ಮಂಗಳೂರು (ನ.16): ಕರಾವಳಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಬಿಜೆಪಿ ಸೇರಲು ಪರೋಕ್ಷವಾಗಿ ಆಹ್ವಾನ ನೀಡಲಾಗಿದೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಂದಲೇ ಆಹ್ವಾನ ದೊರೆತಿದೆ.

ಕರ್ನಾಟಕ ರಾಜ್ಯ ಸಹಕಾರ ಒಕ್ಕೂಟದ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಪ್ರಸ್ತುತ ‌ಕಾಂಗ್ರೆಸ್ ಸದಸ್ಯರಾಗಿದ್ದು ಕರಾವಳಿ ಭಾಗದ ಪ್ರಭಾವೀ ಸಹಕಾರೀ ಧುರೀಣರಾಗಿಯೂ ರಾಜೇಂದ್ರ ಕುಮಾರ್ ಗುರುತಿಸಿಕೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಎಲೆಕ್ಷನ್, ಸಂಪುಟ ವಿಸ್ತರಣೆ ಬಗ್ಗೆ ಸಚಿವರ ಮಾತು....

ದಕ್ಷಿಣ ಕ‌ನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಭಾರೀ ವರ್ಚಸ್ಸು ಹೊಂದಿರುವ ನಾಯಕರಾಗಿದ್ದು, ಗ್ರಾ.ಪಂ ಚುನಾವಣೆ ಗುರಿಯಾಗಿಸಿ ರಾಜೇಂದ್ರ ‌ಕುಮಾರ್ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ.

ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಸುಳಿವು ನೀಡಿದ್ದಾರೆ. ರಾಜೇಂದ್ರ ಕುಮಾರ್ ರಾಷ್ಟ್ರ ಮಟ್ಟದ ನಾಯಕ ಆಗಬೇಕು. ಅವರು ನಮ್ಮ ಹತ್ತಿರ ಬಂದರೆ ಮಾತ್ರ ಎತ್ತರಕ್ಕೆ ಹೋಗುತ್ತಾರೆ ಎಂದಿದ್ದು ಅವರ ‌ಬಳಿ ವೈಯಕ್ತಿಕವಾಗಿ ಮಾತನಾಡಲು ಇದೆ, ಸಾರ್ವಜನಿಕವಾಗಿ ಬೇಡ ಎಂದು ಹೇಳಿದ್ದಾರೆ.