ಬೆಂಗಳೂರು [ಮಾ.18]:  ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಸರಬರಾಜು ಯೋಜನೆ 1ನೇ ಹಂತದ ತೊರೆಕಾಡನಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯ ಯಂತ್ರಗಾರಗಳಲ್ಲಿ ದುರಸ್ತಿಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾ.18ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಮಾಗಡಿ ರಸ್ತೆ, ಕದಿರೇನಹಳ್ಳಿ, ಮಿನಾಜ್‌ನಗರ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭನಗರ, ಆರ್‌.ಕೆ.ಲೇಔಟ್‌, ಚಿಕ್ಕಲ್ಲಸಂದ್ರ, ಹನುಮಗಿರಿನಗರ, ಮುನೇಶ್ವನಗರ, ಬೇಂದ್ರೆನಗರ, ಕುಮಾರಸ್ವಾಮಿ ಬಡಾವಣೆ 1 ಮತ್ತು 2ನೇ ಹಂತ, ಚಂದ್ರನಗರ, ಮಾರುತಿ ಬಡಾವಣೆ, ವಿಠ್ಠಲನಗರ, ಇಸ್ರೋ ಬಡಾವಣೆ, ಟೀಚ​ರ್‍ಸ್ ಕಾಲೋನಿ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಇಲಿಯಾಸ್‌ ನಗರ, ಪಿ.ಪಿ.ಬಡಾವಣೆ, ಉತ್ತರಹಳ್ಳಿ, ಎ.ಜಿ.ಎಸ್‌.ಬಡಾವಣೆ, ಸಾರ್ವಭೌಮನಗರ, ಸುಬ್ರಹ್ಮಣ್ಯಪುರ, ಬಿಎಚ್‌ಸಿಎಸ್‌ ಬಡಾವಣೆ, ಕೆನರಾ ಬ್ಯಾಂಕ್‌ಕಾಲೋನಿ, ಸುದ್ದಗುಂಟೆ ಪಾಳ್ಯ, ಮಾರುತಿನಗರ, ಭವಾನಿ ಬಡಾವಣೆ, ವೆಂಕಟೇಶ್ವರ ಬಡಾವಣೆ, ಬೃಂದಾವನ ಬಡಾವಣೆ, ಮಡಿವಾಳ, ಚಿನ್ನಮ್ಮ ಬಡಾವಣೆ, ಕೋರಮಂಗಲ 2,4,5,6,7 ಮತ್ತು 8ನೇ ಬ್ಲಾಕ್‌ನಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದೆ.

ನಗರದಲ್ಲಿ ಶೀಘ್ರ ಕಾವೇರಿ ನೀರಿನ ದರ ಏರಿಕೆ...

ಚಿಕ್ಕ ಆಡುಗೋಡಿ, ಸೇಂಟ್‌ ಜಾನ್‌ ಆಸ್ಪತ್ರೆ, ರಾಜೇಂದ್ರನಗರ, ಜಾನ್ಸನ್‌ ಮಾರುಕಟ್ಟೆ, ಶಾಂತಿನಗರ, ಎಂ.ಜಿ.ರಸ್ತೆ, ರಿಚ್ಮಂಡ್‌ ಟೌನ್‌, ಅಶೋಕನಗರ, ನೀಲಸಂದ್ರ, ಆಸ್ಟಿನ್‌ ಟೌನ್‌, ವಿವೇಕ್‌ನಗರ, ಈಜಿಪುರ, ದೊಮ್ಮಲೂರು, ದೊಮ್ಮಲೂರು ವಿಲೇಜ್‌, ಕೋಡಿಹಳ್ಳಿ, ಹಲಸೂರು, ಜೋಗುಪಾಳ್ಯ, ಕೇಂಬ್ರಿಡ್ಜ್‌ ಬಡಾವಣೆ, ಚಾಮರಾಜಪೇಟೆ, ಶ್ರೀನಗರ, ಬನಶಂಕರಿ 1ನೇಹಂತ, ಜಯನಗರ 4ನೇ ‘ಟಿ’ ಬ್ಲಾಕ್‌, ತಿಲಕ್‌ನಗರ, ಮಾಧವ ಪಾರ್ಕ್, ಹೊಂಬೇಗೌಡನಗರ, ಲಕ್ಕಸಂದ್ರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.