ಮೈಸೂರು ಮಹಾನಗರ ಪಾಲಿಕೆ : ಉಪ ಚುನಾವಣೆ ದಿನಾಂದ ನಿಗದಿ
- ಮೈಸೂರು ಮಹಾನಗರ ಪಾಲಿಕೆ 36ನೇ ವಾರ್ಡ್ ಸದಸ್ಯತ್ವ ರದ್ದಾಗಿರುವ ಹಿನ್ನೆಲೆ ರದ್ದಾದ ಸ್ಥಾನಕ್ಕೆ ಉಪಚುನಾವಣೆ
- ಉಪಚುನಾವಣೆಗೆ ದಿನಾಂಕ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗದಿಂದ ಆದೇಶ
- ಸೆಪ್ಟೆಂಬರ್ 3ರಂದು 36ನೇ ವಾರ್ಡ್ಗೆ ಉಪಚುನಾವಣೆ ನಡೆಯಲಿದೆ
ಮೈಸೂರು (ಆ.12): ಮೈಸೂರು ಮಹಾನಗರ ಪಾಲಿಕೆ 36ನೇ ವಾರ್ಡ್ ಸದಸ್ಯತ್ವ ರದ್ದಾಗಿರುವ ಹಿನ್ನೆಲೆ ರದ್ದಾದ ಸ್ಥಾನಕ್ಕೆ ಉಪಚುನಾವಣೆಗೆ ದಿನಾಂಕ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗದಿಂದ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 3ರಂದು 36ನೇ ವಾರ್ಡ್ಗೆ ಉಪಚುನಾವಣೆ ನಡೆಯಲಿದೆ. ಆಗಸ್ಟ್ 16 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಆಗಸ್ಟ್ 23 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
24 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಆಗಸ್ಟ್ 26 ವರೆಗೆ ಅವಕಾಶವಿರಲಿದೆ. ಸೆಪ್ಟೆಂಬರ್ 3 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಸೆಪ್ಟೆಂಬರ್ 6 ರಂದು ಮತ ಎಣಿಕೆಯಾಗಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಮೊದಲ ದಿನವೇ ಮೈಸೂರು ಮೇಯರ್‌ಗೆ ಸಂಕಷ್ಟ : ಕಳೆದುಕೊಳ್ತಾರಾ ಪಟ್ಟ..?
ದಾಖಲಾತಿ ದೋಷದಿಂದಾಗಿ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾಗಿತ್ತು. ಅಫಿಡವಿಟ್ ದೋಷಗಳನ್ನು ಪ್ರಶ್ನಿಸಿ ಪ್ರತಿಸ್ಪರ್ಧಿ ರಜಿನಿ ಅಣ್ಣಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ರುಕ್ಷ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಿತ್ತು. ಸದಸ್ಯತ್ವ ಅಸಿಂಧುಗೊಂಡ ಹಿನ್ನೆಲೆ ಮೇಯರ್ ಆಗಿದ್ದ ರುಕ್ಷ್ಮಿಣಿ ಮಾದೇಗೌಡ ಅಧಿಕಾರ ಕಳೆದುಕೊಂಡಿದ್ದರು. ಇವರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ.