ಮಂಡ್ಯ(ಫೆ.12): ಸಂಪೂರ್ಣವಾಗಿ ಕನ್ನಡದಲ್ಲೇ ಟ್ವಿಟ್ಟರ್‌ ಮಾದರಿಯಲ್ಲಿ ಬಳಕೆ ಮಾಡಬಹುದಾದ ‘ಕೂ’(ಕೆಒಒ) ಮೊಬೈಲ್‌ ಆ್ಯಪ್‌ ಒಂದನ್ನು ಬಿಡುಗಡೆ ಮಾಡಲಾಗಿದೆ. ಇದು ಸಂಪೂರ್ಣವಾಗಿ ಕನ್ನಡದಲ್ಲಿಯೇ ವ್ಯವಹರಿಸಬಹುದಾಗಿದೆ.

ಈ ಆ್ಯಪ್‌ಗೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೂ ಆ್ಯಪ್‌ನ ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ, ಕನ್ನಡದಲ್ಲೇ ಜನರು ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಹಾಯಕವಾಗುವಂತೆ ಕೂ ಆ್ಯಪ್‌ ಅನ್ನು ರೂಪಿಸಲಾಗಿದೆ.

4 ಕ್ಯಾಮೆರಾ, 64 ಮೆಗಾಪಿಕ್ಸೆಲ್, 6000mAh ಬ್ಯಾಟರಿ! ಸ್ಯಾಮ್ಸಂಗ್‌ ಅಗ್ಗದ ಮೊಬೈಲ್

ಈಗಿರುವ ಟ್ವಿಟ್ಟರ್‌ನಲ್ಲಿ ಇಂಗ್ಲೀಷ್‌ ಭಾಷೆ ಜೊತೆಗೆ ಕನ್ನಡವನ್ನೂ ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡಲು ಅವಕಾಶವಿದೆ. ವಿಶ್ವದಾದ್ಯಂತ ಕೋಟ್ಯಂತರ ಕನ್ನಡಿಗರಿಗೆ ಸಂಪೂರ್ಣವಾಗಿ ಕನ್ನಡದಲ್ಲಿಯೇ ಟ್ವೀಟ್‌ ಮಾಡಲು ಅನುಕೂಲವಾಗುವಂತೆ ಕೂ ಆ್ಯಪ್‌ ಒಂದನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಟ್ವಿಟ್ಟರ್‌ ಮಾದರಿಯಲ್ಲೇ ಇರುವ ಕೂ ಆ್ಯಪ್‌ನಲ್ಲಿ ಎಲ್ಲವನ್ನೂ ಕನ್ನಡದಲ್ಲೇ ವ್ಯವಹರಿಸಬಹುದು. ಲೇಖನ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇದೊಂದು ವೇದಿಕೆಯಾಗಿದೆ ಎಂದು ತಿಳಿಸಿದರು.