ಕೊಬ್ಬರಿ ಖರೀದಿಗೆ ಹೆಸರು ನೋಂದಣಿ ಆರಂಭ: ಡೀಸಿ

ಪ್ರತಿ ಕ್ವಿಂಟಲ್‌ ಉಂಡೆ ಕೊ​ಬ್ಬ​ರಿಗೆ ಸರ್ಕಾರ 11,750 ರು. ಕ​ನಿಷ್ಠ ಬೆಂಬಲ ಬೆಲೆ ಘೋ​ಷಿ​ಸಿದ್ದು, ಅರ್ಹ ರೈ​ತರು ಹೆ​ಸರು ನೋಂದಾ​ಯಿ​ಸಿ​ಕೊ​ಳ್ಳು​ವಂತೆ ಜಿ​ಲ್ಲಾ​ಧಿಕಾರಿ ಡಾ.ಎಚ್‌.ಎನ್‌.ಗೋ​ಪಾ​ಲ​ಕೃಷ್ಣ ಸ​ಲಹೆ ನೀ​ಡಿ​ದರು.

Name registration for purchase of coconut begins  DC snr

 ಮಂಡ್ಯ :  ಪ್ರತಿ ಕ್ವಿಂಟಲ್‌ ಉಂಡೆ ಕೊ​ಬ್ಬ​ರಿಗೆ ಸರ್ಕಾರ 11,750 ರು. ಕ​ನಿಷ್ಠ ಬೆಂಬಲ ಬೆಲೆ ಘೋ​ಷಿ​ಸಿದ್ದು, ಅರ್ಹ ರೈ​ತರು ಹೆ​ಸರು ನೋಂದಾ​ಯಿ​ಸಿ​ಕೊ​ಳ್ಳು​ವಂತೆ ಜಿ​ಲ್ಲಾ​ಧಿಕಾರಿ ಡಾ.ಎಚ್‌.ಎನ್‌.ಗೋ​ಪಾ​ಲ​ಕೃಷ್ಣ ಸ​ಲಹೆ ನೀ​ಡಿ​ದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರೈತರಿಂದ ನೇರವಾಗಿ ಉಂಡೆ ಕೊಬ್ಬರಿಯನ್ನು ಖರೀದಿಸುವ ಸಂಬಂಧ ಜಿಲ್ಲಾ ಟಾಸ್‌್ಕಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಆದೇಶದಂತೆ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ರೈತರಿಂದ ನೇರವಾಗಿ ನಾಫೆಡ್‌ ಸಂಸ್ಥೆಯ ಕರ್ನಾಟಕ ಸರ್ಕಾರದ ಸಹಕಾರ ಮಾರಾಟ ಮಹಾ ಮಂಡಳಿರವರು ಖರೀದಿ ಪ್ರಕ್ರಿಯೆ ನಡೆಸಲಿದ್ದು, ನಾಗಮಂಗಲ ತಾಲ್ಲೂಕಿನ ಕದಬಳ್ಳಿ ಹಾಗೂ ಕೆ.ಆರ್‌.ಪೇಟೆ ಎ.ಪಿ.ಎಂ.ಸಿ ಆವರಣದಲ್ಲಿ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.

ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್‌ ಉಂಡೆ ಕೊಬ್ಬರಿಯನ್ನು ಪ್ರತಿ ಎಕರೆಗೆ 6 ಕ್ವಿಂಟಲ್‌ನಂತೆ ಖರೀದಿಸಬೇಕು. ರೈತರ ನೋಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 6 ತಿಂಗಳವರೆಗೆ ನಿಗದಿಪಡಿಸಲಾಗಿದೆ ಎಂ​ದರು.

ನೋಂದಣಿ ಹಾಗೂ ಖರೀದಿಗೆ ಬೇಕಿರುವ ಸಿಬ್ಬಂದಿಯನ್ನು ನೇಮಕ ಮಾಡಲು, ಖರೀದಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ವ್ಯವಸ್ಥೆ ಮಾಡಿಕೊಳ್ಳಬೇಕು. ರೈತರಿಗೆ ನೆರವಾಗುವ ರೀತಿ ಸಹಾಯವಾಣಿ ಪ್ರಾರಂಭಿಸುವುದು ಸೂಕ್ತ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಪ್ರಮುಖವಾಗಿ ಜಿಲ್ಲೆಯ ಕೆ.ಆರ್‌ ಪೇಟೆ ಹಾಗೂ ನಾಗಮಂಗಲ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ತೆಂಗಿನ ಮರಗಳಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 68466 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗಿನ ಮರಗಳಿದ್ದು, ಒಟ್ಟು ಉತ್ಪಾದನೆ 5096 ಲಕ್ಷ ಕ್ವಿಂಟಲ್‌ಗಳಾಗಿರುತ್ತವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಎಪಿಎಂಸಿ ಉಪ ನಿರ್ದೇಶಕ ಕೆ.ಶ್ರೀನಿವಾಸ ರೆಡ್ಡಿ, ಕೆ.ಆರ್‌ ಪೇಟೆ ಎಪಿಎಂಸಿ ಕಾರ್ಯದರ್ಶಿ ರಫಿಕ್‌ ಅಹಮ್ಮದ್‌, ನಾಗಮಂಗಲ ಎಪಿಎಂಸಿಯ ಸೋಮಶೇಖರ್‌, ರಜೀತ್‌, ನಫೇಢ್‌ ಸಂಸ್ಥೆಯ ಸತೀಶ್‌, ತೋಟಗಾರಿಕೆ ಇಲಾಖೆಯ ಚಂದು ಸೇರಿದಂತೆ ಇನ್ನಿತರರು ಹಾಜರಿದ್ದರು.

