ಕಲಬುರಗಿ ಪಾಲಿಕೆ ಅತಂತ್ರ: ಅಖಾಡಕ್ಕೆ ಎಂಟ್ರಿ ಕೊಟ್ಟ ಕಟೀಲ್

*  ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಗ್ಯಾರೆಂಟಿ 
*  ಪಾಲಿಕೆಯ ಮೇಲೆ ಪ್ರಭುತ್ವಕ್ಕಾಗಿ ರಣತಂತ್ರ ಹೆಣೆಯುತ್ತಿರುವ ಕಟೀಲ್‌
*  ಕಲಬುರಗಿ ಅಭಿವೃದ್ಧಿ ದೃಷ್ಟಿಯಿಂದ ಹೊಂದಾಣಿಕೆ 
 

Nalin Kumar Kateel Talks Over Kalaburagi City Corporation Mayor grg

ಕಲಬುರಗಿ(ಸೆ.09): ಕಲಬುರಗಿ ಪಾಲಿಕೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪೂರ್ಣ ರೀತಿಯ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತೇವೆ. ಎಲ್ಲಾ ರೀತಿಯ ತಂತ್ರಗಾರಿಕೆಯಿಂದ ಅಧಿಕಾರ ಹಿಡಿಯುತ್ತೇವೆ. ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಅದ್ಭುತ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿಗೆ ಹೆಚ್ಚು ಸ್ಥಾನ ನೀಡಿದ್ದಾರೆ. ಇದಕ್ಕಾಗಿ ಕಲಬುರಗಿ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮವರೇ ಮೇಯರ್ ಆಗುವುದು ಖಚಿತ. ಕಾಯ್ದು ನೋಡಿ ಅಂತ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಯರ್ ಬಗ್ಗೆ ನಳಿನ್ ಕುಮಾರ್ ಕಟೀಲ್ ಅವರು ನಗರದ ಐವಾನ್ ಏ ಶಾಹಿ ಅತಿಥಿ ಗೃಹದಲ್ಲಿ ಕಟೀಲ್ ಮಹತ್ವದ ಸಭೆ ನಡೆಸುತ್ತಿದ್ದಾರೆ. ಪಾಲಿಕೆಯ ಮೇಲೆ ಪ್ರಭುತ್ವಕ್ಕಾಗಿ ರಣತಂತ್ರ ಹೆಣೆಯುತ್ತಿರುವ ಕಟೀಲ್‌, ಮೇಯರ್ ಸ್ಥಾನಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿರುವ ಹಿನ್ನಲೆಯಲ್ಲಿ ಮುಂದಿನ ದಾಳ ಹೇಗೆ ಶುರು ಮಾಡಬೇಕು? ಎನ್ನುವ ಕುರಿತ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಶತಾಯ ಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಅನುಸರಿಸಬಹುದಾದ ದಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. 

ಕುದುರೆ ವ್ಯಾಪಾರ ಭೀತಿ: ಗೌಪ್ಯ ಸ್ಥಳಕ್ಕೆ ಸದಸ್ಯರು

ಸಭೆಯಲ್ಲಿ ಶಾಸಕರಾದ ದತ್ತಾತ್ರೆಯ ಪಾಟೀಲ್, ರಾಜಕುಮಾರ ತೇಲ್ಕೂರ, ಬಸವರಾಜ್ ಮತ್ತಿಮೂಡ, ವಿ.ಪರಿಷತ್ ಸದಸ್ಯ ಬಿಜಿ ಪಾಟೀಲ್ ಸೇರಿ ಜಿಲ್ಲೆಯ ಮುಖಂಡರು ಭಾಗಿಯಾಗಿದ್ದಾರೆ. 

ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಗ್ಯಾರೆಂಟಿ ಅಂತ ಕಲಬುರಗಿ ನಗರದಲ್ಲಿ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. 

ಯಾವ ರೀತಿ, ಹೇಗೆ ಮಾಡ್ತೇವೆ ಅಂತ ಕಾಯ್ದು ನೋಡಿ. ನಾವು ಫೈನಲ್‌ಗೆ ಬಂದಿದ್ದೇವೆ. ನಾವೇ ಗೆಲ್ತೇವೆ. ಸದ್ಯ ಕುಮಾರಸ್ವಾಮಿ ಯಾವುದೇ ಆಶ್ವಾಸನೆ ನೀಡಿಲ್ಲ. ಆದ್ರೆ ಯಾವುದೇ ಕಂಡಿಷನ್ ಇಲ್ಲದೇ ಬೆಂಬಲಿಸುವ ವಿಶ್ವಾಸವಿದೆ ಅಂತ ಹೇಳಿದ್ದಾರೆ. 

ಕಲಬುರಗಿ ಪಾಲಿಕೆ ಮೇಯರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ, ಕಲಬುರಗಿ ಸೇರಿದಂತೆ ಮೂರು ಕಡೆ ನಮ್ಮವರೇ ಮೇಯರ್ ಆಗೇ ಆಗ್ತಾರೆ. ಮೂರು ಕಡೆ ಅಧಿಕಾರಕ್ಕೆ ಬರುವುದು ನಮ್ಮ ಪಕ್ಷದ ಸ್ಟ್ಯಾಟರ್ಜಿ ಆಗಿದೆ. ಸದಸ್ಯರು ಹಾಗೂ ಶಾಸಕರು ಪರಿಷತ್ ಸದಸ್ಯರು ಸೇರಿದಂತೆ ಮೆಜಾರ್ಟಿ ನಮ್ಮದೆ ಜಾಸ್ತಿ ಇದೆ. ಜನ ಉತ್ತಮ ಆಡಳಿತ ನೀಡಲು ಮತ ಹಾಕಿದ್ದಾರೆ. ಜೆಡಿಎಸ್ ಯಾಕೆ ಒಪ್ಪಲ್ಲ? ಒಪ್ಪೆ ಒಪ್ಪುತ್ತೆಂಬ ವಿಶ್ವಾಸವಿದೆ. ಕಲಬುರಗಿ ಅಭಿವೃದ್ಧಿ ದೃಷ್ಟಿಯಿಂದ ನಾವು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಹೇಳಿದ್ದಾರೆ. 

Latest Videos
Follow Us:
Download App:
  • android
  • ios