ನಿಖಿಲ್‌ ನಿಜವಾದ ಎಂಪಿ : ಜೆಡಿಎಸ್ ಮುಖಂಡ

ಮಂಡ್ಯ ಜಿಲ್ಲೆಯ ಜನರೊಂದಿಗೆ ನಿರಂತರವಾಗಿ ಇರುವ ನಿಖಿಲ್‌ ಕುಮಾರಸ್ವಾಮಿ ಜಿಲ್ಲೆಯ ನಿಜವಾದ ಸಂಸದರು ಎಂದು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಹೇಳಿದರು.

Nikhil Kumaraswamy Is The Real MP For Mandya snr

ಕೆ.ಆರ್‌.ಪೇಟೆ :  ಮಂಡ್ಯ ಜಿಲ್ಲೆಯ ಜನರೊಂದಿಗೆ ನಿರಂತರವಾಗಿ ಇರುವ ನಿಖಿಲ್‌ ಕುಮಾರಸ್ವಾಮಿ ಜಿಲ್ಲೆಯ ನಿಜವಾದ ಸಂಸದರು ಎಂದು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಹೇಳಿದರು.

ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿದ ಅವರು, ಸಂಸದರು ಎಂದರೆ ಸಂಸತ್‌ನಲ್ಲಿ ಮಾತನಾಡುವುದಲ್ಲ. ಜನರ ಮಧ್ಯೆ ಇದ್ದು ಕೆಲಸ ಮಾಡುವವರು. ನಿಖಿಲ್‌ (Nikhil )  ಜಿಲ್ಲೆಯಲ್ಲಿ ನಿರಂತರವಾಗಿ ಜನರೊಂದಿಗೆ ಇದ್ದು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ರೈತರು (Farmers)  ಆತ್ಮಹತ್ಯೆ ಮಾಡಿಕೊಂಡರೆ ಭೇಟಿ ನೀಡಿ ಸಾಂತ್ವನ ಹೇಳುತ್ತಾರೆ. ರಾಜ್ಯಾದ್ಯಂತ ಸುತ್ತಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಇವರೇ ನಮ್ಮ ನಿಜವಾದ ಎಂಪಿ ಎಂದರು.

ರಾಜ್ಯದಲ್ಲಿ 163 ಷುಗರ್‌ ಫ್ಯಾಕ್ಟರಿಗೆ ಅವಕಾಶ ಕೊಟ್ಟಿದ್ದು ನಮ್ಮ ದೇವೇಗೌಡ್ರು. 90ನೇ ಇಳಿ ವಯಸ್ಸಿನಲ್ಲಿ ದೇವೇಗೌಡ್ರು ಮೀಸಲಾತಿ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾರೆ. ರೈತ ಪರ ಮಾತನಾಡುತ್ತಾರೆ. ಬೇರೆ ಪಕ್ಷಗಳು ಎಷ್ಟೆಕಷ್ಟಕೊಟ್ಟರೂ ಅಧಿಕಾರದಲ್ಲಿದ್ದ ವೇಳೆ ರೈತರ ಸಾಲಮನ್ನಾ ಮಾಡಿ, ಪಂಚರತ್ನ ಯೋಜನೆಗಳ ಜಾರಿಗಾಗಿ ಶ್ರಮಿಸುತ್ತಿರುವ ಕುಮಾರಣ್ಣರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡೋಣ ಎಂದು ಮನವಿ ಮಾಡಿದರು

