ಇಂದು ಮದ್ಯಾಹ್ನ 12 ಗಂಟೆಗೆ ಎಸ್ಪಿ ಕಚೇರಿಯಲ್ಲಿ ರವೀಂದ್ರ ಶರಣಾಗಲಿದ್ದಾನೆ. ಕಳೆದೊಂದು ದಶಕದಿಂದ ರವೀಂದ್ರ ಭೂಗತನಾಗಿದ್ದನು ಜಿಲ್ಲೆಯ ವಿವಿಧ ಠಾಣೆಯಲ್ಲಿ ರವೀಂದ್ರ ಮೇಲೆ ಒಟ್ಟು 14 ಪ್ರಕರಣಗಳಿಗೆ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯ ಸಮ್ಮುಖದಲ್ಲಿ ರವೀಂದ್ರ ಶರಣಾಗಲಿದ್ದಾನೆ.
ಚಿಕ್ಕಮಗಳೂರು(ಫೆ.01): ಕರುನಾಡಲ್ಲಿ ಕೆಂಪು ಉಗ್ರರ ಇತಿಹಾಸ ಯುಗಾಂತ್ಯವಾಗಿದೆ. ಜಿಲ್ಲೆಯ ಕಾಡಿನಲ್ಲಿದ್ದ ನಕ್ಸಲರ ಕೊನೆ ವಿಕೆಟ್ ಪತನವಾಗಿದೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆ ನಕ್ಸಲರಿಂದ ಇದೀಗ ಮುಕ್ತವಾಗಿದೆ. ಕೋಟೆಹೊಂಡ ರವೀಂದ್ರ ಕೂಡ ಇಂದು(ಶನಿವಾರ) ಶರಣಾಗಲಿದ್ದಾನೆ.
ಇಂದು ಮದ್ಯಾಹ್ನ 12 ಗಂಟೆಗೆ ಎಸ್ಪಿ ಕಚೇರಿಯಲ್ಲಿ ರವೀಂದ್ರ ಶರಣಾಗಲಿದ್ದಾನೆ. ಕಳೆದೊಂದು ದಶಕದಿಂದ ರವೀಂದ್ರ ಭೂಗತನಾಗಿದ್ದನು ಜಿಲ್ಲೆಯ ವಿವಿಧ ಠಾಣೆಯಲ್ಲಿ ರವೀಂದ್ರ ಮೇಲೆ ಒಟ್ಟು 14 ಪ್ರಕರಣಗಳಿಗೆ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯ ಸಮ್ಮುಖದಲ್ಲಿ ರವೀಂದ್ರ ಶರಣಾಗಲಿದ್ದಾನೆ.
ಕರ್ನಾಟಕದ ಕೊನೆಯ ನಕ್ಸಲ್ ರವೀಂದ್ರ ಪತ್ತೆಗೆ ಪೊಲೀಸರ ಮಾರುವೇಷ!
ಜನವರಿ 8 ರಂದು 6 ಜನ ನಕ್ಸಲರು ಸಿಎಂ ಸಿದ್ದರಾಮಯ್ಯ ಅವರ ಎದುರು ಶರಣಾಗಿದ್ದರು. ಕಾಡಲ್ಲಿ ಉಳಿದಿದ್ದ ಒಬ್ಬನೇ ಒಬ್ಬ ನಕ್ಸಲ್ ರವೀಂದ್ರ ಕೂಡ ಇಂದು ಶರಣಾಗಲಿದ್ದಾನೆ. ರವೀಂದ್ರ ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವನಾಗಿದ್ದಾನೆ.