ಬುಧವಾರ ಮತ್ತೆ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು

ಹಾಸನ(ಅ.24): ಸೂರ್ಯಗ್ರಹಣ ನಿಮಿತ್ತ ನಾಳೆ(ಮಂಗಳವಾರ) ಹಾಸನಾಂಬೆಯ ದರ್ಶನ ಇರುವುದಿಲ್ಲ. ಬುಧವಾರ ಮತ್ತೆ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಗುರುವಾರ ಹಾಸನಾಂಬೆಯ ದರ್ಶನಕ್ಕೆ ಕೊನೆಯ ದಿನವಾಗಿದ್ದು, ಅಂದು ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ದೇವಿಯ ಗರ್ಭಗುಡಿಗೆ ಬೀಗ ಮುದ್ರೆ ಹಾಕಲಾಗುವುದು. 

ನಿನ್ನೆ(ಭಾನುವಾರ) ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸೇರಿ ಸಾವಿರಾರು ಭಕ್ತರು ಹಾಸನಾಂಬ ದರ್ಶನ ಪಡೆದರು.

ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತ ಹೃದಯಾಘಾತದಿಂದ ಸಾವು..!

ಅವರು ಭಾನುವಾರ ಮಧ್ಯಾಹ್ನ ದೇವಾಲಯಕ್ಕೆ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದರು. ಮೊದಲು ಅಮ್ಮನವರ ದರ್ಶನ ಮಾಡಿ, ನಂತರ ದರ್ಬಾರ್‌ ಗಣಪತಿ ಹಾಗೂ ಶ್ರೀಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಜಿಲ್ಲಾಡಳಿತದಿಂದ ಸನ್ಮಾನಿಸಿ ಅವರಿಗೆ ಪ್ರಸಾದ ನೀಡಲಾಯಿತು.