ಎಚ್‌.ಟಿ.ಮಂಜುರನ್ನು ಕ್ಷೇತ್ರದ ಜನ ಗೆಲ್ಲಿಸುತ್ತಾರೆ   

ಕ್ಷೇತ್ರದ ಜನರ ನಾಡಿ ಮಿಡಿತ ಅರಿತಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಎಚ್‌.ಟಿ.ಮಂಜು ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿದ ಅವರು, ಕೆ.ಆರ್‌.ಪೇಟೆಯಲ್ಲಿ ನನ್ನಂತವನು ಹುಟ್ಟಿದ್ರೆ ಕೂತ್ಕೊಂಡು ರಾಜಕೀಯ ಮಾಡಬಹುದು ಅಂತಾರೆ. ಯಾಕಂದ್ರೆ ದೇವೆಗೌಡರು, ಕುಮಾರಸ್ವಾಮಿಯನ್ನು ಪ್ರೀತಿಸುವ ಅಪಾರ ಜನ ಈ ಕ್ಷೇತ್ರದಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಈ ಹಿಂದೆ ಕೈ ಹಿಡಿದಿದ್ದು ಶೀಳನೆರೆ ಹೋಬಳಿ ಜನತೆ. ಈ ಬಾರಿ ಎಚ್‌.ಟಿ.ಮಂಜು ಗೆಲ್ಲಿಸುತ್ತಾರೆ ಎಂದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ರೈತಸಂಘದ ತಂತ್ರಗಾರಿಕೆಗೆ ನಿಖಿಲ… ಬಲಿಯಾದರು. ಆದರೆ, ಜನರ ಮನಸ್ಸಿನಲ್ಲಿ ನಿಖಿಲ… ಸೋತಿಲ್ಲ. 2024ಕ್ಕೆ ಮಂಡ್ಯ ಲೋಕಸಭೆಗೆ ನಿಖಿಲ್‌ ನಿಲ್ಲಬೇಕು ಎಂದು ಬಹಿರಂಗವಾಗಿ ಸಂದೇಶ ರವಾನಿಸಿದರು.

ಪಕ್ಷದ ವರಿಷ್ಠರು ನನ್ನನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ನಾನು ರೈತನ ಮಗ. ಡೋಂಗಿ ಮಾತನಾಡಲ್ಲ. ವೇದಿಕೆಯಲ್ಲಿ ಪ್ರಮಾಣ ಮಾಡಿ ಹೇಳ್ತೇನೆ ಪಕ್ಷಕ್ಕಾಗಿ ದುಡಿಯುತ್ತೇನೆ. ನಾನು ಜೆಡಿಎಸ್‌ಗೆ ಕೈ ಕೊಡುವ ಕೆಲಸ ಮಾಡಲ್ಲ ಶಪಥ ಮಾಡಿದರು.

ಹೆಗ್ಗಡಹಳ್ಳಿ ಗ್ರಾಮಸ್ಥರ ಋುಣ ತೀರಿಸುವೆ: ನಿಖಿಲ್‌

ಪಾಂಡವಪುರ: ಕಳೆದ ಲೋಕಸಭೆ ಚುನಾವಣೆ ವೇಳೆ ಅತಿ ಹೆಚ್ಚು ಮತ ನೀಡಿದ ಹೆಗ್ಗಡಹಳ್ಳಿ ಗ್ರಾಮಸ್ಥರ ಋುಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ರಥಯಾತ್ರೆ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿಯೇ ಅತಿ ಹೆಚ್ಚು ಮತಗಳನ್ನು ನೀಡಿ ಹೆಗ್ಗಡಹಳ್ಳಿಯ ಜನರು ನೀಡಿ ಆಶೀರ್ವಾದ ಮಾಡಿದ್ದಾರೆ. ಚುನಾವಣೆಯಲ್ಲಿ ಹೆಚ್ಚು ಲೀಡ್‌ ಕೊಟ್ಟಗ್ರಾಮದ ಜನರ ಋುಣ ತೀರಿಸುತ್ತೇನೆ ಎಂದರು.

ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರತಿ ಕುಟುಂಬದ ಬದುಕು ಹಸನಾಗಿಸಲು ನಮ್ಮ ಕುಮಾರಣ್ಣ ಪಂಚರತ್ನ ರಥಯಾತ್ರೆ ಮೂಲಕ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಆ ಮೂಲಕ ರೈತರ ಅಭ್ಯುದಯ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದಾರೆ. ಹೀಗಾಗಿ ಗ್ರಾಮದ ಜನರು ಶಾಸಕ ಸಿ.ಎಸ್‌.ಪುಟ್ಟರಾಜು ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಕೋರಿದರು.

