ಹುಣಸೂರು (ಅ.13): ಮನೆ ಮುಂದೆ ಇರುವ ಹುಲ್ಲಿನ ಮೆದೆಯಲ್ಲಿ ಬೆಳೆದಿದ್ದ ತೊಂಡೆ ಕಾಯಿಗಳನ್ನು ಕೀಳಲು ಹೋಗಿದ್ದ ವೃದ್ಧರೋಬ್ಬರು ಸಾವಿಗೀಡಾದ ಘಟನೆ  ಹುಣಸೂರಲ್ಲಿ ನಡೆದಿದೆ. 

ತೊಂಡೆಕಾಯಿ ಕೀಳಲು ಹೋದಾಗ ಕಾಲು ಜಾರಿ ಬಿದ್ದು ಚಿಟಕ್ಯಾತನಹಳ್ಳಿ  ಚನ್ನೇಗೌಡ (65) ಮೃತೊಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. 

ಮಗು ಅಪಹರಿಸಿ ರೇಪ್‌ ಮಾಡಿದ ವಿಕೃತ ಕಾಮುಕನಿಗೆ ಗುಂಡು .

ಭಾನುವಾರ ಸಂಜೆ ವೇಳೆ ಮನೆ ಮುಂದೆ ಇರುವ ಹುಲ್ಲಿನ ಮೆದೆ ಮೇಲೆ ಬೆಲೆದಿದ್ದ ತೊಂಡೆಕಾಯಿ ಕೀಳು ಹೋಗಿದ್ದರು. ಈ ವೇಳೆ ಕಾಲು ಜಾರಿದೆ. ಕೆಳಗೆ ಬಿದ್ದಾಗ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.  ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. 

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.