Asianet Suvarna News Asianet Suvarna News

RV ತಾಂತ್ರಿಕ ಮಹಾವಿದ್ಯಾಲಯದಿಂದ ರಾಷ್ಟ್ರಮಟ್ಟದ ಹ್ಯಾಕತಾನ್ 'ಹ್ಯಾಕ್ 4 ಸೊಕ್ 2.0' ಕಾರ್ಯಕ್ರಮ!

ಫೆಬ್ರವರಿ ಮೂರರಂದು  ರಾ.ವಿ.ತಾಂತ್ರಿಕ ಮಹಾವಿದ್ಯಾಲಯದ IEEE ಕಂಪ್ಯೂಟರ್ ಸಂಸ್ಥೆಯು ರಾಷ್ಟ್ರಮಟ್ಟದ ಹ್ಯಾಕತಾನ್ "ಹ್ಯಾಕ್4ಸೊಕ್ 2.0" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

National level hackathon Hack 4 Soc 2 0 Rrogram from RV Technical University gvd
Author
First Published Feb 4, 2024, 2:09 PM IST

ಫೆಬ್ರವರಿ ಮೂರರಂದು  ರಾ. ವಿ. ತಾಂತ್ರಿಕ ಮಹಾವಿದ್ಯಾಲಯದ IEEE ಕಂಪ್ಯೂಟರ್ ಸಂಸ್ಥೆಯು ರಾಷ್ಟ್ರಮಟ್ಟದ ಹ್ಯಾಕತಾನ್ "ಹ್ಯಾಕ್4ಸೊಕ್ 2.0" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರ ಉದ್ಘಾಟನೆ ಸಮಾರಂಭದಲ್ಲಿ IEEE ರಾ. ವಿ. ತಾಂತ್ರಿಕ ಮಹಾವಿದ್ಯಾಲಯದ ಶಾಖಾ ಮುಖ್ಯ ಸಲಹೆಗಾರರದ ಡಾ.ಶೈಲಶ್ರೀ ಎನ್‌ ಅವರು ಸ್ವಾಗತ ಭಾಷಣವನ್ನು ನೀಡಿದರು. IEEE ಕಂಪ್ಯೂಟರ್ ಸೊಸೈಟಿಯ ಅಧ್ಯಕ್ಷರಾದ ಲಿಖಿತ್ ಇವರು ಕಾರ್ಯಕ್ರಮದ ಕುರಿತು ಮಾಹಿತಿಯನ್ನು ನೀಡಿದರು. 

ಈ ಕಾರ್ಯಕ್ರಮವನ್ನು ತಂತ್ರಜ್ಞಾನದ ಮೂಲಕ ಸಾಮಾಜಿಕ ಸವಾಲುಗಳನ್ನು ಎದುರಿಸುವ ಎರಡನೇ ಹೆಜ್ಜೆಯಾಗಿ ಪರಿಚಯಿಸಿದರು. ಹ್ಯಾಕ್ ಫಾರ್ ಸಾಕ್ 2.0 ಭಾರತದಾದ್ಯಂತ ಕಾಲೇಜುಗಳಿಗೆ ತನ್ನ  ಉದ್ದೇಶವಾದ  ತಾಂತ್ರಿಕ ನಾವೀನ್ಯತೆಯನ್ನು ತಲುಪಿಸಲು ಬದಲಾವಣೆಯ ಶಕ್ತಿಯಾಗಿ ಮಾರ್ಪಟ್ಟಿತು. ಜನರೇಟಿವ್ AI ಫಾರ್ ಸಾಕ್, ಬ್ಲಾಕ್‌ಚೈನ್ ಫಾರ್ ಸಾಕ್ ಮತ್ತು ಫಿನ್ ಟೆಕ್ ಫಾರ್ ಸಾಕ್ ಎಂಬ ಮೂರು ವಿಶಾಲ ವರ್ಗಗಳ ಪರಿಚಯವು ಸ್ಪರ್ಧಿಗಳಿಗೆ ಪರಿವರ್ತನಾತ್ಮಕ ಪರಿಹಾರಗಳನ್ನು ಪ್ರಸ್ತಾಪಿಸಲು ಪ್ರೋತ್ಸಾಹಿಸಿತು. 

ಮೆಡಿಕಲ್ ಕಾಲೇಜು, ಪರಿಷ್ಕೃತ ಅಂದಾಜಿಗೆ ಕ್ಯಾಬಿನೆಟ್ ಅಸ್ತು: ಸಚಿವ ಶಿವಾನಂದ ಪಾಟೀಲ್‌

ಇದಾದ ಬಳಿಕ ಮುಖ್ಯ ಅತಿಥಿಗಳಾದ ಡಾ. ಪ್ರಶಾಂತ್ ಮಿಶ್ರ, ಉಪಾಧ್ಯಕ್ಷರು IEEE ಬೆಂಗಳೂರು ವಿಭಾಗ, ಇವರು IEEE ಇಂದ ವಿದ್ಯಾರ್ಥಿಗಳಿಗೆ ಇರುವ ಉಪಯೋಗಗಳ ಬಗ್ಗೆ ಪರಿಚಯ ನೀಡಿದರು. ಹಾಗೂ ವಿದ್ಯಾರ್ಥಿ ಜೀವನದಲ್ಲಿ IEEE ನಂತಹ ತಾಂತ್ರಿಕ ಕ್ಲಬ್ ಗಳ ಭಾಗವಾಗಿರುವುದರಲ್ಲಿ ಇರುವ ಅನುಕೂಲಗಳ ಬಗ್ಗೆ ಎಚ್ಚರ ಮೂಡಿಸಿದರು. ಕಾಲೇಜಿನ ಡೀನ್ ಸ್ಟೂಡೆಂಟ್ ಅಫೇರ್ಸ್ ಆದ ಡಾ. ಬಿ. ವಿ. ಉಮಾ ಇವರು ಮಕ್ಕಳಲ್ಲಿ ತಾಂತ್ರಿಕ ವಿಷಯಗಳನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸುವುದರಿಂದ ಆಗುವ ಸಾಕಾರಾತ್ಮಕ ಪರಿಣಾಮಗಳ ಬಗ್ಗೆ ಮಾತನಾಡಿದರು. ಬಳಿಕ IEEE ಕಂಪ್ಯೂಟರ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ಪ್ರಜ್ವಲ್ ಪವಾರ್ ರವರು ವಂದನಾರ್ಪಣೆ ನೆರವೇರಿಸಿಕೊಟ್ಟರು.

Follow Us:
Download App:
  • android
  • ios