ಕೋಲಾರದಲ್ಲಿ 15 ಅಡಿ ಉದ್ದದ ಮುಸ್ಲಿಂ ಖಡ್ಗ, ಹಸಿರು ಬಟ್ಟೆ, ಉರ್ದು ಬರಹದ ಬ್ಯಾನರ್‌ ಅಳವಡಿಕೆ

ಕೋಲಾರ ನಗರದಲ್ಲಿ 15 ಅಡಿ ಉದ್ದದ ಖಡ್ಗ, ಹಸಿರು ಬಟ್ಟೆಗಳು, ಖುರಾನ್‌ ಶ್ಲೋಕಗಳನ್ನು ಬರೆದಿರುವ ಬ್ಯಾನರ್‌ಗಳನ್ನು ಅಳವಡಿಕೆ ಮಾಡಲಾಗಿದೆ.

Muslim sword green cloth Urdu script Banner Installation in Kolar Clock tower circle sat

ಕೋಲಾರ (ಸೆ.28): ಕರ್ನಾಟಕದ ಗಡಿಭಾಗ ಕೋಲಾರ ನಗರದ ಮಧ್ಯಭಾಗದಲ್ಲಿಯೇ ಉರ್ದು ಭಾಷೆಯ ಬರಹಗಳನ್ನು ಹೊಂದಿದ ಸುಮಾರು 15 ಅಡಿ ಉದ್ದ 2 ಅಡಿ ಅಗಲದ ಖಡ್ಗ, ಹಸಿರು ಬಾವುಟಗಳು, ಹಸಿರು ಬಟ್ಟೆಗಳು ಹಾಗೂ ಖುರಾನ್‌ ಶ್ಲೋಕಗಳನ್ನು ಬರೆದಿರುವ ಬಟ್ಟೆಯ ಬ್ಯಾನರ್‌ಗಳನ್ನು ಅಳವಡಿಕೆ ಮಾಡಲಾಗಿದೆ.

ಕೋಲಾರದ ನಗರದ ಕ್ಲಾಕ್‌ ಟವರ್‌ ವೃತ್ತದಲ್ಲಿ ಗಣೇಶ ಹಬ್ಬದ ಕುರಿತ ಯಾವುದೊಂದೂ ಕೇಸರಿ ಬಾವುಟ, ಬ್ಯಾನರ್‌ ಅಳವಡಿಕೆಯನ್ನೂ ಮಾಡಿಲ್ಲ. ಆದರೆ, ಮುಂಬರುವ ಮಹಮ್ಮದ್‌ ಪೈಗಂಬರ್‌ ಜನ್ಮದಿನಾಚರಣೆ ಹಾಗೂ ಈದ್‌ ಮಿಲಾದ್‌ ಅಂಗವಾಗಿ ಕ್ಲಾಕ್‌ ಟವರ್‌ ವೃತ್ತದಲ್ಲಿ ಹಸಿರು ಬಟ್ಟೆಗಳ ಕಲರವ ಶುರುವಾಗಿದೆ. ಜೊತೆಗೆ, 15 ಅಡಿ ಉದ್ದದ ದೊಡ್ಡ ಖಡ್ಗಗಳನ್ನು ರಸ್ತೆಯ ಮೇಲ್ಭಾಗದಲ್ಲಿ ಅಳವಡಿಕೆ ಮಾಡಲಾಗಿದೆ. ಈ ಖಡ್ಗಗಳ ಮೇಲೆ ಉರ್ದುವಿನಲ್ಲಿ ಕೆಲವು ಬರವಣಿಗೆಗಳನ್ನು ಬರೆಯಲಾಗಿದೆ. ಇನ್ನು ಇದೇ ವೃತ್ತದ ಬಳಿ ಬಟ್ಟೆಯ ಬ್ಯಾನರ್‌ಗಳನ್ನು ಅಳವಡಿಕೆ ಮಾಡಿದ್ದು, ಅದರಲ್ಲಿ ಮುಸ್ಲಿಂ ಶ್ಲೋಕಗಳನ್ನು ಬರೆಯಲಾಗಿದೆ.

