಲಿ ಅಕ್ಷರ ದಾಸೋಹ ಅಧಿಕಾರಿಯನ್ನು ಶಾಲೆಗೆ ಕಳುಹಿಸಿ ವರದಿ ಸಲ್ಲಿಸಲು ಸೂಚಿಸಿ, ಅಡುಗೆ ಕೋಣೆ ನಿರ್ಮಾಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ನರೇಗಾದಲ್ಲಿ ಬಿಸಿಯೂಟ ಕೋಣೆ ನಿರ್ಮಿಸಲು ಬರುವು ದಿಲ್ಲ. ಕಾಂಪೌಂಡ್ ನಿರ್ಮಿಸಬಹುದು. ಪರಿ ಶೀಲಿಸಿ, ನರೇಗಾದಲ್ಲಿ ಮಾಡಲು ಬಂದರೆ ಖಂಡಿತ ಅಡುಗೆ ಕೋಣೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಂಡಿ ತಾಪಂ ಇಒ ಡಾ. ವಿಜಯಕುಮಾರ ಆಜೂರ ತಿಳಿಸಿದ್ದಾರೆ.(ಚಿತ್ರ: ಸಾಂದರ್ಭಿಕ ಚಿತ್ರ)
 

Latest Videos
Follow Us:
Download App:
  • android
  • ios