ಮೈಸೂರು(ಜೂ.25): ಮೀನುಗಾರಿಕೆ ಇಲಾಖೆಯಲ್ಲಿ ಹೊಸ ನೀತಿ ಜಾರಿಗೆ ತರುವುದಾಗಿ ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಹೊಸ ನೀತಿಯ ಮೂಲಕ ರೈತರಿಗೆ ಪ್ರಧಾನಿ ಮಂತ್ರಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಿರುವ ಮಾದರಿಯಲ್ಲಿಯೇ ಮೀನುಗಾರರಿಗೂ ಕ್ರೆಡಿಟ್‌ ಕಾರ್ಡ್‌ ನೀಡಲಾಗುವುದು. ಸ್ಥಳೀಯವಾಗಿ ಮೀನುಗಾರಿಕೆ ಉತ್ತೇಜಿಸುವ ಉದ್ದೇಶದಿಂದ ಕೆರೆಗಳನ್ನು ಅಭಿವೃದ್ಧಿಪಡಿಸಿ ಮೀನು ಸಾಕಾಣಿಕೆ ಅಧಿಕಾರವನ್ನು ಗ್ರಾಪಂಗೆ ನೀಡಲಾಗುವುದು. ಕರಾವಳಿ ಭಾಗದಲ್ಲಿ ಮೀನುಗಾರಿಕೆ ಒತ್ತು ನೀಡಲಾಗಿದೆ. ಮೈಸೂರು ಭಾಗದಲ್ಲಿ ಅಷ್ಟುಇಲ್ಲ. ಆದ್ದರಿಂದ ಮೀನುಗಾರಿಕೆಗೆ ಉದ್ಯೋಗ ಸೃಷ್ಟಿ, ವಾಣಿಜ್ಯ ವ್ಯವಹಾರ ಸೃಷ್ಟಿಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಮಲಗೋ ಮೊದಲು ಈ 3 ಯೋಗಾಸನ ಮಾಡಿದ್ರೆ ಗಾಢ ನಿದ್ದೆ ಗ್ಯಾರಂಟಿ!

ದೇವಸ್ಥಾನದ ಶುಚಿತ್ವ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಪುರಾತತ್ವ ಇಲಾಖೆ ಅನುಮತಿ ಪಡೆದು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ವಾರ್ಷಿಕ 25 ಲಕ್ಷಕ್ಕಿಂತ ಹೆಚ್ಚು ಆದಾಯಗಳಿಸುವ ದೇವಸ್ಥಾನಗಳನ್ನು ಬಿ ದರ್ಜೆಯಿಂದ ಎ ದರ್ಜೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಟಿ. ನರಸೀಪುರ ತಾಲೂಕು ಮೂಗೂರಿನ ತ್ರಿಪುರ ಸುಂದರಮ್ಮ ದೇವಸ್ಥಾನವನ್ನು ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಮುಜರಾಯಿ ಇಲಾಖೆಗೆ ಒಳಪಟ್ಟಪ್ರತಿಯೊಂದು ದೇವಸ್ಥಾನದಲ್ಲಿ ವಂಶ ಪಾರಂಪರ್ಯವಾಗಿ ಪೂಜೆ ಮಾಡುತ್ತಿರುವ ಅರ್ಚಕರಿಗೆ ಆಗಮಶಾಸ್ತ್ರ ಕಲಿಯಬೇಕೆಂಬ ಕಡ್ಡಾಯ ನೀತಿಯನ್ನು ರದ್ದುಗೊಳಿಸಲು ಚಿಂತಿಸಲಾಗಿದೆ. ಇದರಿಂದ ಸಿ ದರ್ಜೆಗೆ ಒಳಪಡುವ ಸಣ್ಣಪುಟ್ಟದೇವಾಲಯದ ಆರ್ಚಕರಿಗೆ ಉಪಯೋಗವಾಗಲಿದೆ ಎಂದು ಅವರು ತಿಳಿಸಿದರು.

ದಾಂಡೇಲಿಯಲ್ಲಿ ಹರಡುತ್ತಿರುವ ಕಾಮಾಲೆ ರೋಗ

ರಾಜ್ಯದಲ್ಲಿ ಮೀನು ಹಿಡಿದು ಜೀವನ ಸಾಗಿಸುತ್ತಿರುವ ಬಡವರಿಗೆ ಸರ್ಕಾರದಿಂದ ದೊರಕುವ ಅನುದಾನವನ್ನು ಪಾರದರ್ಶಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲೂ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿ. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಕೆರೆಗಳನ್ನುಪಂಚಾಯತಿಯ ಸುಪರ್ದಿಯಲ್ಲಿ ನಿರ್ವಹಣೆ ಮಾಡಬೇಕು. ಇದರ ಮೇಲ್ವಿಚಾರಕರಾಗಿ ಪಿಡಿಒ ಹಾಗೂ ಇಒಗಳ ಉಸ್ತುವಾರಿಯಲ್ಲಿ ಸರ್ಕಾರಕ್ಕೆ ನಷ್ಟವಾಗದಂತೆ ಕಾರ್ಯ ನಿರ್ವಹಿಸಬೆಕು. ಈ ಸಂಬಂಧ ನಮ್ಮ ಇಲಾಖೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.

ಮೀನುಗಾರಿಕೆ ಇಲಾಖೆಯಿಂದ ಫಲಾನುಭವಿಗಳಿಗೆ ದೊರಕುವ ಸರ್ಕಾರದ ಅನುದಾನವನ್ನು ಸ್ಥಳೀಯ ಶಾಸಕರ ಸಮಾಕ್ಷಮದಲ್ಲಿ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್‌.ನಾಗೇಂದ್ರ, ಬಿ. ಹರ್ಷವರ್ಧನ, ಎನ್‌. ಅಶ್ವಿನ್‌ ಕುಮಾರ್‌, ಎಚ್‌.ಪಿ. ಮಂಜುನಾಥ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರಾ, ಎಸಿ ಡಾ. ವೆಂಕಟರಾಜು ಇದ್ದರು.

ಕೊರೋನಾ ಜೊತೆಗೆ ಬದುಕಬೇಕು, ಮತ್ತೆ ಲಾಕ್‌ಡೌನ್‌ ಅವಶ್ಯಕತೆ ಇಲ್ಲ: ಕೇಂದ್ರ ಸಚಿವ ಅಂಗಡಿ

ಕೋವಿಡ್‌- 19ಗೆ ಉಚಿತ ಚಿಕಿತ್ಸೆ ನೀಡುವ ಸಂಬಂಧ ಪ್ರತಿಪಕ್ಷಗಳು ಸಲಹೆ ನೀಡುತ್ತಿವೆ. ನಾವು ಎಲ್ಲರ ಸಲಹೆಯನ್ನು ಸ್ವಾಗತಿಸುತ್ತೇವೆ. ಅಲ್ಲದೆ ಈವರೆಗೆ ರಾಜ್ಯದಲ್ಲಿ ಕೋವಿಡ್‌ಗೆ ಸರ್ಕಾರದಿಂದಲೇ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಮುಂದಿನ ತೀರ್ಮಾನಗಳನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿಯೇ ಚರ್ಚಿಸಿ ಕೈಗೊಳ್ಳುತ್ತೇವೆ ಎಂದು ಮುಜರಾಯಿ ಇಲಾಖೆ ಸಚಿವರು. ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.