Asianet Suvarna News Asianet Suvarna News

Mandya politics: ಕೈ ನಾಯಕರ ಜೊತೆ ಬಿಜೆಪಿ ಸಚಿವರ ಸಂಪರ್ಕ : ಫೋನ್ ಕಾಲ್ ತೆಗೆಸಿ ಎಂದ ಮುಖಂಡ

  • ಕೈ ನಾಯಕರ ಜೊತೆ ಬಿಜೆಪಿ ಸಚಿವರ ಸಂಪರ್ಕ : ಫೋನ್ ಕಾಲ್ ತೆಗೆಸಿ - ಮುಖಂಡ
  •  ಯಾರು ಹೇಗೆ ಮತ ಕೊಟ್ಟರೆನ್ನುವುದು ನಮಗೇ ಗೊತ್ತಿಲ್ಲ
  •   ಜೆಡಿಎಸ್‌ ಶಾಸಕರು ಪುಕ್ಕಟೆಯಾಗಿ ಚುನಾವಣೆ ಮಾಡಿರಬಹುದು
No Contact with Minister Narayana Gowda Says Congress Leader Cheluvaraya swamy snr
Author
Bengaluru, First Published Dec 26, 2021, 1:15 PM IST

ಮದ್ದೂರು (ಡಿ.26):  ವಿಧಾನ ಪರಿಷತ್‌ ಚುನಾವಣೆ (MLC Election) ಪೂರ್ವದಿಂದಲೂ ಸಚಿವ ನಾರಾಯಣ ಗೌಡರು (Narayana Gowda) ನನ್ನ ಸಂಪರ್ಕದಲ್ಲಿಲ್ಲ. ಒಂದೇ ಒಂದು ಫೋನ್‌ (Phone) ಕರೆಯನ್ನೂ ಮಾಡಿಲ್ಲ. ಬೇಕಿದ್ದರೆ ಕಾಲ್‌ ಲಿಸ್ಟ್‌ ತೆಗೆಸಿ ನೋಡಲಿ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ (Cheluvarayaswamy) ಹೇಳಿದರು. ಪಟ್ಟಣದ ಶಿವಪುರದಲ್ಲಿ ಕಾಂಗ್ರೆಸ್‌ (Congress) ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ವೀಕ್ಷಣೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು, ನಾರಾಯಣಗೌಡರು ನನ್ನ ಸಂಪರ್ಕದಲ್ಲೇ ಇಲ್ಲ. ನಾನು ಅವರಿಗೆ ಫೋನ್‌ ಮಾಡಿಲ್ಲ, ಅವರು ನನಗೆ ಫೋನ್‌ ಮಾಡಿಲ್ಲ ಎಂದ ಮೇಲೆ ಕಾಂಗ್ರೆಸ್‌ಗೆ ಬಿಜೆಪಿ (BJP) ಮತಗಳನ್ನು ಹಾಕಿಸುವಂತೆ ಕೇಳಲು ಹೇಗೆ ಸಾಧ್ಯ?. ಅನುಮಾನಗಳಿದ್ದರೆ ನನ್ನ ಫೋನ್‌ ಕಾಲ್‌ ಲಿಸ್ಟ್‌ ತೆಗೆದು ನೋಡಲಿ ಎಂದು ಸವಾಲು ಹಾಕಿದರು.

ದಿನೇಶ್‌ ಗೂಳಿಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ ಬಳಿಕ ನಮ್ಮನ್ನು ಚುನಾವಣೆಯಲ್ಲಿ (Election) ರಕ್ಷಣೆ ಮಾಡುವಂತೆ ಜನರ ಬಳಿ ಹೋದೆವು. ಆ ಸಂದರ್ಭದಲ್ಲಿ ರೈತಸಂಘ, ಬಿಜೆಪಿ (BJP), ಜೆಡಿಎಸ್‌ನವರು ಹೇಗೆ ಮತ ಕೊಟ್ರೋ ಗೊತ್ತಿಲ್ಲ. ಕಾಂಗ್ರೆಸ್‌ (Congress) ಅಭ್ಯರ್ಥಿಯನ್ನು ಗೆಲ್ಲಿಸಿ ಎಂಎಲ್‌ಸಿ ಮಾಡಿದ್ದಾರೆ. ಆದರೆ, ಬಿಜೆಪಿ (BJP) ಮತಗಳನ್ನು ಕಾಂಗ್ರೆಸ್‌ಗೆ ಹಾಕಿಸುವಂತೆ ಸಚಿವ ನಾರಾಯಣ ಗೌಡರನ್ನು ಕೇಳಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದಷ್ಟೇ ಹೇಳಿದರು.

