ಉಡುಪಿ(ಏ.25): ಉಡುಪಿ ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಕಟ್ಟಿಬೆಳೆಸಿದ ಹಿರಿಯ ನಾಯಕ ಎಂ. ಸೋಮಶೇಖರ ಭಟ್‌ ಅವರಿಗೆ ಶುಕ್ರವಾರ ಬೆಳಗ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿದರು.

ಮೋದಿ ಅವರ ಕರೆಯಿಂದ ರೋಮಾಂಚಿತರಾದ ಭಟ್‌, ತಮ್ಮಂತಹ ಕಾರ್ಯಕರ್ತರ ಆರೋಗ್ಯವನ್ನು ವಿಚಾರಿಸುತ್ತಿರುವುದಕ್ಕೆ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ತಮಗೆ ಬಹಳ ಸಂತೋಷವಾಗುತ್ತಿದೆ ಎಂದರು.

'ಹೆರಿಗೆಗೂ ಇಲ್ಲೇ ಬರ್ತೀನಿ': ಡಿಸ್ಚಾರ್ಜ್‌ ಸಂದರ್ಭ ಕೊರೋನಾ ಸೋಂಕಿತೆಯ ಭಾವುಕ ಮಾತು..!

ತಾನು ಬಾಲ್ಯದಿಂದಲೇ ಅಂದರೇ 1ನೇ ತರಗತಿಯಿಂದಲೇ ಸಂಘದ ಕಾರ್ಯಕರ್ತನಾಗಿದ್ದೆ, ಆರ್‌ಎಸ್‌ಎಸ್‌ ನ ನಾಯಕರಾಗಿದ್ದ ಭಯ್ಯಾಜಿ ರಾವ್‌ ಜೋಷಿ ಅವರೊಂದಿಗೆ ಕೆಲಸ ಮಾಡಿದ್ದೆ, ನಂತರ ಜನಸಂಘದಿಂದ ಉಡುಪಿ ಪುರಸಭೆಯ ಸದಸ್ಯನಾಗಿದ್ದೆ. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೂ ಹೋಗಿದ್ದೆ ಎಂದು ತಮ್ಮನ್ನು ಮೋದಿ ಅವರಿಗೆ ಪರಿಚಯಿಸಿದರು.

ಶಂಕರಮೂರ್ತಿ, ರಾಮ ಭಟ್‌, ಟಿಆರ್‌ಕೆ ಭಟ್‌ಗೆ ಮೋದಿ ಕರೆ

1968ರಲ್ಲಿ ಇಡೀ ದೇಶದಲ್ಲಿಯೇ ದಿಲ್ಲಿ ಕಾರ್ಪೋರೇಶನ್‌ನಲ್ಲಿ ಮತ್ತು ಉಡುಪಿ ಪುರಸಭೆಯಲ್ಲಿ ಮಾತ್ರ ಜನಸಂಘ ಅಧಿಕಾರ ಪಡೆದಿತ್ತು. ಆಗ ಉಡುಪಿ ನಗರಸಭೆಯ ಸದಸ್ಯನಾಗುವ ಅದೃಷ್ಟನನ್ನದಾಗಿತ್ತು. ಡಾ. ವಿ. ಎಸ್‌. ಆಚಾರ್ಯ ಅವರು ಉಡುಪಿ ಪುರಸಭೆಯ ಅಧ್ಯಕ್ಷರಾಗಿದ್ದರು. ಜೈಪುರದಲ್ಲಿ ನಡೆದ ಅಧಿವೇಶನದಲ್ಲಿ ತಮ್ಮನ್ನು ನಾನು ಭೇಟಿಯಾಗಿದ್ದೆ, ತಾವು ನಮ್ಮನ್ನು ಉದ್ದೇಶಿಸಿ ಮಾತನಾಡಿದ್ದೀರಿ ಎಂದು ಮೋದಿ ಅವರಿಗೆ ನೆನಪಿಸಿದರು. ಅದಕ್ಕೆ ಮೋದಿ ಅವರು ಅದು ನಗರಸಭಾ ಸದಸ್ಯರ ಅಧಿವೇಶನವಾಗಿತ್ತು ಎಂದು ಹೇಳಿದರು.

ಕರಾವಳಿ ಬಿಜೆಪಿ ಭೀಷ್ಮನಿಗೆ ಮೋದಿ ಕರೆ, ಭಟ್ ಜಿ ಆಪ್ ಕೈಸೆ ಹೋ

ಮೋದಿ ಅವರು ಹಿಂದಿಯಲ್ಲಿ ಮಾತನಾಡಿದರು. ಆರಂಭದಲ್ಲಿ ನಮಸ್ತೆ ಸೋಮಶೇಖರ್‌ ಭಟ್‌ ಜೀ, ಕೈಸೆ ಹೇ ಆಪ್‌ ಎಂದು ಕೇಳಿದರು. ಆಗ ಭಾವುಕರಾದ ಭಟ್‌ ಅಚ್ಚೇ ಹ್ಞೆಂ, ಆಪ್‌ ಸೇ ಬಹುತ ಅಚ್ಚ ಲಗಾ ಎಂದು ಹೇಳಿ ಇಂಗ್ಲಿಷ್‌ ನಲ್ಲಿ ಮಾತು ಮುಂದುವರಿಸಿದರು. ಕೊನೆಗೆ ಮೋದಿ ಅವರು ಸೋಮಶೇಖರ್‌ ಭಟ್‌ ಅವರಿಗೆ ಆರೋಗ್ಯವನ್ನು ನೋಡಿಕೊಳ್ಳುವಂತೆ ಸಲಹೆ ಮಾಡಿದರು.