ಮದ್ಯ ಖರೀದಿಗೆ ಸರ್ಕಾರದ ಹೊಸ ರೂಲ್ಸ್..!
* ಇ ಟೆಂಡೆಂಟ್ ಪದ್ಧತಿಗೆ ಮದ್ಯ ಮಾರಾಟಗಾರರ ವಿರೋಧ
* ಲಿಕ್ಕರ್ ಖರೀದಿ ಸನ್ನದ್ದುದಾರರಿಂದ ಧರಣಿ
* ಮುಷ್ಕರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟಿ ರೂ. ನಷ್ಟ
ಗದಗ(ಮೇ.11): ಮದ್ಯ(Alcohol) ಖರೀದಿಗೆ ಸಂಬಂಧಿಸಿದಂತೆ ಸರ್ಕಾರ ತಂದಿರೋ ಹೊಸ ನಿಯಮ ವಿರೋಧಿಸಿ ಗದಗ(Gadag) ಪಾನೀಯ ನಿಗಮದ ಗೋಡೌನ್ ಎದ್ರು ಸನ್ನದ್ದುದಾರರು ಪ್ರತಿಭಟನೆ(Protest) ನಡೆಸಿದ್ದಾರೆ.
ಹೊಸ ಇ ಟೆಂಡೆಂಟ್ ಪದ್ಧತಿ ವಿರೋಧಿಸಿ ಮೇ.10 ರಂದು ಪರ್ಮಿಟ್ ಚಳುವಳಿ ಹೆಸರಲ್ಲಿ ಒಂದು ದಿನ ಮದ್ಯ ಖರೀದಿ ಮಾಡದೇ ಹೋರಾಟ ಮಾಡಲು ನಿರ್ಧರಿಸಿದ್ರು. ಗದಗ ಜಿಲ್ಲೆ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಸುಮಾರು ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟದ ಆರ್ಡರ್ ಬುಕ್ ಆಗುತ್ತೆ. ಆದ್ರೆ ಇಂದಿನ ಮುಷ್ಕರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು ಕೋಟಿ ರೂಪಾಯಿ ನಷ್ಟವಾದ ಬಗ್ಗೆ ಅಂದಾಜಿಸಲಾಗಿದೆ.
ಮದ್ಯ ಖರೀದಿಗೆ ಮೊದಲಿನ ಪದ್ಧತಿ ಇರಲಿ
1/4/2022 ರಿಂದ ಜಾರಿಯಾಗುವಂತೆ ಸನ್ನದುದಾರರು ಇ-ಟೆಂಡೆಂಟ್(E-Tendent) ಅಂದ್ರೆ, (ಆನ್ ಲೈನ್ ಮೂಲಕ ಬೇಡಿಕೆ ಪಟ್ಟಿ) ಸಲ್ಲಿಸುವ ಹೊಸ ಪದ್ಧತಿ ತಂದಿದೆ. ಬೇಡಿಕೆ ಪಟ್ಟಿ ಸಲ್ಲಿಸೋದಕ್ಕೆ ರಾತ್ರಿ 9 ರಿಂದ ಬೆಳಗ್ಗೆ 9ರ ವರೆಗೆ ಸಮಯ ನಿಗಧಿ ಮಾಡ್ಲಾಗಿದೆ. ಬ್ಯಾಂಕ್ ನಲ್ಲಿ ಹಣ ಜಮೆ ಮಾಡಿ ನಂತ್ರ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (KSBCL) ಕ್ಕೆ ಹಣ ವರ್ಗಾವಣೆ ಮಾಡ್ಬೇಕು. ನಂತ್ರ, ಮದ್ಯದ ಬೇಡಿಕೆ ಮಟ್ಟಿಯನ್ನ ಆನ್ ಲೈನ್ ಮೂಲಕ ಸಲ್ಲಿಸಬೇಕು.. ಹೊಸ ನಿಯಮದ ಪ್ರಕಾರಣ ಹಣ ವರ್ಗಾವಣೆ ಹಾಗೂ ಇ-ಇಂಡೆಂಟ್ ಎರಡೂ ರಾತ್ರಿ ಸಮಯದಲ್ಲೇ ನಡೆಯಬೇಕು. ಬಂಡವಾಳ(Investment) ಹೊಂದಿದ ದೊಡ್ಡ ಸನ್ನದ್ದುದಾರರಿಗೆ ಹೊಸ ಪದ್ಧತಿ ಸಹಾಯ ಆಗಿದ್ರೆ ಸಣ್ಣ ವ್ಯಾಪಾರಸ್ಥರಿಗೆ ತೊಂದ್ರೆ ಆಗ್ತಿದೆ. ರಾತ್ರಿ ವ್ಯಾಪಾರದ ಮಧ್ಯೆ ಇ-ಇಂಡೆಂಟ್ ಸಲ್ಲಿಸೋದಕ್ಕೆ ಸಾಧ್ಯವಿಲ್ಲ. ರಾತ್ರಿ 11 ಗಂಟೆಗೆ ವ್ಯಾಪರ ಮುಗ್ಸಿ ಹಣ ಹೊಂದಿಸಿಕೊಂಡು ಬೇಡಿಕೆ ಪಟ್ಟಿ ಸಲ್ಲಿಸಲು ಬ್ಯಾಂಕ್ ಡೆಪಾಸಿಟ್ ಮಷೀನ್ ಹುಡುಕಬೇಕಾಗುತ್ತೆ. ಕೆಲವೊಮ್ಮೆ ಮಷಿನ್ ಸರಿಯಾಗಿಲ್ಲ ಅಂದ್ರೆ ಹಣ ಡೆಪಾಸಿಟ್ ಮಾಡೋದಕ್ಕೆ ತೊಂದ್ರೆಯಾಗುತ್ತೆ. ಹೀಗಾಗಿ ಸಣ್ಣ ವ್ಯಾಪಾರಸ್ಥರ ಹಿತ ದೃಷ್ಟಿಯಿಂದ ಹೊಸ ನೀತಿಯನ್ನ ಕೈ ಬಿಡ್ಬೇಕು ಅಂತಾ ಗದಗ ಜಿಲ್ಲಾ ಮದ್ಯ ಮಾರಾಟಗಾರರ ಸಂಘ ಒತ್ತಾಯಿಸಿದೆ.
