ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ ವೈಮಾನಿಕ ಸಮೀಕ್ಷೆ ನಡೆಸಿದ ನಿತಿನ್ ಗಡ್ಕರಿ
ಬೆಂಗಳೂರನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ಪ್ರಯಾಣಿಸಲು ನಿರ್ಮಿಸಿರುವ ಎಕ್ಸ್‌ಪ್ರೆಸ್ ಹೈವೆ, ಉದ್ಘಾಟನೆಗೆ ಕೆಲವೇ ತಿಂಗಳು ಬಾಕಿ ಇದ್ದು, ಇಂದು ರಸ್ತೆ ಗುಣಮಟ್ಟ ಪರಿಶೀಲಿಸಲು ಖುದ್ದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಜ.5): ಅದು ಬೆಂಗಳೂರನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ಪ್ರಯಾಣಿಸಲು ನಿರ್ಮಿಸಿರುವ ಎಕ್ಸ್‌ಪ್ರೆಸ್ ಹೈವೆ, ಉದ್ಘಾಟನೆಗೆ ಕೆಲವೇ ತಿಂಗಳು ಬಾಕಿ ಇದ್ದು, ಇಂದು ರಸ್ತೆ ಗುಣಮಟ್ಟ ಪರಿಶೀಲಿಸಲು ಖುದ್ದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ತಲುಪಲು ಸುಮಾರು 9 ಸಾವಿರ ಕೋಟಿ ಖರ್ಚು ಮಾಡಿ ನಿರ್ಮಿಸುತ್ತಿರುವ ಹೆದ್ದಾರಿಯನ್ನು ಇಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ವೈಮಾನಿಕ ಸಮೀಕ್ಷೆ ನಡೆಸಿ ರಸ್ತೆಯ ಗುಣಮಟ್ಟ ಪರಿಶೀಲಿಸಿದರು. ಇಂದು ಮಧ್ಯಾಹ್ನ 1 ಘಂಟೆಗೆ ಆಗಮಿಸಿದ ನಿತಿನ್ ಗಡ್ಕರಿ ಮೊದಲು ಶ್ರೀರಂಗಪಟ್ಟಣದವರೆಗೂ ಹೆಲಿಕಾಪ್ಟರ್ ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಅಧಿಕಾರಿಗಳ ಮಾಹಿತಿ ಪಡೆದರು. ನಂತರ ರಾಮನಗರ ತಾಲ್ಲೂಕಿನ ಕೆಂಪೆಗೌಡನದೊಡ್ಡಿ ಬಳಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ಗೆ ಬಂದಿಳಿದ ಗಡ್ಕರಿಗೆ ಸಚಿವರಾದ ಅಶ್ವಥ್ ನಾರಾಯಣ, ಗೋಪಾಲಯ್ಯ, ಸಂಸದ ಡಿಕೆ ಸುರೇಶ್, ಎಂಎಎಲ್ಸಿ ಸಿಪಿ ಯೋಗೆಶ್ವರ್ ಸ್ವಾಗತ ಕೋರಿದರು. ನಂತರ ಕಾರಿನಲ್ಲಿ ಸುಮಾರು 5 km ಗೂ ಹೆಚ್ಚು ಪ್ರಯಾಣಿಸಿ ರಸ್ತೆಯ ಗುಣಮಟ್ಟ ಪರಿಶೀಲನೆ ನಡೆಸಿದರು.