ಶಾಸಕರಾಗಿ ಸಿ.ಎಸ್‌.ಪುಟ್ಟರಾಜು ಆಯ್ಕೆಯಾದರೆ ನಮ್ಮ ತಂದೆ ಎಚ್‌ಡಿಕೆ ರಾಜ್ಯದ ಮುಖ್ಯಮಂತ್ರಿಯಾಗಿ ಬಳಿಕ ಪಂಚರತ್ನ ಯೋಜನೆ ಜಾರಿಗೊಳಿಸಲಿದ್ದಾರೆ. ಜತೆಗೆ ಪುಟ್ಟರಾಜು ಮಂತ್ರಿಯಾಗಲಿದ್ದಾರೆ. ಆದ್ದರಿಂದ ಜನರು ಪುಟ್ಟರಾಜು ಅವರಿಗೆ ಆಶೀರ್ವಾದ ಮಾಡಬೇಕು ಎಂದರು.

ಇದೇ ವೇಳೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಶಾಸಕ ಸಿ.ಎಸ್‌.ಪುಟ್ಟರಾಜು, ಗ್ರಾಪ ಸದಸ್ಯರಾದ ಎಚ್‌.ಜೆ.ರಾಮಕೃಷ್ಣ, ಭಾಗ್ಯ ಇತರರಿದ್ದರು. ಈ ವೇಳೆ ಭಾರಿ ಗಾತ್ರದ ಹೂವಿನ ಹಾರ ಹಾಕಿ ಅದ್ಧೂರಿ ಸ್ವಾಗತ ನೀಡಲಾಯಿತು.

2 ಕ್ವಿಂಟಲ್‌ ಚೆರ್ರಿ ಹಣ್ಣಿನ ಹಾರ:

ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗ್ರಾಪಂ ಅಧ್ಯಕ್ಷ ನಲ್ಲಹಳ್ಳಿ ಮಹೇಶ್‌ ನೇತೃತ್ವದಲ್ಲಿ 2 ಕ್ವಿಂಟಲ… ತೂಕದ ಚೆರ್ರಿ ಹಣ್ಣಿನ ಹಾರ ಹಾಕಿ ಅಭಿನಂದಿಸಲಾಯಿತು. ಈ ವೇಳೆ 7ಕ್ಕೂ ಹೆಚ್ಚು ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆ ಗಮನ ಸೆಳೆಯಿತು.

ಅವಳಿ ಟಗರು ಮರಿ ಕೊಡುಗೆ:

ಕುರಟ್ಟಿಗ್ರಾಮದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಭಿಮಾನಿಗಳು, ಜೆಡಿಎಸ್‌ ಕಾರ್ಯಕರ್ತರು ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಅವಳಿ ಟಗರು ಮರಿಗಳನ್ನು ಕೊಡುಗೆಯಾಗಿ ನೀಡಿದರು.

ಈ ವೇಳೆ ಶಾಸಕ ಸಿ.ಎಸ್‌.ಪುಟ್ಟರಾಜು, ನಿಖಿಲ… ಕುಮಾರಸ್ವಾಮಿ, ಲಯ®್ಸ… ಸಂಸ್ಥೆ ಜಿಲ್ಲಾ ಮಾಜಿ ರಾಜ್ಯಪಾಲ ಲಯನ್‌ ಕೆ.ದೇವೇಗೌಡ, ಲ.ಶಿವಕುಮಾರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್‌.ಕೆ.ದೇವೇಗೌಡ, ಗ್ರಾಪಂ ಉಪಾಧ್ಯಕ್ಷೆ ರಾಧಮಣಿ, ಸದಸ್ಯರಾದ ಹೇಮಂತ್‌ಕುಮಾರ್‌, ಶಿವಕುಮಾರ್‌ , ಸುರೇಶ್‌, ಮಮತಾ ತಿಮ್ಮೇಗೌಡ, ಸರೋಜಮ್ಮ, ಕನ್ಯಮ್ಮ, ಜಯಶೀಲಮ್ಮ ಇತರರಿದ್ದರು.

Latest Videos
Follow Us:
Download App:
  • android
  • ios