'ನಾನು ರಾಜಕೀಯಕ್ಕೆ ಬಯಸಿ ಬಂದಿಲ್ಲ: ಅಚಾನಕ್ ಆಗಿ ಬಂದೆ'
- ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ
- ರಾಜಕೀಯಕ್ಕೆ ಬರಬೇಕೆಂದು ಬಯಸಿ ಬಂದವನಲ್ಲ ನಾನು
- ಹಿರಿಯರ ಅಪೇಕ್ಷೆಯಂತೆ ರಾಜಕೀಯಕ್ಕೆ ಬಂದಿದ್ದೇನೆ - ಕಟೀಲ್
ಉಡುಪಿ (ಜು.25): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಡಿ ಹೊಗಳಿದ್ದಾರೆ.
ಉಡುಪಿಯ ಸಣ್ಣಕ್ಕಿ ಬೆಟ್ಟು ಎಂಬಲ್ಲಿ ಕೇದಾರೋತ್ಥಾನ ಟ್ರಸ್ಟ್ ಕೃಷಿ ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಕೃಷಿಗೆ ಪ್ರಧಾನ ಆದ್ಯತೆ ಕೊಟ್ಟಿರುವುದು ಬಿಜೆಪಿ ಸರ್ಕಾರ. ಈ ರಾಜ್ಯದಲ್ಲಿ ಮೊದಲ ರೈತರ ಬಜೆಟ್ ಮಂಡನೆ ಮಾಡಿದವರು ಯಡಿಯೂರಪ್ಪ. ರೈತ ಗೀತೆಗೆ ಗೌರವ ಕೊಟ್ಟವರು ಯಡಿಯೂರಪ್ಪ. ರೈತರ ಸಾಲ ಮನ್ನಾ ಮಾಡಿದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದರು.
ನರೇಂದ್ರ ಮೋದಿ ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ ಆರು ಸಾವಿರ ರು. ಪ್ರೋತ್ಸಾಹಧನ ಕೊಟ್ಟರು. ಇದು ಕಡಿಮೆ ಆಯಿತು ಎಂದು 4000 ರು. ಹೆಚ್ಚುವರಿ ಕೊಟ್ಟವರು ಯಡಿಯೂರಪ್ಪ. ಕೃಷಿಗೆ ಆದ್ಯತೆ ಕೊಟ್ಟದ್ದು ನಮ್ಮ ಸರಕಾರ ಎಂದರು.
ಬಿಜೆಪಿ ಈಗ ದಲಿತರನ್ನು ಸಿಎಂ ಮಾಡಲಿ : ಸಿದ್ದರಾಮಯ್ಯ ಸವಾಲ್
ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ : ರಾಜಕೀಯಕ್ಕೆ ಬರಬೇಕೆಂದು ಬಯಸಿ ಬಂದವನಲ್ಲ ನಾನು. ಹಿರಿಯರ ಅಪೇಕ್ಷೆಯಂತೆ ರಾಜಕೀಯಕ್ಕೆ ಬಂದಿದ್ದೇನೆ. ರಾಜಕೀಯಕ್ಕೆ ಬರುವ ಇಚ್ಛೆ ನನಗೆ ಇರಲಿಲ್ಲ. ಜೀವನದಲ್ಲಿ ಕೃಷಿಕನಾಗಿ ಇರಬೇಕು ಎಂದು ಬಯಸಿದ್ದೆ. ಭಗವಂತ ಕೆಲವೊಮ್ಮೆ ಒಳ್ಳೇದು ಬರೆಯುತ್ತಾನೆ. ನನ್ನ ಹಣೆಯಲ್ಲಿ ಒಳ್ಳೆಯದನ್ನು ಬರೆದಿದ್ದಾನೆ ಎಂದರು.
ಸಿದ್ದರಾಮಯ್ಯಗೆ ತಿರುಗೇಟು : ಹಿಂದೆ ಅಹಿಂದಾ ಹೋರಾಟ ಮಾಡಿದವರು. ಅಹಿಂದಾ ಹೋರಾಟ ಮಾಡಿ ಮುಖ್ಯಮಂತ್ರಿಗಳಾದರು. ಮುಖ್ಯ ಮಂತ್ರಿ ಆದಮೇಲೆ ಅಹಿಂದ ಮರೆತರು. ಮುಖ್ಯಮಂತ್ರಿಯಾದ ಮೇಲೆ ಹಿಂದುಳಿದ ವರ್ಗಕ್ಕೆ ಏನೂ ಮಾಡಿಲ್ಲ. ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯನ್ನೇ ಮುಚ್ಚಿ ಹಾಕಿದರು.
BSY ಬಿಟ್ರೆ ಕರ್ನಾಟಕದಲ್ಲಿ ಬಿಜೆಪಿ ಸಾರಥಿ ಯಾರು? ಮೋದಿ, ಶಾ ಲಿಸ್ಟ್‌ಲ್ಲಿ ಇದ್ಯಾ ಅಚ್ಚರಿ ಹೆಸರು
ಕಾಂಗ್ರೆಸಲ್ಲಿ ರಾತ್ರಿ-ಹಗಲು ಕೆಲಸ ಮಾಡಿದ ಜಿ. ಪರಮೇಶ್ವರ್ ರನ್ನು ಮೂಲೆಗುಂಪು ಮಾಡಿದರು. ಪರಮೇಶ್ವರ ಮತ್ತು ಖರ್ಗೆಯನ್ನು ಸೋಲಿಸಿದ ಇತಿಹಾಸ ಇದೆ. ತಾಕತ್ ಇದ್ದರೆ ದಲಿತ ಸಿಎಂ ಮಾಡಿ ಎನ್ನುವುದು ಎಷ್ಟು ಸರಿ? ವಾಜಪೇಯಿ ಸರ್ಕಾರ ಮುಸ್ಲಿಂ ಬಂಧುವನ್ನು ರಾಷ್ಟ್ರಪತಿ ಮಾಡಿದೆ. ನರೇಂದ್ರ ಮೋದಿ ದಲಿತ ರಾಷ್ಟ್ರಪತಿಯನ್ನು ದೇಶಕ್ಕೆ ಕೊಟ್ಟಿದ್ದಾರೆ. ಯಡಿಯೂರಪ್ಪ ಗೋವಿಂದ ಕಾರಜೋಳ ರನ್ನು ಉಪ ಮುಖ್ಯಮಂತ್ರಿ ಮಾಡಿದ್ದಾರೆ. ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿದ್ದಾರೆ. ಕೇಂದ್ರ ಮಂತ್ರಿಮಂಡಲದಲ್ಲಿ ಶೇಕಡ 30 ಎಸ್ ಸಿ ಎಸ್ ಟಿ ಮಂತ್ರಿಗಳು ಇದ್ದಾರೆ. ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಹೇಳಿ ಎಂದು ಉಡುಪಿಯಲ್ಲಿ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.