ಪಾನಮತ್ತನಾಗಿ ಕೆಲಸಕ್ಕೆ ಬಂದ ನಾಡ ಕಚೇರಿ ದ್ವಿತೀಯ ದರ್ಜೆ ನೌಕರ ಸಸ್ಪೆಂಡ್‌

ಕಚೇರಿ ಸಮಯದಲ್ಲಿ$ಪಾನಮತ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ತಹಸೀಲ್ದಾರ್‌ಗೆ ನೇರವಾಗಿ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಬೆಳ್ಳೂರು ನಾಡ ಕಚೇರಿ(Bellooru nadakacheri)ಯಲ್ಲಿ ಸಂಭವಿಸಿದೆ. ನಾಡ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಪರಶಿವಮೂರ್ತಿ ಕರ್ತವ್ಯ ವೇಳೆ ಪಾನಮತ್ತನಾಗಿ ಬಂದು ಕಚೇರಿಯಲ್ಲಿ ಕುಳಿತಿದ್ದನು.

Nadakacheri employee suspended for attending duty drunk at mandya rav

ನಾಗಮಂಗಲ (ಆ.17): ಕಚೇರಿ ಸಮಯದಲ್ಲಿ$ಪಾನಮತ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ತಹಸೀಲ್ದಾರ್‌ಗೆ ನೇರವಾಗಿ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಬೆಳ್ಳೂರು ನಾಡ ಕಚೇರಿ(Bellooru nadakacheri)ಯಲ್ಲಿ ಸಂಭವಿಸಿದೆ. ನಾಡ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಪರಶಿವಮೂರ್ತಿ ಕರ್ತವ್ಯ ವೇಳೆ ಪಾನಮತ್ತನಾಗಿ ಬಂದು ಕಚೇರಿಯಲ್ಲಿ ಕುಳಿತಿದ್ದನು.

ಸೋಮವಾರ ಮಧ್ಯಾಹ್ನ 1.30ರ ಸಮಯದಲ್ಲಿ ಬೆಳ್ಳೂರಿನ ನಾಡಕಚೇರಿಗೆ ದಿಢೀರ್‌ ಭೇಟಿ ಕೊಟ್ಟಿದ್ದ ತಹಸೀಲ್ದಾರ ನಯೀಂಉನ್ನೀಸಾ. ಅಂದು ಸಹ ಪಾನಮತ್ತನಾಗಿ ಕುಳಿತಿದ್ದ ಪರಶಿವಮೂರ್ತಿ. ಇದನ್ನು ಕಂಡು ಕೆಂಡಮಂಡಲಾರದ ತಹಸೀಲ್ದಾರರು ಕಚೇರಿ ಸಮಯದಲ್ಲಿ ಕುಡಿದು ಬಂದು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಹೇಗೆ ನಿರ್ವಹಿಸುತ್ತೀರಿ. ನಿಮಗೆ ಮನಸಾಕ್ಷಿ ಎಂಬುದೇ ಇಲ್ಲವೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.  ಬಳಿಕ ಪಕ್ಕದಲ್ಲೇ ಇರುವ ಆಸ್ಪತ್ರೆ ವೈದ್ಯರನ್ನು ಕರೆಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ವೇಳೆ ಪಾನಮತ್ತನಾಗಿರುವ ಸತ್ಯ ಬಯಲಾಗಿದೆ.

ಈತನ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಈಗ ಪರಶಿವಮೂರ್ತಿ ಅಮಾನತ್ತುಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆಯೂ ದೂರುಗಳು ಬಂದಿದ್ದವು. ಆದರೆ ನಿರ್ಲಕ್ಷಿಸಲಾಗಿತ್ತು. ದಿನನಿತ್ಯವೂ ಕುಡಿದುಕೊಂಡೇ ನಾಡಕಚೇರಿಗೆ ಬರುತ್ತಿದ್ದ ನೌಕರ. ಇದರಿಂದ ಸಾರ್ವಜನಿಕರೊಂದಿಗೆ ಕೆಲವೊಮ್ಮೆ ವಾಗ್ವಾದಕ್ಕಿಳಿದುದ್ದುಂಟು. 

ಗಂಡ ವಿಪರೀತ ಕುಡಿದು ಹಿಂಸೆ ಕೊಟ್ರೆ ಹೆಂಡ್ತಿ ಡಿವೋರ್ಸ್ ಕೊಡ್ಬೋದು; ಹೈಕೋರ್ಟ್‌

ಕಳೆದ ಏಳು ವರ್ಷಗಳಿಂದ ಬೆಳ್ಳೂರಿನ ನಾಡಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Latest Videos
Follow Us:
Download App:
  • android
  • ios