ಹಣ ಬಲದಿಂದ ಕಾಂಗ್ರೆಸ್‌ ಚುನಾವಣೆಯಲ್ಲಿ ಜಯಗಳಿಸಿದೆ ಎಂಬ ಶಾಸಕ ಡಿ.ಸಿ.ತಮ್ಮಣ್ಣನವರ (DC Thammanna) ಆರೋಪಕ್ಕೆ ಪ್ರತಿಕ್ರಿಯಿಸಿ, ಹೌದು, ಚುನಾವಣೆಗೆ ಖರ್ಚು ಮಾಡಿದ ಹಣವೆಲ್ಲಾ ದಿನೇಶ್‌ ಅವರದ್ದೇ. ನಾವು ಸೋತಿದ್ದವರು. ನಮ್ಮ ಬಳಿ ಹಣವಿರಲಿಲ್ಲ. ದಿನೇಶ್‌ ಚುನಾವಣಾ ಖರ್ಚನ್ನು ವಹಿಸಿಕೊಂಡಿದ್ದರು. ಆದರೆ, ಜೆಡಿಎಸ್‌ನಲ್ಲಿ (JDS) ಎಲ್ಲ ಸುಭಿಕ್ಷವಾಗಿದ್ದರು. ಅಪ್ಪಾಜಿ ಗೌಡರಿಂದ ಶಾಸಕರು ಯಾರೂ ಹಣ ಖರ್ಚು ಮಾಡಿಸಲೇ ಇಲ್ಲ. ಹಣವನ್ನೂ (Money) ಅವರವರೇ ಹಾಕಿಕೊಂಡು ಚುನಾವಣೆ ಮಾಡಿದ್ದಾರೆ. ಪುಕ್ಕಟೆಯಾಗಿಯೂ ಮಾಡಿದ್ದಾರೋ ಏನೋ. ಅದೆಲ್ಲವೂ ಜನರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ನಾವು ಅವರ ಬಗ್ಗೆ ಎಲ್ಲಿಯೂ ದೂರಿಲ್ಲ. ಅವರನ್ನು ದೂರುವಷ್ಟು ಶಕ್ತರೂ ನಾವಲ್ಲ. ಅವರೆಲ್ಲಾ ದೊಡ್ಡವರು. ಅವರ ಬಗ್ಗೆ ನಾವು ಮಾತನಾಡುವ ಅವಶ್ಯಕತೆ ನನಗಿಲ್ಲ. ಚುನಾವಣೆಯಲ್ಲಿ (Election) ಅಪ್ಪಾಜಿ ಗೌಡ ಖರ್ಚು ಮಾಡಿದರೋ, ತಮ್ಮಣ್ಣ ಖರ್ಚು ಮಾಡಿದರೋ, ಪುಟ್ಟರಾಜು ಖರ್ಚು ಮಾಡಿದರೋ ಅದು ಅವರ ಪಕ್ಷದ ವಿಚಾರ. ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮಲ್ಲಿ ಹಣ ಖರ್ಚು ಮಾಡಿರಲಿಲ್ಲ. ಎಷ್ಟುಖರ್ಚು ಮಾಡಿದರೋ, ಏನೋ ಅದು ದಿನೇಶ್‌ಗೆ ಮಾತ್ರವೇ ಗೊತ್ತು ಎಂದರು.

Follow Us:
Download App:
  • android
  • ios