ದಾವಣಗೆರೆ [ಮಾ.13]: ಕೊರೋನಾ ಆತಂಕದಿಂದ ದಾವಣಗೆರೆ ಜಿಲ್ಲಾಡಳಿತ ನಿರಾಳವಾಗಿದೆ.

ವಿದೇಶಕ್ಕೆ ತೆರಳಿ ವಾಪಸಾಗಿದ್ದ 12 ಮಂದಿಯಲ್ಲಿ ಕೊರೋನಾ ಸೋಂಕು ನೆಗೆಟಿವ್ ಇದ್ದು, ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. 

14 ಹಾಗೂ 28 ದಿನಗಳ ಅವಧಿಯ ತಪಾಸಣೆ ಮುಗಿದಿದ್ದು, 12 ಮಂದಿಗೂ ಯಾವುದೇ ಸೋಂಕಿಲ್ಲ ಎನ್ನುವುದು ದೃಢಪಟ್ಟಿದೆ. 

ಬೆಂಗಳೂರಲ್ಲಿ 5ನೇ ಕೊರೋನಾ ಕೇಸ್ : ಗೂಗಲ್ ಉದ್ಯೋಗಿಗೆ ಸೋಂಕು...

ಕಳೆದ 28 ದಿನಗಳಿಂದಲೂ ಜಿಲ್ಲಾಡಳಿತ 12 ಮಂದಿಯ ಮೇಲೆ ತೀವ್ರ ನಿಗಾ ವಹಿಸಿತ್ತು. ಇದೀಗ ವರದಿ ನೆಗೆಟಿವ್ ಬಂದಿರುವುದು ಆತಂಕ ದೂರ ಮಾಡಿದೆ. 

 ಸದ್ಯ ದುಬೈಗೆ ತೆರಳಿ ಮರಳಿದವರ ಮೇಲೆ ಇದೀಗ ತೀವ್ರ ನಿಗಾ ವಹಿಸಿದ್ದು, ತಪಾಸಣೆ ಮುಂದುವರಿಸಲಾಗಿದೆ. ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಪ್ರತ್ಯೇಕ ಬೆಡ್ ಕಾಯ್ದಿರಿಸಲು ಸೂಚನೆ ನೀಡಲಾಗಿದೆ. 

ಅಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಸೋಂಕು ಬಗ್ಗೆ ಅಪಪ್ರಚಾರ ಸುಳ್ಳು ಮಾಹಿತಿ ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.