ಮೈಸೂರು (ಸೆ.03):  ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾದ ಮೈಸೂರು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರನ್ನು ಸಹೋದ್ಯೋಗಿಗಳು ಪುಷ್ಪವೃಷ್ಟಿಮೂಲಕ ಬರಮಾಡಿಕೊಂಡರು. 

ಸಂಸದ ಪ್ರತಾಪ್‌ ಸಿಂಹ, ದಕ್ಷಿಣ ವಲಯ ಐಜಿಪಿ ವಿಪುಲ್‌ಕುಮಾರ್‌, ಹೆಚ್ಚುವರಿ ಎಸ್ಪಿ ಶಿವಕುಮಾರ್‌, ಡಿಎಚ್‌ಒ ಡಾ.ವೆಂಕಟೇಶ್‌ ಮೊದಲಾದವರು ಇದ್ದರು. 

ತಮ್ಮ ಕಚೇರಿಯ ಸಿಬ್ಬಂದಿಯೊಬ್ಬರ ಪ್ರಾಥಮಿಕ ಸಂಪರ್ಕದಿಂದಾಗಿ ಪರೀಕ್ಷೆಗೆ ಒಳಗಾದ ರಿಷ್ಯಂತ್‌ ಅವರಿಗೆ ಆ.18 ರಂದು ಕೊರೋನಾ ದೃಢಪಟ್ಚಿತ್ತು. ನಜರ್‌ಬಾದಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ವೈದ್ಯರಾದ ರಘುನಾಥ್‌, ಸುಶ್ರುತ್‌, ಲಕ್ಷ್ಮೇಕಾಂತ್‌, ಶಿಲ್ಪಾ ಸಂತೃಪ್ತ್, ಭರತ್‌, ಸಂತೃಪ್ತ್ ಚಿಕಿತ್ಸೆ ನೀಡಿದರು.

ಕೊರೋನಾಗೆ ಪರಮೌಷಧ, ಗಂಭೀರ ರೋಗಿಗಳಿಗೂ ಬಳಸಲು ಸೂಚನೆ! ...

ಈಗಾಗಲೇ ಮೈಸೂರು ಜಿಲ್ಲೆಯಲ್ಲಿ 10 ಸಾವಿರದ ಆಸು ಪಾಸಿನಲ್ಲಿ ಕೊರೋನಾ ಸೋಂಕಿತರಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೋನಾದಿಂದಾಗುವ ಸಾವಿನ ಸಂಖ್ಯೆಯೂ ಕೂಡ ಜಿಲ್ಲೆಯಲ್ಲಿ ನಿತ್ಯವೂ ಹೆಚ್ಚಾಗುತ್ತಿದೆ.