ಬೆಂಗಳೂರು[ಡಿ.30] ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರು ಪೊಲೀಸರು ನಗರದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿ ಹಲವೆಡೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.

ಬಾರ್, ರೆಸ್ಟೋರೆಂಟ್‌ಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಓಲಾ, ಊಬರ್ ಸೇರಿ ಕ್ಯಾಬ್ಗಳಿಗೆ ಜಾಗೃತಿ ಮೂಡಿಸಲಾಗಿದ್ದು- 1200 ಪೊಲೀಸ್ ವಾಹನ ನಗರದೆಲ್ಲೆಡೆ ಪೆಟ್ರೋಲಿಂಗ್ ಮಾಡಲಾಗುತ್ತದೆ .ಯಾರಿಗೂ ತೊಂದರೆ ಆಗಬಾರದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.

ರಾತ್ರಿ 8ರಿಂದ ಮಧ್ಯರಾತ್ರಿ 2ರವರೆಗೆ ಎಲ್ಲಾ ಫ್ಲೈ ಓವರ್ ಬಂದ್ ಮಾಡಲಾಗುತ್ತದೆ. ಸುಗಮ ಸಂಚಾರಕ್ಕಾಗಿ ಜನನಿಬಿಡ ರಸ್ತೆಗಳನ್ನು ಡೈವರ್ಟ್ ಮಾಡಲಾಗಿದ್ದೆ. 5 ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬರು ಜಂಟಿ ಪೊಲೀಸ್ ಆಯುಕ್ತರು - 15 ಡಿಸಿಪಿಗಳು, 45 ಎಸಿಪಿಗಳು, 220 ಇನ್ಸ್‌ಪೆಕ್ಟರ್, 430 ಪಿಎಸ್ಐ , 800 ಎಎಸ್ಐ, 10 ಸಾವಿರ ಕಾನ್ಸ್‌ಟೇಬಲ್, 1000 ಹೋ ಗಾರ್ಡ್‌ಗಳು ಸೆಕ್ಯೂರಿಟಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಂಜಿ ರಸ್ತೆ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್ ಸಹ ಸಂಪೂರ್ಣ ನಿಷೇಧಿಸಲಾಗುತ್ತದೆ.

ಸಂಚಾರ ನಿಷೇಧೀತ ರಸ್ತೆಗಳು

* ಎಂ.ಜಿ ರಸ್ತೆ- ಅನಿಲ್‌ ಕುಂಬ್ಳೆ ವೃತ್ತದಿಂದ ಮಯೋ ಹಾಲ್‌ ಬಳಿಯ ರೆಸಿಡೆನ್ಸಿ ರಸ್ತೆ  ತನಕ

* ಬ್ರಿಗೇಡ್‌ ರಸ್ತೆ - ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್‌ವರೆಗೆ

* ಚರ್ಚ್‌ ಸ್ಟ್ರೀಟ್‌ - ಬ್ರಿಗೇಡ್‌ ರಸ್ತೆ ಜಂಕ್ಷ ನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ

* ಮ್ಯೂಸಿಯಂ ರಸ್ತೆ - ಎಂ.ಜಿ ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್‌ ಬ್ಯಾಂಕ್‌ ರಸ್ತೆ 

* ರೆಸ್ಟ್‌ ಹೌಸ್‌ ರಸ್ತೆ - ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್‌ ರಸ್ತೆ ಜಂಕ್ಷನ್‌

ಕಾಮರಾಜ ರಸ್ತೆ- ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಕಬ್ಬನ್‌ ರಸ್ತೆ ಜಂಕ್ಷನ್‌ (ಎರಡೂ ಬದಿ) 

ರೆಸಿಡೆನ್ಸಿ ಕ್ರಾಸ್‌ ರಸ್ತೆ - ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್‌. 

ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ನಂದಿ ಬೆಟ್ಟದಲ್ಲಿಯೂ ಹೊಸ ವರ್ಷಾಚರಣೆ ನಿಷೇಧಿಸಲಾಗಿದೆ.