ಚಿಕ್ಕಮಗಳೂರು (ಅ.30):  ‘ಇನ್ನೂ ಎಂಗೇಜ್‌ಮೆಂಟ್‌ ಆಗಿಲ್ಲ, ಹುಡುಗಿ ಹುಡುಕಿಲ್ಲ, ಪ್ರಾಯ ಆಗ್ತಾ ಇದೆ. ಹುಡುಗಿ ಹುಡುಕಲು ಹೋಗಬೇಕು. ಆದ್ರೆ, ಮಗುವಿಗೆ ಹೆಸರು ಇಡಲು ಹೊರಟಿದ್ದಾರೆ...’

"

ಇದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಕಾಂಗ್ರೆಸ್‌ ಕುರಿತು ಮಾಡಿರುವ ವ್ಯಂಗ್ಯ ವ್ಯಾಖ್ಯಾನ. ಗುರು​ವಾ​ರ ಇಲ್ಲಿ ಮಾತ​ನಾ​ಡಿದ ಅವರು, ‘ವಿಧಾನಸಭಾ ಚುನಾವಣೆ ಇನ್ನೂ ಮೂರೂವರೆ ವರ್ಷ ಇದೆ. ಆಗಲೇ, ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಆರಂಭಗೊಂಡಿದೆ. 

ಬೈ ಎಲೆಕ್ಷನ್: ಯುದ್ಧಕ್ಕೂ ಮುನ್ನ ಕಾಂಗ್ರೆಸ್, ಜೆಡಿಎಸ್ ಶಸ್ತ್ರ ತ್ಯಾಗ ಮಾಡಿದ್ವಾ..?

ಅಂದರೆ, ಎಂಗೇಜ್‌ಮೆಂಟ್‌ಗೆ ಹುಡುಗಿ ಹುಡುಕಲು ಆಗಿಲ್ಲ, ಆಗಲೇ ಮಗುವಿನ ನಾಮಕರಣಕ್ಕೆ ಹೊರಟಿದ್ದಾರೆ. ಇನ್ನು ಅಧಿಕಾರ ಹತ್ತಿರ ಬಂದರೆ ಕಾಂಗ್ರೆಸ್‌ ಪರಿಸ್ಥಿತಿ ಏನಾಗಬಹುದು, ಇದನ್ನು ಜನ ಗಮನಿಸುತ್ತಿದ್ದಾರೆ’ ಎಂದರು.

‘ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇತ್ತು. ರಾಜ್ಯದಲ್ಲಿ ಸಿದ್ದರಾಮಣ್ಣ ಸಿಎಂ ಆಗಿದ್ದರು. ಆಗ ಕೇಂದ್ರದಿಂದ ಹೆಚ್ಚು ಅನುದಾನ ತರಲು ಅವರಿಗೆ ದಮ್‌ ಇರಲಿಲ್ಲವೇ’ ಎಂದು ಕಟೀಲ್‌ ಪ್ರಶ್ನಿಸಿದರು.