ಕೊಬ್ಬರಿಗೆ ಶಾಶ್ವತ ಬೆಂಬಲ ಬೆಲೆ ಕೊಡ್ತೀನಿ

ಹಾಸನ  : ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿ ಬೆಳೆ ಬೆಳೆಯುವ ರೈತರಿಗೆ 15 ಸಾವಿರ ರುಪಾಯಿ ಬೆಂಬಲ ಬೆಲೆ ಕೊಡದಿದ್ದರೆ ನಾನು ನಿಮಗೆ ಮುಖ ತೋರಿಸಲ್ಲ. ನಾನು ಮುಂದೆ ಇರ್ತಿನೋ ಇರಲ್ವೋ. ಆದರೆ 2023ಕ್ಕೆ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿಗೆ ಶಾಶ್ವತವಾಗಿ ಬೆಂಬಲ ಬೆಲೆ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಹಾನಸ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ತೆಂಗಿನ ಮರಗಳು ನುಸಿ ರೋಗದಿಂದ ನಾಶವಾಗಿದೆ ಎಂದು ಪ್ರತಿಭಟನೆ ಮಾಡಿ, ದೇವೇಗೌಡರನ್ನು ಕರೆಸಿಕೊಂಡು ಅವರಿಗೆ ಜ್ಯೂಸ್ ಕುಡಿಸಿದ್ದರು. ಆಗ ನರೇಂದ್ರಮೋದಿ, ಸಿದ್ರಾಮಣ್ಣ ಬಂದು ದುಡ್ಡು ಕೊಟ್ರಾ ಇಲ್ಲ. ದೇವೇಗೌಡರ ಮಗ ಕುಮಾರಸ್ವಾಮಿ ದುಡ್ಡು ಕೊಟ್ಟಿದ್ದು. ತೆಂಗಿನಮರ ನಾಶಕ್ಕೆ ಪರಿಹಾರ ನೀಡಿದ 180 ಕೋಟಿಯಲ್ಲಿ ರೂ.ನಲ್ಲಿ ಒಟ್ಟು 53 ಕೋಟಿ ರೂಪಾಯಿ ಹಣ ಅರಸೀಕೆರೆ, ಚನ್ನರಾಯಪಟ್ಟಣಕ್ಕೆ ಕೊಟ್ಟಿದ್ದೇನೆ ಎಂದರು.

Assembly election: ಈ ಮಹಾನುಭಾವ ಜೆಡಿಎಸ್‌ ಮುಗಿಸಲು ಹೊರಟಿದ್ದ: ಕುಮಾರಸ್ವಾಮಿ ಆಕ್ರೋಶ

ರೈತರಿಗೆ 15 ಸಾವಿರ ರೂ. ಬೆಂಬಲ ಬೆಲೆ: ಇನ್ನು ರಾಜ್ಯದಲ್ಲಿ ಕೊಬ್ಬರಿ ಬೆಲೆ ಕುಸಿತ ಅಂತ ಅರಸೀಕೆರೆಯಲ್ಲಿ ಪ್ರತಿಭಟನೆ ಮಾಡಿದರು. ನಮ್ಮ ಪಕ್ಷದ ಬಾವುಟ ಹಿಡಿದುಕೊಂಡು ಹೋರಾಟ ಮಾಡಿದ್ರಾ ಇಲ್ಲ. ಅವರ ಹೋರಾಟಕ್ಕೆ ಬೊಮ್ಮಯಿ ದುಡ್ಡು ಕೊಟ್ಟಿದ್ದಾರಾ.? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿ ಬೆಳೆ ಬೆಳೆಯುವ ರೈತರಿಗೆ 15 ಸಾವಿರ ರೂ. ಬೆಂಬಲ ಬೆಲೆ ಕೊಡದಿದ್ದರೆ ನಾನು ನಿಮಗೆ ಮುಖ ತೋರಿಸಲ್ಲ. ನಾನು ಮುಂದೆ ಇರ್ತಿನೋ ಇರಲ್ವೋ. ಆದರೆ 2023 ಕ್ಕೆ ಅಧಿಕಾರಕ್ಕೆ ಬಂದರೆ ಕೊಬ್ಬರಿಗೆ ಶಾಶ್ವತವಾಗಿ ಬೆಂಬಲ ಬೆಲೆ ಕೊಡ್ತಿನಿ ಎಂದು ಭರವಸೆ ನೀಡಿದರು.

Latest Videos
Follow Us:
Download App:
  • android
  • ios