ಮಂಗಳೂರು(ಡಿ.10): ಅಂಬಾರಿ ಡ್ರೀಮ್‌ ಕ್ಲಾಸ್‌, ರಾಜಹಂಸ, ವೋಲ್ವೋ ಸೇರಿದಂತೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ ಮಾಚ್‌ರ್‍ನೊಳಗೆ ಮತ್ತೆ 50 ಹೊಸ ಬಸ್‌ಗಳ ಸೇರ್ಪಡೆಯಾಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬಿಜೈನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಸೋಮವಾರ ಮಂಗಳೂರು-ಹೈದರಾಬಾದ್‌ ಮಧ್ಯೆ ಎರಡು ಹೊಸ ಅಂಬಾರಿ ಡ್ರೀಮ್‌ಕ್ಲಾಸ್‌ ಮಲ್ಟಿಆ್ಯಕ್ಸಿಲ್‌ ಎಸಿ ಸ್ಲೀಪರ್‌ ಬಸ್‌ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ.

ಕಟೀಲು ಮೇಳದಿಂದ ಪಟ್ಲ ಹೊರಹಾಕಿದ ಟ್ರಸ್ಟಿಗಳಿಗೆ ಹೈಕೋರ್ಟ್ ತರಾಟೆ

ಈ ಸಂದರ್ಭ ಮಾತನಾಡಿದ ಅವರು, ಗುಣಮಟ್ಟದ ಸಂಚಾರ ಸೇವೆಗೆ ಕೆಎಸ್‌ಆರ್‌ಟಿಸಿ ಮಾದರಿಯಾಗಿದೆ. ಈಗಾಗಲೇ ಪ್ರಯಾಣಿಕರಿಗೆ ವಿವಿಧ ರೀತಿಯ ಸವಲತ್ತುಗಳನ್ನು ನೀಡುತ್ತಿದೆ ಎಂದು ಹಾರೈಸಿದ್ದಾರೆ.

ಮುಂದೆ ಸೇರ್ಪಡೆಗೊಳ್ಳಲಿರುವ ಇನ್ನೆರಡು ಹೊಸ ಅಂಬಾರಿ ಡ್ರೀಮ್‌ ಕ್ಲಾಸ್‌ ಮಂಗಳೂರಿನಿಂದ ಅಂತಾರಾಜ್ಯ ಪ್ರಯಾಣವನ್ನು ಇನ್ನಷ್ಟೇ ನಿಗದಿಪಡಿಸಬೇಕಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬಿಜೆಪಿ‌ ಬರುತ್ತೆ, ನಾವು ಸಾಯ್ತೇವೆ ಎಂದ ಹಿರಿಯ ಕೈ ಮುಖಂಡ

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ನಮ್‌ರ್‍ ಸೇರಿದಂತೆ ನಗರ ಸಾರಿಗೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ. ಈ ಸಂದರ್ಭ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌, ಸಂಚಾರ ನಿಯಂತ್ರಕ ಇಸ್ಮಾಯಿಲ್‌, ಯಾಂತ್ರಿಕ ಅಧಿಕಾರಿ ಆಶಾಲತಾ, ಹಿರಿಯ ಘಟಕ ವ್ಯವಸ್ಥಾಪಕ ದಿವಾಕರ್‌ ಇದ್ದರು.

ಹೈದರಾಬಾದ್‌ಗೆ ಅಂಬಾರಿ ಸ್ಲೀಪರ್‌

ಮಂಗಳೂರು ಘಟಕದಿಂದ ಪೂನಾ ಬಳಿಕ ಈಗ ಹೈದರಾಬಾದ್‌ಗೆ ಕಾರ್ಯಾಚರಿಸುತ್ತಿರುವ ಅಂಬಾರಿ ಡ್ರೀಮ್‌ಕ್ಲಾಸ್‌ ಮಲ್ಟಿಆ್ಯಕ್ಸಿಲ್‌ ಎ.ಸಿ. ಸ್ಲೀಪರ್‌ನ ಎರಡನೇ ಬಸ್‌ ಇದಾಗಿದೆ.

