ಮಲ್ಲೇಶ್ವರಂನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸ್ಥಾಪನೆ: ಸಚಿವ ಅಶ್ವತ್ಥ ನಾರಾಯಣ
ನಾಡಿನ ಸರ್ವಾಂಗೀಣ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿರುವ ಮೈಸೂರು ಯದುವಂಶದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಸದ್ಯದಲ್ಲೇ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವುದು ಎಂದು ಸ್ಥಳೀಯ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರು (ಏ.28): ನಾಡಿನ ಸರ್ವಾಂಗೀಣ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿರುವ ಮೈಸೂರು ಯದುವಂಶದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ (Nalwadi Krishnaraja Wodeyar) ಅವರ ಪ್ರತಿಮೆಯನ್ನು (Statue) ಸದ್ಯದಲ್ಲೇ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವುದು ಎಂದು ಸ್ಥಳೀಯ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr CN Ashwath Narayan) ತಿಳಿಸಿದ್ದಾರೆ.
ಬುಧವಾರ ಮಲ್ಲೇಶ್ವರಂನಲ್ಲಿರುವ (Malleshwaram) ಬಿಎಚ್‌ಇಎಲ್ (BHEL) ಕೈಗಾರಿಕೆಯ ಇ.ಪಿ.ಡಿ. ವಿಭಾಗದ ಕರ್ನಾಟಕ ಸಂಘ ಆಯೋಜಿಸಿದ್ದ ಕನ್ನಡೋತ್ಸವ ವೇಳೆ ಅವರು ಕಾರ್ಖಾನೆಯ ಆವರಣದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ ಮಂಟಪದ ನವೀಕೃತ ಪಾರಂಪರಿಕ ಪ್ರಾಂಗಣವನ್ನು ಉದ್ಘಾಟಿಸಿದರು. ಮೈಸೂರಿನ ಮಹಾರಾಜರು ಇಡೀ ದೇಶದಲ್ಲಿ ಮಾದರಿ ಆಡಳಿತಕ್ಕೆ ಮೇಲ್ಪಂಕ್ತಿಯಾಗಿ, ರಾಜರ್ಷಿ ಎನಿಸಿಕೊಂಡಿದ್ದರು. ಮಹಾತ್ಮ ಗಾಂಧೀಜಿಯವರೇ ಮೈಸೂರು ಸಂಸ್ಥಾನದ ಆಡಳಿತವನ್ನು ಕೊಂಡಾಡಿದ್ದರು. ಬಿಎಚ್‌ಇಎಲ್ ಸೇರಿದಂತೆ ಸಾರ್ವಜನಿಕ ರಂಗದ ಹಲವು ಉದ್ಯಮಗಳ ಸ್ಥಾಪನೆಗೆ ಯದುವಂಶದವರ ಕೊಡುಗೆ ಅಪಾರವಾದುದು.
ಮಂಡ್ಯ ವಿಶ್ವವಿದ್ಯಾಲಯ ಮಾದರಿಯಾಗಿ ಬೆಳೆಯಲಿ: ಅಶ್ವತ್ಥನಾರಾಯಣ
ಈ ಚರಿತ್ರೆ ಈಗಲೂ ಮುಂದುವರಿದಿದ್ದು, ಈಗ ಯದುವೀರ ಕೃಷ್ಣದತ್ತ ಒಡೆಯರ್ ಅವರು ಕನ್ನಡ ಶಾಲೆಗಳ ಸಬಲೀಕರಣವನ್ನು ಕೈಗೊಂಡು ‘ಸ್ವಚ್ಛ ಭಾರತ’ ಆಂದೋಲನಕ್ಕೆ ರಾಯಭಾರಿಗಳಾಗಿದ್ದಾರೆ. ಅಲ್ಲದೆ, ಸ್ವತಃ ತಾವೇ ಮೈಸೂರಿನಲ್ಲಿ ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತಾ ಕೇಂದ್ರವನ್ನು ತೆರೆದು ಉದ್ಯಮಶೀಲತೆಯನ್ನು ಮುಂದುವರಿಸಿದ್ದಾರೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶದ ಪ್ರತಿನಿಧಿ ಯದುವೀರ ಕೃಷ್ಣದತ್ತ ಒಡೆಯರ್, ಪದ್ಮಶ್ರೀ ಪುರಸ್ಕೃತ ಹಿರೇಕಳ ಹಾಜಬ್ಬ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ, ಬಿಎಚ್‌ಇಎಲ್ ಉನ್ನತಾಧಿಕಾರಿ ಎಸ್.ಎನ್.ಭಾಗ್ಯಶ್ರೀ, ಸಂಘದ ಉಪಾಧ್ಯಕ್ಷ ಟಿ.ತಿಮ್ಮೇಶ್ ಉಪಸ್ಥಿತರಿದ್ದರು.
