ರಾಯಚೂರು, (ಜೂನ್.09): ಕೊರೋನಾ ವೈರಸ್ ಉಲ್ಬಣದಿಂದ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ವಿದೇಶದಿಂದಲೂ ತುರ್ತು ಆಕ್ಸಿಜನ್ ಟ್ಯಾಂಕ್‌ಗಳನ್ನು ತರಿಸಿಕೊಳ್ಳಲಾಗಿದೆ. 

"

ಇದರ ನಡುವೆ ರಾಯಚೂರಿನಲ್ಲಿ ನೈಟ್ರೋಜನ್ ಉತ್ಪಾದಕ ಘಟಗಳನ್ನು ಪರಿವರ್ತಿಸಿ ಆಕ್ಸಿಜನ್ ಉತ್ಪಾದನೆ ಮಾಡಲಾಗಿದೆ. ನೈಟ್ರೋಜನ್ ಪ್ಲಾಂಟ್‌ನಿಂದ ಆಕ್ಸಿಜನ್ ಉತ್ಪಾದನೆ ಮಾಡುತ್ತಿರುವುದು ರಾಜ್ಯದಲ್ಲೇ ಮೊದಲು.

25ಲಕ್ಷ ವೆಚ್ಚದಲ್ಲಿ ನೈಟ್ರೋಜನ್ ಪ್ಲಾಂಟ್ ಈಗ ಆಕ್ಸಿಜನ್ ಪ್ಲಾಂಟ್ ಆಗಿ ಪರಿವರ್ತಿಸಲಾಗಿದ್ದು, ರಾಯಚೂರು ನಗರದ ನವೋದಯ ಆಸ್ಪತ್ರೆ ಆವರಣದಲ್ಲಿ ರಾಯಚೂರಿನ ಫಾರ್ಮಾ ಕಂಪನಿಯಿಂದ ಆಕ್ಸಿಜನ್ ಪ್ಲಾಂಟ್ ಆರಂಭಿಸಲಾಗಿದೆ.  ಆಕ್ಸಿಜನ್ ‌ಪ್ಲಾಂಟ್ ಆರಂಭದಿಂದ ನಿತ್ಯ 80ಕ್ಕೂ ಹೆಚ್ಚು ಸೋಂಕಿತರಿಗೆ ಅನುಕೂಲವಾಗಲಿದೆ.

ನೈಟ್ರೋಜನ್ ಘಟಕ ಪರಿವರ್ತಿಸಿ ಆಕ್ಸಿಜನ್ ಉತ್ಪಾದನೆ; ಪ್ರಗತಿ ಪರಿಶೀಲಿಸಿದ ಪ್ರಧಾನಿ ಮೋದಿ! 

ಒಂದು ದಿನಕ್ಕೆ 100 ಜಂಬೋ ಸಿಲಿಂಡರ್ ಆಕ್ಸಿಜನ್ ಉತ್ಪಾದನೆಯಾಗಲಿದ್ದು, ಉತ್ಪಾದನೆಗೊಂಡ ಆಕ್ಸಿಜನ್ ನೇರವಾಗಿ ಆಸ್ಪತ್ರೆಗೆ ರವಾನೆಯಾಗುತ್ತದೆ.

ಕೇಂದ್ರ ಸರ್ಕಾರದ ಪ್ಲಾನ್ ಇದೇ ಆಗಿತ್ತು
ಹೌದು...ದೇಶದಲ್ಲಿರುವ ಹಲವು ನೈಟ್ರೋಜನ್ ಉತ್ಪಾದಕ ಘಟಗಳನ್ನು ಪರಿವರ್ತಿಸಿ ಆಕ್ಸಿಜನ್ ಉತ್ಪಾದನೆ ಮಾಡಲು ಕೇಂದ್ರ ಪ್ರಧಾನಿ ಪ್ಲಾನ್ ಮಾಡಿತ್ತು ಅಲ್ಲದೇ ಸ್ವತಃ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ೀ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಕೂಡ ನಡೆಸಿದ್ದರು. ಇದೀಗ ಕೇಂದ್ರ ಸರ್ಕಾರ ಪ್ಲಾನ್‌ನಂತೆ ರಾಯಚೂರಿನಲ್ಲಿ ನೈಟ್ರೋಜನ್ ಘಟಕ ಹಾಗೂ ಅದನ್ನು ಪರಿವರ್ತಿಸಿ ಆಕ್ಸಿಜನ್ ಉತ್ಪಾದಕ ಘಟಕ ಕೇಂದ್ರವನ್ನಾಗಿ ಮಾಡಲಾಗಿದೆ.