ಅಂದಹಾಗೆ ಬೆಂಗಳೂರು- ಮೈಸೂರು ರಸ್ತೆಯ ಗುಣಮಟ್ಟದ ಬಗ್ಗೆ ಸಂಸದ ಡಿಕೆ ಸುರೇಶ್ ಕಿಡಿಕಾರಿದರು. ರಾಮನಗರ, ಚನ್ನಪಟ್ಟಣಕ್ಕೆ ಎಂಟ್ರಿ ಎಕ್ಸಿಟ್ ನೀಡಿಲ್ಲ, ರಸ್ತೆಯ ಗುಣಮಟ್ಟ ಕಳಪಯಿಂದ ಕೂಡಿರುವ ಬಗ್ಗೆ ಮಾಧ್ಯಮಗಳಲ್ಲೇ ಪ್ರಸಾರ ಮಾಡಿದ್ದೀರಿ.ಪುಡ್ ಕೋರ್ಟ್ ಮಾಡುವ ಬಗ್ಗೆ ಚಿಂತನೆ ಮಾಡಿಲ್ಲ. ಈ ಎಲ್ಲದರ ಬಗ್ಗೆ ಈಗಾಗಲೇ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ. ದಶಪಥ ರಸ್ತೆ ಹಲವಡೆ ಕಳಪೆ ಕಾಮಗಾರಿಯಿಂದ ಕೂಡಿದೆ. ಹಲವು ಅಪಘಾತಗಳು ಆಗಿದೆ. ಅಂಡರಪಾಸ್ ಗಳಿಂದ ಹಳ್ಳಿ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಇದೆಲ್ಲವನ್ನೂ ಕೇಂದ್ರ ಸಚಿವರ ಗಮನಕ್ಕೆ ತರಲಾಗುವುದು ಎಂದರು. ಇನ್ನೂ ಇದೇ ವೇಳೆ ಮಾತನಾಡಿದ ಎಂಎಲ್ಸಿ ಸಿಪಿ ಯೋಗೆಶ್ವರ್ ಕೆಲವು ಕಡೆ ಸಮಸ್ಯೆಗಳು ಇದೆ. ವಾಹನ ತಾತ್ಕಾಲಿಕ ನಿಲುಗಡೆಗೆ ಅವಕಾಶ ನೀಡಿಲ್ಲ. ಅಪಘಾತ ಆದರೆ ತುರ್ತು ಆಸ್ಪತ್ರೆಗೆ ತೆರಳಲು ರಸ್ತೆ ವ್ಯವಸ್ಥೆ ಇಲ್ಲ ವಾಹನ ಸವಾರರಿಗೆ ತೊಂದರೆ ಆಗಿರುವ ಬಗ್ಗೆ ಗನಮಕ್ಕೆ ಬಂದಿದೆ. ಈ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಗುವುದು ಎಂದರು.
ಬೆಂಗಳೂರು-ಮೈಸೂರು ಹೈವೇಗೆ ನಾಲ್ವಡಿ, ಕಾವೇರಿ ಹೆಸರಿಗೆ ಪೈಪೋಟಿ
ಇನ್ನೂ ಮಾಧ್ಯಮದವರ ಜೊತೆ ಸಂವಾದ ನಡೆಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಇದೇ ಫೆಬ್ರವರಿ ಅಂತ್ಯದ ವೇಳೆಗೆ ಪ್ರಧಾನಿ ಮೋದಿ ರವರು ರಸ್ತೆಯನ್ನು ಉದ್ಘಾಟನೆ ಮಾಡ್ತಾರೆ, ಸ್ಥಳೀಯ ಜನಪ್ರತಿನಿಧಿಗಳು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಈಗಾಗಲೇ ಎಲ್ಲವನ್ನೂ ಪರಿಶೀಲನೆ ಮಾಡಲಾಗಿದೆ. ಹೆದ್ಸಾರಿಯಿಂದ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ. ಪಬ್ಲಿಕ್ ಟ್ರಾನ್ಸ್ ಪೋರ್ಟ್ ಗೂ ಹೆಚ್ಚಿನ ಒತ್ತು ನೀಡುತ್ತೇವೆ. ಇದರಿಂದ ಐಟಿ ಉದ್ಯಮಕ್ಕೂ ಅನುಕೂಲವಾಗಲಿದ್ದು, ಹೆದ್ದಾರಿ ಕಂಪ್ಲೀಟ್ ಆದ ನಂತರ ಕೇವಲ 90 ನಿಮಿಷದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತಲುಪಲಾಗುವುದು ಎಂದರು.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಎಚ್.ಡಿ. ದೇವೇಗೌಡರ ಹೆಸರಿಡಿ: ಸರ್ಕಾರಕ್ಕೆ ಟಿ.ಎ. ಶರವಣ ಪತ್ರ
ಒಟ್ಟಾರೆ ನಿತಿನ್ ಗಡ್ಕರಿ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದ್ದು, ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ದಿನಗಣನೇ ಆರಂಭವಾಗಿದ್ದು ಆದಷ್ಟು ಬೇಗ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.