ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾದರು.

ಹುಣಸೂರು (ನ.15): ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾದರು.

ಸಮೀಪದ ರಾಮನ ಹಳ್ಳಿ ಗ್ರಾಮದ ಲೋಕೇಶ್‌, ಮಹದೇವ ಸ್ವಾಮಿ, ಬೋರ ನಾಯ್ಕ, ಸಿದ್ದ ನಾಯ್ಕ, ಮುನಿರ್‌, ರಾಘು ಶೆಟ್ಟಿ, ಚಂದ್ರ ಶೆಟ್ಟಿ, ವಿಶ್ವೇಶ ಶೆಟ್ಟಿ, ಲೋಕೇಶ್‌, ಜಾಕಿ ರಮೇಶ್‌, ಸಿದ್ದರಾಜು, ಮಂಜುನಾಥ್‌ ಅಪಾರ ಬೆಂಬಲಿಗರು ಸೇರ್ಪಡೆಯಾದರು.

ನಂತರ ಹರೀಶ್‌ ಗೌಡ ಅವರು ಮಾತನಾಡಿ, ನಿರಂತರ ಕಾರ್ಯಗಳಿಂದ ಜೆಡಿಎಸ್‌ (JDS) ಜನ ಮನ್ನಣೆ ಪಡೆಯುತ್ತಿದ್ದು, ರಾಜ್ಯದ (Karnataka) ಬಹುತೇಕ ಜನ ಜೆಡಿಎಸ್‌ ಕಾರ್ಯಕರ್ತರಾಗುತ್ತಿದ್ದಾರೆ. ಹೀಗಾಗಿ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಕೆಎಂಎಫ್‌ ನಿರ್ದೇಶಕ ಕೆ.ಎಸ್‌. ಕುಮಾರ್‌, ಬಿಳಿಕೆರೆ ಗ್ರಾಪಂ ಅಧ್ಯಕ್ಷ ರಾಜೇಶ್‌, ಬಿಳಿಕೆರೆ ಮಧು, ಸತೀಶ ಪಾಪಣ್ಣ, ಜಿಪಂ ಮಾಜಿ ಸದಸ್ಯ ಸುರೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್‌, ಕೆಂಪೇಗೌಡ, ಸತೀಶ್‌ ಇದ್ದರು.

ರೈತರ ಪರವಾಗಿ ಕೆಲಸ ಮಾಡಿದ ಜೆಡಿಎಸ್‌ - ಜೆಡಿಎಸ್‌ ಪಕ್ಷದ ಕಾರ್ಯಕಾರಣಿ ಸಭೆ; ಹಲವರು ಜೆಡಿಎಸ್‌ಗೆ ಸೇರ್ಪಡೆ

 ತಾಳಿಕೋಟೆ : ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳು ಸಾಕಷ್ಟುಇದ್ದರೂ ಕೂಡಾ ರೈತರ ಪರ ಕಾಳಜಿ ಉಳ್ಳ ಪಕ್ಷ ಮಾತ್ರ ಜೆಡಿಎಸ್‌ ಮಾತ್ರ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್‌ ನಾಯಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಹೇಳಿದರು.

ಸೋಮವಾರ ತಾಲೂಕಿನ ಬೇಕಿನಾಳ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರಿಗೆ ಬಲ ತುಂಬುವ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ಹೊಸ ಬದಲಾವಣೆ ತರಬೇಕಾದರೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಮುಂಬರುವ ಚುನಾವಣೆ ಎದುರಿಸಬೇಕಿದೆ ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು, ಆಗಿನ ಅವಧಿಯಲ್ಲಿ .9 ಸಾವಿರ ಕೋಟಿ ಬಿಡುಗಡೆ ಮಾಡಿ ಆಲಮಟ್ಟಿಡ್ಯಾಂ ಎತ್ತರಿಸಿ ಈ ಭಾಗಕ್ಕೆ ನೀರು ಸಿಗುವಂತೆ ಮಾಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನವರು ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿವೆ ಎಂದರು.

ಜೆಡಿಎಸ್‌ ಪಕ್ಷದ ತಾಲೂಕು ಕಾರ್ಯಾಧ್ಯಕ್ಷ ಮಡುಸೌಕಾರ ಬಿರಾದಾರ ಮಾತನಾಡಿ, ಜೆಡಿಎಸ್‌ನ ನಾಯಕ ರಾಜುಗೌಡ ಪಾಟೀಲ ಹೃದಯವಂತರಾಗಿದ್ದಾರೆ. 15 ವರ್ಷಗಳಿಂದ ಕಾರ್ಯಕರ್ತರನ್ನು ಕಟ್ಟಿಕೊಂಡು ಹಗಲಿರುಳು ದುಡಿಯುತ್ತಾ ಸಾಗಿದ್ದಾರೆ. 2023ರಲ್ಲಿ ರಾಜುಗೌಡರನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಸಮಾನತೆ ತರಬೇಕಿದೆ ಎಂದರು.

ಜೆಡಿಎಸ್‌ ಮುಖಂಡ ಕಾಶೀಂಸಾಬ್‌ ನಾಯ್ಕೋಡಿ, ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ಸಾಯಬಣ್ಣ ಬಾಗೇವಾಡಿ, ಬಸನಗೌಡ ಬಿರಾದಾರ, ರಮೇಶ ಹಂಡಿ ಮಾತನಾಡಿದರು. ಇದೇ ಸಮಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತೊರೆದ ಹಲವು ಕಾರ್ಯಕರ್ತರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಶೇಖರಗೌಡ ಪಾಟೀಲ, ಮಶಾಕಸಾಬ್‌ ಚೌದ್ರಿ, ಬಾಸ್ಕರ ಗುಡಿಮನಿ, ಗುರನಗೌಡ ಪಾಟೀಲ, ಶರಣು ಧರಿ, ಮುನ್ನಾ ಮುಳಖೇಡ, ರಾಘು ಗುಡಿಮನಿ, ಹಣಮಂತಗೌಡ ಹಳದಿಮನಿ, ಸುನಿಲ ಮಾಗಿ, ರೇಣುಕಾ ಅಂಗಡಿ, ಅರವಿಂದ ಹಾಲಣ್ಣವರ, ಬಿಜ್ಜು ನೀರಲಗಿ, ವಿಶ್ವನಾಥ ಬಿದರಕುಂದಿ, ವಿರೇಶಗೌಡ ಪಾಟೀಲ, ಹುಸೇನಬಾಷಾ ಮುಲ್ಲಾ, ರಿಯಾಜ್‌ ನಾಯ್ಕೋಡಿ, ಈರಗಂಟಿ ಬಡಿಗೇರ, ಪುಷ್ಪಾ ಲಕ್ಕುಂಡಿಮಠ, ಮಹಾಂತಗೌಡ ಪಾಟೀಲ, ಮುರುಗೇಶ ತಾಳಿಕೋಟಿ, ಯಲ್ಲಪ್ಪ ಕನ್ನೂರ, ದಸ್ತಗೀರ್‌ ದಳವಾಯಿ, ಮಹಿಬೂಬ್‌ ಪಟೇಲ, ಮಹಿಬೂಬ್‌ ಚಟ್ನಳ್ಳಿ, ಮುತ್ತು ಮುಗಳಿ, ಮೊದಲಾದವರು ಇದ್ದರು.