ಮಂಗಳೂರು ಬಸ್‌ ನಿಲ್ದಾಣದಿಂದ ಪ್ರತಿದಿನ ಸಂಜೆ 3 ಗಂಟೆಗೆ ಹೊರಟು ಉಡುಪಿಗೆ 4 ಗಂಟೆ, ಮಣಿಪಾಲ 4.10, ಕುಂದಾಪುರ 5 ಗಂಟೆ, ಭಟ್ಕಳ 6 ಗಂಟೆ, ಹೈದರಾಬಾದ್‌ಗೆ ಮರುದಿನ ಬೆಳಗ್ಗೆ 8.30 ಗಂಟೆಗೆ ತಲುಪಲಿದೆ. ಹೈದರಾಬಾದ್‌ನಿಂದ ಸಂಜೆ 5 ಗಂಟೆಗೆ ಹೊರಟು ರಾತ್ರಿ 9.10 ರಾಯಚೂರು, ಮರುದಿನ ಬೆಳಗ್ಗೆ 8.50 ಕುಂದಾಪುರ ಹಾಗೂ ಬೆಳಗ್ಗೆ 10 ಗಂಟೆಗೆ ಮಂಗಳೂರು ತಲುಪಲಿದೆ. ಮಂಗಳೂರು-ಹೈದರಾಬಾದ್‌ ನಡುವೆ ಪ್ರಯಾಣದರ 1,400 ರು. ಇರುತ್ತದೆ. ಇದು 40 ಸೀಟುಗಳನ್ನು ಹೊಂದಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌ ತಿಳಿಸಿದರು.

ನರ್ಮ್‌ ಬಸ್‌ ಸಂಚಾರ ಬಗ್ಗೆ ಜ.4ರಂದು ಸಭೆ

ಮಂಗಳೂರು ನಗರದಲ್ಲಿ ನರ್ಮ್‌ ಬಸ್‌ ಸಂಚಾರಕ್ಕೆ ಸಂಬಂಧಿಸಿ ಹೈಕೋರ್ಟ್‌ ದೂರನ್ನು ಜಿಲ್ಲಾಧಿಕಾರಿ ಹಂತದಲ್ಲಿ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜನವರಿ 4ರಂದು ಸಾರಿಗೆ ಪ್ರಾಧಿಕಾರದ ಸಭೆ ನಡೆಸಲಾಗುವುದು ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಈಗಾಗಲೇ ನಮ್‌ರ್‍ ಬಸ್‌ ಓಡಾಟ ನಡೆಸುತ್ತಿದೆ. ಇನ್ನೂ 15 ನಮ್‌ರ್‍ ಬಸ್‌ಗಳ ಓಡಾಟಕ್ಕೆ ಪರವಾನಗಿ ಬಾಕಿ ಇದೆ. ಈ ವಿಚಾರವನ್ನು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ನರ್ಮ್‌ ವಿಶೇಷತೆಗಳು:

ನರ್ಮ್‌ ಬಸ್‌ನಲ್ಲಿ ಒಂದನೇ ತರಗತಿಯಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ, 8ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿನಿಯರಿಗೆ ವಾರ್ಷಿಕ 400 ರು., ವಿದ್ಯಾರ್ಥಿಗಳಿಗೆ 600 ರು. ರಿಯಾಯಿತಿ ಪಾಸ್‌ ಸೌಲಭ್ಯ, ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ 900 ರು. ರಿಯಾಯತಿ ಪಾಸ್‌ ಸೌಲಭ್ಯ, ಹಿರಿಯ ನಾಗರಿಕರಿಗೆ ಶೇ.25 ರಿಯಾಯಿತಿ, ವಿಕಲಚೇತನರಿಗೆ 100 ಕಿ.ಮೀ. ವರೆಗೆ ಉಚಿತ ಪ್ರಯಾಣ, ಅಂಧರು, ಎಂಡೋಸಲ್ಫಾನ್‌ ಪೀಡಿತರು, ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಪಾಸ್‌ ಸೌಲಭ್ಯ ನೀಡಲಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.