ಮಂಡ್ಯ(ಜು.27): ಬಿ. ಎಸ್. ಯಡಿಯೂರಪ್ಪ ಆರು ತಿಂಗಳು ಆಡಳಿತ ಮಾಡ್ತಾರೆ, ಬಿಎಸ್‌ವೈ ಸರ್ಕಾರಕ್ಕೆ ಭವಿಷ್ಯವಿಲ್ಲ ಎನ್ನುವಂತಹ ಮಾತುಗಳು ಕೇಳಿ ಬರುತ್ತಿದ್ದು, ಸಿಎಂ ಯಡಿಯೂರಪ್ಪ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿ ಅಂತ ದೇವರ ಮೊರೆ ಹೋಗಿದ್ದಾರೆ. ವಿಘ್ನಗಳಿಲ್ಲದೆ ಆಡಳಿತ ನಡೆಸೋಕೆ ಸಾಧ್ಯ ಆಗ್ಲಿ ಅಂತ ಅವರು ಪ್ರಾರ್ಥಿಸಿದ್ದಾರೆ.

BSY ಸಿಎಂ ಆಗಲೆಂದು ಹರಕೆ ತೀರಿಸುತ್ತಿದ್ದಂತೆ ಪ್ರಮಾಣ ವಚನಕ್ಕೆ ಟೈಂ ಫಿಕ್ಸ್...

ಮೇಲುಕೋಟೆಗೆ ಬಂದು ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರು ಅವಧಿಪೂರ್ಣಗೊಳಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಯಾವದೇ ವಿಘ್ನ ಇಲ್ಲದಂತೆ ಜನಪರ ಆಡಳಿತ ನಡೆಸಲು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಮಂಡ್ಯದ ಮೇಲುಕೋಟೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ದಾಸೋಹ ಭವನದ ಭರವಸೆ:

ಸಿಎಂ ಆದ ತಕ್ಷಣ ಮೇಲುಕೋಟೆಗೆ ಬಂದು ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದಿದ್ದೇನೆ. ದೇವರ ಆಶೀರ್ವಾದವಾಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ದಾಸೋಹ ಭವನದ ಕೊರತೆ ಇದೆ ಎಂದು ಜಿಲ್ಲಾಧಿಕಾರಿ ನನ್ನ ಗಮನಕ್ಕೆ ತಂದಿದ್ದಾರೆ ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನೊಂದು ವಾರದಲ್ಲಿ ದಾಸೋಹ ಭವನದ ಕೊರತೆ ನೀಗಿಸುವ ಪ್ರಯತ್ನ ಮಾಡ್ತೀನಿ. 2ನೇ ತಾರೀಕಿನಂದು ಬೆಂಗಳೂರಿನಲ್ಲಿ ನಡೆಯವ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡ್ತೀನಿ. ದಾಸೋಹ ಭವನ ನಿರ್ಮಾಣಕ್ಕೆ 2ಕೋಟಿ ರೂ. ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.