ಮೈಸೂರು (ಆ.27):  ರಾಜ್ಯ ಎಸ್ಟಿಮೋರ್ಚಾ ಕೋಶಾಧ್ಯಕ್ಷರಾಗಿ ನಗರಪಾಲಿಕೆ ಸದಸ್ಯ ಶಿವಕುಮಾರ್‌ ಅವರನ್ನು ನೇಮಿಸಲಾಗಿದೆ. ಶಿವಕುಮಾರ್‌ ಅವರು ಈ ಹಿಂದೆ 2ನೇ ವಾರ್ಡ್‌ನಿಂದ (ಸುಣ್ಣದಕೇರಿ) ಸತತ ಎರಡು ಬಾರಿ, ಪ್ರಸ್ತುತ 47ನೇ ವಾರ್ಡ್‌ನಿಂದ (ಕುವೆಂಪುನಗರ) ಮೈಸೂರು ನಗರ ಪಾಲಿಕೆಗೆ ಆಯ್ಕೆಯಾಗಿದ್ದಾರೆ. 

‘ಹ್ಯಾಟ್ರಿಕ್‌ ಸದಸ್ಯ‘ ಎನಿಸಿಕೊಂಡಿರುವ ಶಿವಕುಮಾರ್‌ ಮಿತಭಾಷಿ, ಕ್ರಿಯಾಶೀಲರು ಹಾಗೂ ಅತ್ಯುತ್ತಮ ಸಂಘಟಕರು. ಯಾವುದೇ ಪ್ರಚಾರ ಬಯಸದೇ ತಮ್ಮ ವಾರ್ಡ್‌ನ ಕೆಲಸ ಕಾರ್ಯ ಮಾಡಿಕೊಂಡು, ಪಕ್ಷದ ಸಂಘಟನೆಗೆ ಶ್ರಮಿಸುತ್ತಾ ಬಂದಿದ್ದಾರೆ. 2010-11ನೇ ಸಾಲಿನಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಾಲಿಕೆಯಲ್ಲಿ ಅತ್ಯುತ್ತಮ ಬಜೆಟ್‌ ಮಂಡಿಸಿದ್ದರು. ಅಲ್ಲದೇ, ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಅಣ್ಣಾಮಲೈ ಬಿಜೆಪಿಗೆ; ಆಯ್ಕೆ ಹಿಂದಿದೆ ಈ ಕಾರಣಗಳು..!.

ಬಿಜೆಪಿ ಕಿಸಾನ್‌ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಪ್ರಸನ್ನಗೌಡ ಅವರನ್ನು ನೇಮಿಸಲಾಗಿದೆ. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಅವರು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿದ್ದರು. ಅಲ್ಲದೇ, ಜನಚೇತನ ಟ್ರಸ್ಟ್‌ ರಚಿಸಿಕೊಂಡು ಕೆರೆಕಟ್ಟೆಉಳಿಸುವ ಹೋರಾಟ ನಡೆಸಿದ್ದಾರೆ.

ನನ್ನ ಮೈಂಡ್‌ ಸೆಟ್‌ಗೆ ಬೇರೆ ಪಾರ್ಟಿ ಆಗಲ್ಲ: ಸುವರ್ಣ ನ್ಯೂಸ್ ಜತೆ ಅಣ್ಣಾಮಲೈ ಖಡಕ್ ಮಾತು...

ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಅನಿಲ್‌ ಥಾಮಸ್‌, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್‌ ಬಾಬು, ಯುವ ಮೋರ್ಚಾ ಉಪಾಧ್ಯಕ್ಷರಾಗಿ ಎಚ್‌.ಎಸ್‌. ಜಯಶಂಕರ್‌ ಅವರನ್ನು ನೇಮಿಸಲಾಗಿದೆ.