Gadag: ಪಿಡಬ್ಲ್ಯೂಡಿ ಸಚಿವರ ತವರು ಜಿಲ್ಲೆಯಲ್ಲೇ ರಸ್ತೆ ಗುಂಡಿಗಳ ತಾಂಡವ: ಆಟೋ ಚಾಲಕರ ಪ್ರತಿಭಟನೆ
ಗದಗ ಜಿಲ್ಲೆಯಾದ್ಯಂತ ಸುಮಾರು 140 ಸನ್ನದ್ದುದಾರರು ಇದ್ದಾರೆ. ಬಹುತೇಕ ಅಂದ್ರೆ 50 ರಿಂದ 70 ಲೈಸನ್ಸ್ ಹೋಲ್ಡರ್ ಸಣ್ಣ ವ್ಯಾಪಾರಸ್ಥರು. ಹೊಸ ಪದ್ಧತಿಯಿಂದಾಗಿ ಗದಗ ನಗರದ ಶೇ. 50 ಸನ್ನದ್ದುದಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹಳೆಯ ಪದ್ಧತಿ ಜಾರಿಯಾದ್ರೆ ನೇರವಾಗಿ ಪಾನೀಯ ನಿಗಮದ ಜಿಲ್ಲಾ ಗೋಡೌನ್ ನಿಂದ ಖರೀದಿ ಮಾಡ್ಬಹುದಾಗಿ. ಹಣ ಇದ್ದ ಸಮಯದಲ್ಲಿ ನೇರವಾಗಿ ಗೋಡೌನ್ ಗೆ ಹೋಗಿ ಮದ್ಯ ಖರೀದಿಸಬಹುದಾಗಿದೆ. ಅಗತ್ಯಕ್ಕೆ ಅನುಸಾರವಾಗಿ ಬೇಡಿಕೆ ಪಟ್ಟಿ ಸಲ್ಲಿಸಬಹುದು. ಆದ್ರೆ ಅವೈಜ್ಞಾನಿಕ ಇ ಟೆಂಡೆಂಟ್ ನಿಂದಾಗಿ ಸಣ್ಣ ವ್ಯಾಪಾರಸ್ಥರಿಗೆ ತೊಂದ್ರೆಯಾಗಿದ್ದು ಸರ್ಕಾರ ತನ್ನ ನಿರ್ಧಾರ ಪರಿಶೀಲಿಸ್ಬೇಕು ಅಂತಾ ಮದ್ಯ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
ಒಂದ್ವೇಳೆ ಹೊಸ ನಿಯಮ ರದ್ದುಗೊಳಿಸಿ ಹೊಸ ನಿಯಮ ಜಾರಿಯಾಗದಿದ್ದರೆ, ವೈನ್ ಶಾಪ್ ಗಳನ್ನ(Wine Shops) ಬಂದ್ ಮಾಡಿ ಹೋರಾಟ ಮಾಡೋದಾಗಿ ಮದ್ಯ ಮಾರಾಟಗಾರರು ಎಚ್ಚರಿಸಿದ್ದಾರೆ. ದೊಡ್ಡ ವ್ಯಾಪಾರಸ್ಥರಿಗೆ ಹಾಗೂ ದೊಡ್ಡ ಸಿಟಿಯ ಜನರಿಗೆ ಅನುಕೂಲ ಆಗುವಂತೆ ನಿಯಮಗಳಿದ್ದು ಈ ಬಗ್ಗೆ ಪರಿಶೀಲಿಸ್ಬೇಕು ಅನ್ನೋದು ಸಣ್ಣ ವ್ಯಾಪಾರಸ್ಥರ ಅಳಲು.