ಬೆಂಗಳೂರು (ಅ.12):  ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ತೀವ್ರತೆ ಇನ್ನಷ್ಟುಹೆಚ್ಚಾಗಿದ್ದರಿಂದ ರಾಜ್ಯದಲ್ಲಿ ಅ.14ರ ವರೆಗೆ ಭಾರಿ ಹಾಗೂ ಅತ್ಯಂತ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಕರಾವಳಿ ಭಾಗಕ್ಕೆ ‘ರೆಡ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಅ.12ರಂದು ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಸಾದ್ಯತೆ ಇದ್ದು, ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಗಾಳಿ, ಗುಡುಗು ಸಹಿತ ಅತ್ಯಂತ ಭಾರಿ ಮಳೆ ಬೀಳಲಿರುವ ಹಿನ್ನೆಲೆಯಲ್ಲಿ ಅ.13ರಂದು ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ‘ರೆಡ್‌ ಅಲರ್ಟ್‌’ ಕೊಡಲಾಗಿದೆ.

"

11 ಜಿಲ್ಲೆಗಳಲ್ಲಿ ವರುಣನ ಆರ್ಭಟ: ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ ...

ಗಾಳಿಯ ವೇಗ ಹೆಚ್ಚಿರುವ ಕಾರಣಕ್ಕೆ ಉತ್ತರ ಒಳನಾಡಿನ ಬೆಳಗಾವಿ, ಬೀದರ್‌, ಕಲಬುರ್ಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅ.12ರಿಂದ 14ರವರೆಗೆ ಅತಿ ಹೆಚ್ಚು ಮಳೆ ಬೀಳಲಿದ್ದು, ‘ಆರೆಂಜ್‌ ಅಲರ್ಟ್‌’, ಉಳಿದ ಕೆಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿನ್ನೆ ಎಲ್ಲೆಲ್ಲಿ ಎಷ್ಟುಮಳೆ:

ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ 10 ಸೆಂ.ಮೀ, ಗದಗದ ನರಗುಂದ, ಕೊಪ್ಪಳದ ಕುಕನೂರು, ಬಾಗಲಕೋಟೆ ಮಹಾಲಿಂಗಪುರ, ರಾಯಚೂರಿನ ಮುಧೋಳ ಮತ್ತು ಹಾಸನದಲ್ಲಿ ತಲಾ 9, ಬಾಗಲಕೋಟೆ ಹುನಗುಂದ, ರಾಯಚೂರಿನ ದೇವದುರ್ಗದಲ್ಲಿ 8 ಸೆಂ.ಮೀ ಮಳೆ ಸುರಿದ ವರಿದಿಯಾಗಿದೆ. ರಾಜ್ಯದಲ್ಲಿ ಗರಿಷ್ಠ ತಾಪಮಾನ ಕಲಬುರ್ಗಿಯಲ್ಲಿ 34.1 ಹಾಗೂ ಬೀದರ್‌ನಲ್ಲಿ ಕನಿಷ್ಠ 19.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.