ಮಗನ ನೋಡಿಕೊಂಡಿದ್ದ ಮನೆ ಕೆಲಸದವರಿಗೆ 1 ಕೋಟಿ ರು. ನೀಡಲು ಹುಡುಕುತ್ತಿರುವ ತಂದೆ
ಹಲವು ವರ್ಷಗಳ ಹಿಂದೆ ಅಮೆರಿಕಾದಿಂದ ಬಂದು ಮೈಸೂರಿನಲ್ಲಿ ಇದ್ದ ತಮ್ಮ ಪುಟ್ಟ ಮಗನನ್ನು ನೋಡಿಕೊಂಡಿದ್ದ ಮನೆ ಕೆಲಸದವರಿಗೆ ಇದೀಗ ಎನ್‌ಆರ್ ಐ ತಂದೆಯೋರ್ವರು ಒಂದು ಕೋಟಿಗೂ ಅಧಿಕ ಹಣ ನೀಡಲು ಹುಡುಕುತ್ತಿದ್ದಾರೆ.
ಮೈಸೂರು [ಜ.20]: ಕೆಲ ವರ್ಷಗಳ ಹಿಂದೆ ತಮ್ಮ ನಲ್ಕು ವರ್ಷದ ಮಗನನ್ನು 11 ತಿಂಗಳೂ ಪ್ರೀತಿಯಿಂದ ನೋಡಿಕೊಂಡಿದ್ದ ಮನೆಕೆಲಸದವರಿಗೆ 1 ಕೋಟಿ ರು. ನೆರವು ನೀಡಲು ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಬ್ಬರು ಮುಂದಾಗಿದ್ದಾರೆ.
ದಶಕಕಗಳಿಗೂ ಹಿಂದೆ ಮೈಸೂರಿನಲ್ಲಿ ಅನಿವಾಸಿ ಭಾರತೀಯ ಪ್ರಸಾದ್ ಅವರ ಪುತ್ರ ಇಲ್ಲಿ ನೆಲೆಸಬೇಕಾಗುತ್ತದೆ. ಈ ವೇಳೆ ಇಲ್ಲಿನ ತಮ್ಮ ಸಂಬಂಧಿಕರ ಮನೆಯಲ್ಲಿ ಇರಿಸುತ್ತಾರೆ. ಒಟ್ಟು 11 ತಿಂಗಳು ಇಲ್ಲಿಯೇ ಪುತ್ರ ಇರುತ್ತಾನೆ. ಕೆಲ ವರ್ಷಗಳ ಹಿಂದೆ ನಾಲ್ಕು ವರ್ಷದ ಪುತ್ರನನ್ನು ಮೈಸೂರಿನ ಶಾಂತಿ, ಆನಂದ್, ಮಮತಾ ಹಾಗೂ ಸಂತೋಷ್ ನೋಡಿಕೊಳ್ಳುತ್ತಾರೆ. ಆದರೆ ಮತ್ತೆ ತಮ್ಮ ಪುತ್ರನನ್ನು 11 ತಿಂಗಳ ಬಳಿಕ ಅಮೆರಿಕಾಗೆ ಕರೆಸಿಕೊಳ್ಳುತ್ತಾರೆ.
ಅಧಿಕಾರಕ್ಕಾಗಿ ಎಲ್ಲಾ ಸೈ; ಮತ್ತೆ ಮೈತ್ರಿ ಮಾಡಿಕೊಂಡ ಜೆಡಿಎಸ್- ಕೈ...
ಅಮೇರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರಿಂದ ಶೈಕ್ಷಣಿಕ ಸಾಧನೆಗೆ ಸಂಬಂಧಿಸಿದಂತೆ ಪ್ರಶಸ್ತಿ ಸ್ವೀಕರಿಸಲು ಪ್ರಸಾದ್ ಅವರ ಪುತ್ರ ತೆರಳಬೇಕಾಗಿತ್ತು. ಆದರೆ ಪ್ರಸಾದ್ ಪುತ್ರನನ್ನು ನೋಡಿಕೊಂಡವರ ಸಂಪರ್ಕ ನಂತರ ಕಡಿತವಾಗುತ್ತದೆ. ಆದರೆ ಇದೀಗ ಅವರನ್ನು ಮತ್ತೆ ಸಂಪರ್ಕಿಸಲು ಮುಂದಾಗಿದ್ದಾರೆ.
ಮೈಸೂರು ಮೇಯರ್ ಸ್ಥಾನಕ್ಕೇರಿದ ಮೊದಲ ಮುಸ್ಲಿಮ್ ಮಹಿಳೆ!.
ಇದೀಗ ಪ್ರಸಾದ್ ಅವರ ಪುತ್ರ ಪದವಿ ಓದುತ್ತಿದ್ದು, ಸದಾ ತಮ್ಮನ್ನು ಪ್ರೀತಿಯಿಂದ ನೋಡಿಕೊಂಡವರಿಗೆ ನೆರವು ನಿಡಲು ಬಯಸಿದ್ದು, ತಾವು 1 ಕೋಟಿ ನೆರವು ನೀಡಬೇಕಿದೆ. ಆದ್ದರಿಂದ ಅವರ ಬಗ್ಗೆ ಮಾಹಿತಿ ನೀಡಬೇಕು ಎಂದು ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದಾರೆ. ತಮ್ಮ ಪುತ್ರನನ್ನು ನೋಡಿಕೊಂಡವರಿಗೆ ನೆರವು ನೀಡಬೇಕಿದ್ದು, ಇವರ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ದೂರವಾಣಿ ಸಂಖ್ಯೆಯನ್ನೂ ನೀಡಿದ್ದಾರೆ.
ಮಾನವೀಯತೆಗಳು, ಸಂಬಂಧಗಳಿಗೆ ಬೆಲೆಯು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಈ ರೀತಿಯ ಉದಾರತೆ ಮೆರೆಯುತ್ತಿರುವ ಈ ತಂದೆಯ ಗುಣವು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.