Asianet Suvarna News Asianet Suvarna News

 ಗನ್ ಮ್ಯಾನ್ ಕೊಡಿಸಿದಕ್ಕೆ‌ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಧನ್ಯವಾದ ಹೇಳಿದ ಮುತಾಲಿಕ್ 

ಪ್ರಮೋದ ಮುತಾಲಿಕ್ ಅಂದ್ರೆ ಹಿಂದೂ ಹೋರಾಟಗಾರ ಎಂದು ಖ್ಯಾತಿಯನ್ನ ಪಡೆದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಭದ್ರತೆಗೆ ಗನ್ ಮ್ಯಾನ್ ಒದಗಿಸಿತ್ತು. ಬಿಜೆಪಿ ಸರಕಾರ ಬಂದ ಕ್ಷಣವೇ ಗನ್ ಮ್ಯಾನ್ ವಾಪಸ್ಸು ಪಡೆದುಕೊಂಡಿತ್ತು.. ಇತ್ತೀಚೆಗೆ ನಡೆದ ಏಷ್ಯಾನೆಟ್ ಸುವರ್ಣ ನ್ಯೂಸ್  ಚರ್ಚಾಕೂಟದಲ್ಲಿ ಗನ್ ಮ್ಯಾನ್ ಪ್ರಸ್ತಾಪ. ಅದರ ಪರಿಣಾಮ, ಇದೀಗ ಮುತಾಲಿಕ ರಕ್ಷಣೆಗೆ ಓರ್ವ ಗನ್ ಮ್ಯಾನ್ ಒದಗಿಸಿದ ಸರ್ಕಾರ. ಅಜಿತ್ ಹನಮಕ್ಕನವರ, ಸುವರ್ಣ ನ್ಯೂಸ್‌ಗೆ ಅಭಿನಂದನೆ ಸಲ್ಲಿಸಿದ ಪ್ರಮೋದ ಮುತಾಲಿಕ್

Muthalik thanked Asianet Suvarna News for giving him the gun manby govt at dharwad rav
Author
Bangalore, First Published Aug 24, 2022, 3:39 PM IST

 ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಆ.24): ಪ್ರಮೋದ ಮುತಾಲಿಕ್ ಅಂದ್ರೆ ಹಿಂದೂ ಹೋರಾಟಗಾರ ಎಂದು ಖ್ಯಾತಿಯನ್ನ ಪಡೆದಿದ್ದಾರೆ. ಪ್ರಮೋದ್ ಮುತಾಲಿಕ್ ಮೂಲತಃ ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ(Hukkeri)ಯವರು. ಆದರೆ ಅವರು ರಾಜ್ಯದ ಮೂಲೆ ಮೂಲೆಗೂ ಚಿರಪರಿಚಿತರಾಗಿದ್ದಾರೆ..ಎಲ್ಲೆ ಹಿಂದೂಗಳ ಮೇಲೆ ಅಟ್ಯಾಕ್ ಆದ್ರೆ, ಕೊಲೆ ಆದ್ರೆ ಮೊಟ್ಟ ಮೊದಲು ಮುಂದೆ ನಿಂತು ಹೋರಾಡುವವರು ಇವರೇ. ಹಾಗಾದ್ರೆ ಪ್ರಮೋದ ಮುತಾಲಿಕ್ ಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದ ಗನ್ ಮ್ಯಾನ್(Gunman) ಬಿಜೆಪಿ ಸರ್ಕಾರ ವಾಪಸ್ಸು ಪಡೆದುಕೊಂಡಿತ್ತು.

ಹಿಂದೂಗಳ ಪರ ಹೋರಾಟ ಮಾಡಿದ್ದಕ್ಕೆ ನನ್ನ ಸ್ವಾತಂತ್ರ್ಯಹರಣ: ಪ್ರಮೋದ್‌ ಮುತಾಲಿಕ್‌

ಕಳೆದ ಕಾಂಗ್ರೆಸ್(Congress) ಸರಕಾರ ಇದ್ದಾಗ ಪ್ರಮೋದ್ ಮುತಾಲಿಕ್ ಗೆ ಗನ್ ಮ್ಯಾನ್ ಕೊಟ್ಟಿತ್ತು..ಆದರೆ ಬಿಜೆಪಿ ಸರಕಾರ (BJPGovt) ಅಧಿಕಾರಕ್ಕೆ ಬಂದ ಕ್ಷಣವೇ ಗನ್ ಮ್ಯಾನ್ ವಾಪಸ್ಸು ಪಡೆದುಕೊಂಡಿತ್ತು..ಜೊತೆಗೆ ಅವರ ಗನ್ ರಿನಿವಲ್ ಮಾಡಿರಲಿಲ್ಲ..ಈ ಕುರಿತು ಪ್ರಮೋದ ಮುತಾಲಿಕ್ ಸರಕಾರಕ್ಕೆ‌ ಎಷ್ಟೇ ಮನವಿ ಮಾಡಿಕೊಂಡರೂ ಗನ್ ಮ್ಯಾನ್ ಕೊಟ್ಟಿರಲಿಲ್ಲ...

 ಕಳೆದ 15 ದಿನಗಳ ಹಿಂದೆ ನಡೆದ ಏಷ್ಯಾನೆಟ್ ಸುವರ್ಣ ನ್ಯೂಸ್ ಚರ್ಚಾಕೂಟ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಮೋದ ಮುತಾಲಿಕ್, ಹಿಂದೆ ತಮಗೆ ಕೊಟ್ಟಿದ್ದ ಅಂಗರಕ್ಷಕ ಭದ್ರತೆಯನ್ನು ಈಗಿನ ಸರಕಾರ ವಾಪಸ್ಸು ಪಡೆದುಕ್ಕೊಂಡಿದೆ ಎಂದು ಮುತಾಲಿಕ್ ತಮಗೆ ಆದ ನೂವನ್ನ ಹೇಳಿಕ್ಕೊಂಡಿದ್ದರು. ಈ ಕಾರ್ಯಕ್ರಮ ನೋಡಿದ ಬಳಿಕ ರಾಜ್ಯಾದ್ಯಂತ  ತೀವ್ರೆ ಆಕ್ರೋಶ ವ್ಯಕ್ತಪಡಿಸಿದ್ದರು. ಮುತಾಲಿಕ್ ಅವರ ಭದ್ರತೆ ವಾಪಸ್ ಪಡೆದ ಸರ್ಕಾರದ ನಡೆಯನ್ನು ಹಿಂದೂಪರ ಸಂಘಟನೆಗಳು ಖಂಡಿಸಿದ್ದವು. 

 ಸದ್ಯ ಎಚ್ಚೆತ್ತುಕ್ಕೊಂಡಿರುವ ಬಿಜೆಪಿ ಸರಕಾರ ಮುತಾಲಿಕ್ಗೆ ಅವರಿಗೆ ಗನ್ ರಿನಿವಲ್, ಮಾಡಿದೆ ಮತ್ತು  ಸರಕಾರದಿಂದ ಓರ್ವ ಗನ್ ಮ್ಯಾನ್ ಅವರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಇದಕ್ಕೆ ಪ್ರಮೋದ ಮುತಾಲಿಕ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಧನ್ಯವಾದ ಹೇಳಿದ್ದಾರೆ. ಗನ್‌ಮ್ಯಾನ್ ವಾಪಸ್ ಪಡೆದ ಬಗ್ಗೆ ವರ್ಣ ನ್ಯೂಸ್‌ನಲ್ಲಿ ನಡೆದ ಚರ್ಚಾಕೂಟದಲ್ಲಿ ಪ್ರಸ್ತಾಪಿಸಿದ್ದೆ ಹಾಗಾಗಿ ಇದೀಗ ನನ್ನ ಭದ್ರತೆಗೆ ಸರ್ಕಾರ ಗನ್‌ ಮ್ಯಾನ್ ಒದಗಿಸಿದೆ. (Gun Security) ಅದಕ್ಕಾಗಿ ನಾನು ಸರಕಾರಕ್ಕೆ ಮತ್ತು ಸುವರ್ಣ ನ್ಯೂಸಗೆ  ಹೇಳಿದ್ದಾರೆ

ಹಿಂದೂಗಳ ಹತ್ಯೆ ನಡೆದ್ರೂ ಬಿಜೆಪಿ ಸರ್ಕಾರಗಳು ಕತ್ತೆ ಕಾಯುತ್ತಿವೆಯಾ?: ಮುತಾಲಿಕ್‌

ಹಿಂದೂ ಹೋರಾಟಗಾರನಾದ ನನಗೆ ರಕ್ಷಣೆಗೆ ಓರ್ವ ಅಂಗರಕ್ಷಕರನ್ನು ನಿಯೋಜಿಸಿದ್ದಕ್ಕೆ  ನಾನು ಸರಕಾರ ಮತ್ತು ಅಜಿತ್ ಹನಮಕ್ಕನವರ(Ajit Hanamakkanavar), ಸುವರ್ಣ ನ್ಯೂಸ್(Suvarna News) ಗೆ ಧನ್ಯವಾದಗಳನ್ನು ಹೇಳುತ್ತೇನೆ. ನಾನು ಯಾವ ಬೆದರಿಕೆಗೆ ಹೆದರೋನಲ್ಲ ನನ್ನ ರುಂಡ ತಂದವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಕೂಡಾ ಮಾಡಿದ್ರು ಆದರೆ ನಾನು ಯಾವ ಬೆದರಿಕೆಗೆ ಅಂಜಲ್ಲ.ಕಳೆದ ಮೂರು‌ ವರ್ಷದಿಂದ ಅಂಗರಕ್ಷಕನಿಲ್ಲದೆ ಇದ್ದೇನೆ. ಆದರೆ ಸರಕಾರ ಈಗಷ್ಟೆ ಭದ್ರತೆಗೆ ಓರ್ವ ಅಂಗರಕ್ಷಕನನ್ನು ಕೊಟ್ಟಿದೆ.ನಾನು ನನ್ನ ಉಸಿರು ಇರೋವರೆಗೂ ಹಿಂದೂ ಉಳಿವಿಗಾಗಿ ಹೋರಾಡುತ್ತೇನೆ.

ಪ್ರಮೋದ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

Follow Us:
Download App:
  • android
  • ios