ಉಡುಪಿ (ಅ.26): ಉಡುಪಿ ಬಾಲಕಿ ರಕ್ಷಿತಾ ನಾಯಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದ ಸಾವು ಪ್ರಕರಣ  ದಾಖಲಿಸಲಾಗಿದೆ. 

 ರಕ್ಷಿತಾ ಪೋಷಕರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಅಲ್ಲದೇ ನಾಪತ್ತೆಯಾದ ರಕ್ಷಿತಾ ಪ್ರಿಯತಮ ಕೂಡ ಪತ್ತೆಯಾಗಿದ್ದಾನೆ. 
 
ರಕ್ಷಿತಾ ಪ್ರಿಯತಮ ಪ್ರಶಾಂತ್ ಕುಂದರ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. 

ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಕಾಲೇಜು ಕನ್ಯೆ ನಿಗೂಢ ಸಾವು: ಅನುಮಾನ ಹುಟ್ಟುಹಾಕಿದೆ ಪಾರ್ಟ್ನರ್ ನಡೆ .

ಅಕ್ಟೋಬರ್ 24 ರಂದು ರಾತ್ರಿ ರಕ್ಷಿತಾಳನ್ನು ಆಸ್ಪತ್ರೆಗೆ ದಾಖಲು ಮಾಡಿ ಆತ ನಾಪತ್ತೆಯಾಗಿದ್ದ. ನಂತರ ಖಾಸಗಿ ಆಸ್ಪತ್ರೆಯಲ್ಲಿ ರಕ್ಷಿತಾ ಕೊನೆಯುಸಿರೆಳೆದಿದ್ದಾಳೆ. 

ನಿನ್ನೆ ರಕ್ಷಿತಾ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ರಕ್ಷಿತಾ ದೇಹದಲ್ಲಿ ಆಲ್ಕೊಹಾಲ್ ಅಂಶ ಇತ್ತು, ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು ಎನ್ನುವ ಮಾಹಿತಿ ಲಭ್ಯವಾಗಿದ್ದು, ಇನ್ನೂ ಮರಣೋತ್ತರ ಪರೀಕ್ಷಾ ವರದಿ  ಪೊಲೀಸರ ಕೈ ಸೇರಿಲ್ಲ.  ಮರಣೋತ್ತರ ವರದಿಗಾಗಿ  ಪೊಲೀಸರು ಕಾಯುತ್ತಿದ್ದಾರೆ.