ಇಡೀ ವಿಶ್ವದಲ್ಲೇ ಉತ್ತಮವಾದ ಸ್ಥಳ ನಮ್ಮ ಕರ್ನಾಟಕ: ಪಂಚಮಸಾಲಿ ಸಮಾಜವನ್ನು ನಾನು ಒಡೆದಿಲ್ಲ. ಸಮಾಜವನ್ನು ಕೂಡಿಸುವ, ಜಾಗೃತಗೊಳಿಸುವ ಕೆಲಸ ಮಾಡಿದ್ದೇನೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸ್ಪಷ್ಟಪಡಿಸಿದರು. ಹರಿಹರದ ಪಂಚಮಸಾಲಿ ಪೀಠದಲ್ಲಿ ಶನಿವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿಗಳ ಕೊಡುಗೆ ಹಾಗೂ ಉದ್ಯೋಗ ಮೇಳದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾನು ಬಂದ ಮೇಲೆ ಪಂಚಮಸಾಲಿ ಸಮಾಜ ಒಡೆದಿದ್ದಾರೆಂಬ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ.
ಆದರೆ, ಸಮಾಜವನ್ನು ಕೂಡಿಸುವ, ಜಾಗೃತಗೊಳಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಇಡೀ ಲಿಂಗಾಯತ ಸಮುದಾಯ ಒಂದೇ ಕೆಟಗರಿಯಲ್ಲಿ ಬರಬೇಕು. ಒಂದು ವೀರಶೈವ ಲಿಂಗಾಯತ ಪಂಗಡ ಎಸ್‌ಸಿಯಲ್ಲಿ, ಇನ್ನೊಂದು 2ಎ ವರ್ಗದಲ್ಲಿ, ಮತ್ತೊಂದು 3ಬಿ ಹೀಗೆ ಬೇರೆ ಬೇರೆ ಮೀಸಲಾತಿ ಪಡೆಯುತ್ತಿವೆ. ಆ ಎಲ್ಲ ಪಂಗಡಗಳೂ ಒಗ್ಗೂಡಿ, ಒಂದೇ ಮೀಸಲಾತಿ ಆಗಬೇಕೆಂಬುದು ನಮ್ಮ ಆಶಯ. ಮೊದಲು ಗೆಜೆಟ್‌ನಲ್ಲಿ ಪಂಚಮಸಾಲಿ ಎಂಬುದಾಗಿ ಸೇರಿಸಿದ್ದು, ಹರಿಹರ ಪಂಚಮಸಾಲಿ ಪೀಠ. ಕೇಂದ್ರದ ಮೀಸಲಾತಿಯಲ್ಲಿ ಇಡೀ ಲಿಂಗಾಯತ ಸಮುದಾಯವನ್ನು ಓಬಿಸಿಯಲ್ಲಿ ತರಬೇಕು ಎಂದು ಸಿಎಂಗೆ ಮನವಿ ಮಾಡಿದರು.
Karnataka Politics: ಕುಮಾರಸ್ವಾಮಿ ಯಾರನ್ನೂ ಸಿಎಂ ಮಾಡೋಲ್ಲ: ಅಶ್ವತ್ಥನಾರಾಯಣ
ಸಚಿವ ಡಾ.ಅಶ್ವತ್ಥ ನಾರಾಯಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಅದನ್ನು ಮೊದಲು ಅನುಷ್ಠಾನಗೊಳಿಸಿದ್ದು ನಮ್ಮ ರಾಜ್ಯ. 21ನೇ ಶತಮಾನ ಜ್ಞಾನಾದಾರಿತ ಯುಗವಾಗಿದೆ. ನಮ್ಮ ನಾಡಿನ ಜನರಿಗೆ ಉತ್ತಮ ಭವಿಷ್ಯ ಕೊಡಬೇಕು, ಇಡೀ ವಿಶ್ವದಲ್ಲೇ ಉತ್ತಮವಾದ ಸ್ಥಳ ನಮ್ಮ ರಾಜ್ಯ. ಸರ್ಕಾರ 5 ಹೊಸ ವಿವಿಗಳನ್ನು ಆರಂಭಿಸಿದೆ. ಇನ್ನೂ 7 ಹೊಸ ವಿವಿಗಳನ್ನು ಘೋಷಣೆ ಮಾಡಿ, ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ವಿವಿ ಆರಂಭಿಸಬೇಕೆಂಬುದು ನಮ್ಮ ಸರ್ಕಾರದ ಆಶಯ ಎಂದು ಹೇಳಿದರು.