ನವವಿವಾಹಿತೆಯೋರ್ವಳು  ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಬರೆದ ಆ ಡೆತ್‌ನೋಟ್‌ನಲ್ಲಿ ಏನಿತ್ತು?

ಟೇಕಲ್ (ಅ.06)‌: ಕಳೆದ 4 ತಿಂಗಳ ಹಿಂದೆಯಷ್ಟೆವಿವಾಹವಾಗಿದ್ದ ಯುವತಿಯೊಬ್ಬಳು ವರದಕ್ಷಿಣೆ ಹಿಂಸೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ಮಹಿಳೆಯನ್ನು ಮಾಸ್ತಿ ಹೋಬಳಿಯ ಬಿಟ್ನಹಳ್ಳಿ ಗ್ರಾಮದ ಲತಾ (21) ಎಂದು ಗುರ್ತಿಸಲಾಗಿದೆ. ಬಿಟ್ನಹಳ್ಳಿ ಗ್ರಾಮದ ಮುನಿರಾಜ್‌ ಹಾಗೂ ನಾರಾಯಣಮ್ಮ ಎಂಬುವರ ಮಗಳಾದ ಲತಾಳನ್ನು ಡಿ.ಎನ್‌.ದೊಡ್ಡಿ ಗ್ರಾಪಂ ವ್ಯಾಪ್ತಿಯ ಕಡದನಹಳ್ಳಿ ಗ್ರಾಮದ ಕೆಂಪಣ್ಣ ಎಂಬುವರ ಮಗನಾದ ಮಂಜುನಾಥ್‌ರೊಂದಿಗೆ ಜೂನ್‌ 15 ರಂದು ಮದುವೆ ಮಾಡಿಕೊಡಲಾಗಿತ್ತು.

ಪತಿಯ ಸಾವಿನ ನಡುವೆ ಅವಳಿ ಮಕ್ಕಳಿಗೆ ಜನ್ಮ .

ಮಂಜುನಾಥ್‌ ಪತ್ನಿ ಲತಾಳೊಂದಿಗೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಬಾಡಿಗೆ ಮನೆಯಲ್ಲಿ ಜೀವನ ಆರಂಭಿಸಿದರು. ಒಂದು ತಿಂಗಳು ಕಳೆಯುವ ವೇಳೆಗೆ ಮಂಜುನಾಥ್‌ ಪತ್ನಿಗೆ ಮನೆಯಿಂದ ಹಣ ತರುವಂತೆ ಪಿಡಿಸಿದ್ದಾನೆ. ನಂತರ ಆಕೆಯನ್ನು ತವರು ಮನೆಯಲ್ಲಿ ಬಿಟ್ಟು ಹೋಗಿದ್ದಾನೆ. ಆಗ ಆಕೆ ತನ್ನ ತಂದೆಗೆ ಪತಿ ಹಣಕ್ಕಾಗಿ ಒತ್ತಾಯ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾಳೆ.

ತಂದೆ ಮುನಿರಾಜ್‌ ಜಮೀನು ಮಾರಿ ಹಣ ನೀಡುವುದಾಗಿ ಮಗಳಿಗೆ ತಿಳಿಸಿ ತೋಟಕ್ಕೆ ಹೋಗಿದ್ದಾನೆ. ಈ ಸಮಯದಲ್ಲಿ ಲತಾ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ. ತನ್ನ ಸಾವಿಗೆ ಗಂಡ ಮಂಜುನಾಥ್‌ ನೇರ ಹೊಣೆ ಎಂದು ಲತಾ ಡೆತ್‌ ನೋಟ್‌ ಬರೆದಿಟ್ಟಿದಾದಳೆ.

ಈ ಬಗ್ಗೆ ಪೋಷಕರು ಮಾಸ್ತಿ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್‌ ಪಿ ಸಾಹೀಲ್‌ ಬಾಗ್ಲಾ, ಸಿಪಿಐ ಮಾರ್ಕೋಂಡಪ್ಪ, ಮಾಸ್ತಿ ಠಾಣೆಯ ಪಿಎಸ್‌ಐ ಪ್ರದೀಪ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮಂಜುನಾಥನನ್ನು ಮಾಸ್ತಿ ಪೋಲಿಸರು ಬಂಧಿಸಿದ್ದಾರೆ.