ಪಾಂಡವಪುರ (ಆ.15): ಮೇಲುಕೋಟೆ ಚಲುವನಾರಾಯಣಸ್ವಾಮಿ ಮತ್ತು ಶ್ರೀಯೋಗನರಸಿಂಹಸ್ವಾಮಿ ದೇವಾಲಯಗಳಲ್ಲಿ ಶ್ರಾವಣ ಶನಿವಾರ ಮತ್ತು ಭಾನುವಾರಗಳಂದು ದೇವರ ದರ್ಶನ ನಿರ್ಭಂದಿಸಿರುವದರಿಂದ ಸಾರ್ವಜನಿಕರು ದೇವರ ದರ್ಶನಕ್ಕೆ ಬಾರದಂತೆ ತಹಸೀಲ್ದಾರ್‌ ಪ್ರಮೋದ್‌ ಪಾಟೀಲ್ ಮನವಿ ಮಾಡಿದ್ದಾರೆ.

ಭಯಬೇಡ, ಕೊರೋನಾ ಗಾಳಿಯಲ್ಲಿ ಹರಡೋದು ಅಷ್ಟು ಸುಲಭವಲ್ಲ....

 ಈ ದೇವಾಲಯಗಳಲ್ಲಿ ಶ್ರಾವಣ ಶನಿವಾರ ಮತ್ತು ಭಾನುವಾಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಕೋವಿಡ್‌ -19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ಸರ್ಕಾರದ ಮಾರ್ಗಸೂಚಿಗಳನ್ವಯ ಸಾಮಾಜಿಕ ಅಂತರ ಕಾಯ್ದೆಕೊಂಡು ದರ್ಶನ ವ್ಯವಸ್ಥೆ ಮಾಡುವುದು ಕಷ್ಟಕರವಾಗಿದೆ ಎಂದರು.

ಶುಕ್ರವಾರ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ಪತ್ತೆ..!..

ಆದ್ದರಿಂದ ಭಕ್ತರು ಬಾರದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದ್ದರಿಂದ ಆ.15 ರ ಶನಿವಾರ ಆ.16 ರ ಭಾನುವಾರದಂದು ಸಹ ದೇವಾಲಯಗಳಲ್ಲಿ ಭಕ್ತರು ಮೇಲುಕೋಟೆಗೆ ಬಾರದಂತೆ ತಹಸೀಲ್ದಾರ್‌ ಪ್ರಮೋದ್‌ ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.