Asianet Suvarna News Asianet Suvarna News

ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಪ್ರವೇಶ;  ರೀಚಾರ್ಜ್‌ ಮಾಡಲು ಪರದಾಟ!

ನಮ್ಮ ಮೆಟ್ರೋ ಎರಡನೇ ದಿನದ ಪ್ರಯಾಣ ಹೇಗಿತ್ತು?/ ಅನ್ ಲಾಕ್ ನಂತರ ತೆರೆದುಕೊಂಡ ನಮ್ಮ ಮೆಟ್ರೋ/ ರೀಚಾರ್ಜ್ ಮಾಡಿಸುವುದೇ ದೊಡ್ಡ ಸಮಸ್ಯೆ/ ಕೆಲಸ ಮಾಡದ ಯಂತ್ರಗಳು, ಆನ್ ಲೈನ್ ಅಪ್ಲಿಕೇಶನ್

Namma Metro App launch delay irks travellers Bengaluru
Author
Bengaluru, First Published Sep 8, 2020, 11:03 PM IST

ಬೆಂಗಳೂರು(ಸೆ. 08) ನಮ್ಮ ಮೆಟ್ರೋ ಸಂಚಾರ ಆರಂಭವಾಗಿದೆ. ಕೇವಲ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಅವಕಾಶ ಕೊಡಲಾಗಿದೆ ಎಂಬ ದೂರುಗಳು ಬಂದವು.

ಟಾಪ್-ಅಪ್ ಆಯ್ಕೆಯಲ್ಲಿಯೂ ಗೊಂದಲಗಳಿದ್ದವು.  ನಮ್ಮ ಮೆಟ್ರೋ ಆಪ್ ಸರಿಯಾಗಿ ಕೆಲಸ ಮಾಡದೇ ಇದ್ದಿದ್ದು ಹಲವರ ಸಿಟ್ಟಿಗೆ ಕಾರಣವಾಯಿತು.

ಆಪ್ ಮೂಲಕ ರೀಚಾರ್ಜ್ ಮಾಡಿಕೊಳ್ಳಲು ಬಿಎಂಆರ್‌ಸಿಎಲ್ ಅವಕಾಶ ಮಾಡಿಕೊಟ್ಟಿತ್ತು. ಸದ್ಯಕ್ಕೆ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಲು ಮಾತ್ರ ಅವಕಾಶ ಸಿಗುತ್ತಿದೆ. ಕ್ಯೂರ್ ಕೋಡ್ ಸ್ಕಾನ್ ಮಾಡಿ  ನಿಲ್ದಾಣದ ಕೌಂಟರ್ ನಲ್ಲಿ ಹಣ ಭರ್ತಿ ಮಾಡಬೇಕಾದ ಸ್ಥಿತಿಯೂ ಇದೆ. ಕೌಂಟರ್ ಬಳಿ ಜನಜಂಗುಳಿ ನಿರ್ಮಾಣಕ್ಕೆ ಇದು ಕಾರಣವಾಯಿತು. ಅನೇಕ ದಿನದಿಂದ ಮೆಟ್ರೋ ಬಂದ್ ಇದ್ದ ಕಾರಣ ಟಿಕೆಟ್ ವೆಂಡಿಂಗ್ (ಟೋಕನ್) ಯಂತ್ರಗಳು ಸರಿಯಾಗಿ ಕೆಲಸ ಮಾಡದ ದೂರುಗಳು ಬಂದವು.

ಒಂದು ತಿಂಗಳ ನಂತರ ಆರಂಭವಾದ ನಮ್ಮ ಮೆಟ್ರೋ

ಆನ್ ಲೈನ್ ನಲ್ಲಿ ನೀವು ನಿಲ್ದಾಣಕ್ಕೆ ಬರುವ ಒಂದು ಗಂಟೆಗೂ ಮುನ್ನ ರೀಚಾರ್ಜ್ ಮಾಡಿಕೊಳ್ಳಿ ಎಂದು ಬಿಎಂಆರ್‌ಸಿಎಲ್ ನಿರ್ದೇಶಕ ಅಜಯ್ ಸೇಥ್ ಮಾಹಿತಿ ನೀಡಿದರು.

ಗೂಗಲ್ ಪೇ ಬಳಸಿಯೂ ರೀಚಾರ್ಜ್ ಮಾಡಲು ಸಾರ್ಧಯವಾಗುತ್ತಿಲ್ಲ ಎಂಬ ದೂರುಗಳು ಬಂದವು.  ಒಟ್ಟಿನಲ್ಲಿ ನಮ್ಮ ಮೆಟ್ರೋ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ಹಿಂದಿನ ಸಸೂತ್ರ ಹಾದಿಗೆ ಮರಳಲು ಇನ್ನೆರಡು ದಿನ ಬೇಕಾದೀತು. ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇತ್ತು . 

Follow Us:
Download App:
  • android
  • ios