ದೃಶ್ಯ ಸಿನಿಮಾ ಸ್ಟೈಲಲ್ಲಿ ಕೊಲೆ ಮಾಡಿದ ಅಪ್ಪ, ಪೊಲೀಸರಿಂದ ತಪ್ಪಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾದ

ಕೋಲಾರ ನಗರದ ಕ್ಲಾಕ್ ಟವರ್ ವೃತ್ತದಲ್ಲಿ ಎರಡು ಕತ್ತಿ ಪ್ರದರ್ಶನ ಮಾಡಲಾಗಿದೆ. ಉದ್ದವಾದ ಎರಡು ಕತ್ತಿಗಳನ್ನು ರಸ್ತೆಯ ಮೇಲುಭಾಗದಲ್ಲಿ ಎಲ್ಲರಿಗೂ ಕಾಣುವಂತೆ ಅಳವಡಿಕೆ ಮಾಡಿದ್ದಾರೆಎ. ಕ್ಲಾಕ್ ಟವರ್ ಸೇತುವೆ ಇಳಿಯುತ್ತಿದಂತೆ ಕತ್ತಿಯನ್ನು ಅಳವಡಿಕೆ ಮಾಡಲಾಗಿದ್ದು, ಸುಮಾರು 1 ಕಿ.ಮೀ. ದೂರದಿಂದಲೇ ಈ ಕತ್ತಿಗಳು ಕಣ್ಣಿಗೆ ಕಾಣಿಸುತ್ತವೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಕ್ಲಾಕ್ ಟವರ್ ಬಳಿ ಆಚರಣೆಗೆ ಕತ್ತಿಯನ್ನು ಹಾಗೂ ಖುರಾನ್‌ ಶ್ಲೋಕಗಳುಳ್ಳ ಬ್ಯಾನರ್‌ಗಳನ್ನು ಅಳವಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಉರ್ದು ಅಕ್ಷರಗಳಲ್ಲಿ ಬರೆದಿರುವ ಎರಡು ಕತ್ತಿಗಳನ್ನು ಅಳವಡಿಕೆ ಮಾಡಲಾಗಿದೆ.

ಇನ್ನು ಕೋಲಾರ ಜಿಲ್ಲಾ ಪೊಲೀಸರು ಅಥವಾ ಸ್ಥಳೀಯ ಪೊಲೀಸ್‌ ಠಾಣೆಯಿಂದ ಯಾವುದೇ ಅನುಮತಿ ಪಡೆಯದೇ ಖಡ್ಗಗಳನ್ನು ಅಳವಡಿಕೆ ಮಾಡಿರುವುದು ಕಂಡುಬಂದಿದೆ. ಇನ್ನು ಮಧ್ಯಾಹ್ನದವರೆಗೂ ಈ ಖಡ್ಗಗಳನ್ನು ತೆರವು ಮಾಡಿರಲಿಲ್ಲ. ಹಿಂದೂ ಸಂಘಟನೆಗಳಿಂದ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ವೃತ್ತ ನಗರಸಭೆ ವ್ಯಾಪ್ತಿಗೆ ಬರುವ ಜಾಗವಾಗಿದೆ. ಪೊಲೀಸರ ಭದ್ರತೆಯಲ್ಲಿ ಕತ್ತಿಗಳನ್ನು ತೆರವು ಮಾಡಲು ನಿರ್ಧಾರ ಮಾಡಲಾಗಿದೆ. ಈ ರೀತಿ ಖಡ್ಗಗಳನ್ನು ಅಳವಡಿಕೆ ಮಾಡಿರುವುದು ಹಿಂದೂ - ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ನಡೆಯಬಹುದು ಎಂದು ಮುನ್ನೆಚ್ಚರಿಕಾ ಕ್ರಮಗಳನ್ನು ಪೊಲೀಸರು ಕೈಗೊಂಡು ತೆರವುಗೊಳಿಸಲು ನಿರ್ಧರಿಸಲಾಗಿದೆ. 

ಹಣ ಎಣಿಸೋಕೆ ಬರೊಲ್ಲವೆಂದು ರೇಗಿಸಿದ ಸ್ನೇಹಿತನನ್ನೇ ಕೊಲೆಗೈದ ಕ್ಯಾಷಿಯರ್

ಮುಸ್ಲಿಮರ ಹಬ್ಬ ಇರುವ ಹಿನ್ನೆಲೆಯಲ್ಲಿ ಈ ರೀತಿಯ ಬ್ಯಾನರ್‌ ಹಾಗೂ ಖಡ್ಗಗಳನ್ನು ಅಳವಡಿಕೆ ಮಾಡಲಾಗಿದೆ ಆದರೂ, ಇದನ್ನು ಸೂಕ್ಷ್ಮ ವಿಚಾರವಾಗಿ ಪೊಲೀಸರು ಪರಿಗಣಿಸಿದ್ದಾರೆ. ನಂತರ, ಕೆಲವೇ ಕ್ಷಣಗಳಲ್ಲಿ ಕತ್ತಿಗಳನ್ನು ತೆರವುಗೊಳಿಸಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ. ಹಿಂದೂ ಹಬ್ಬವಾದ ಗಣೇಶ ಉತ್ಸವಕ್ಕೆ ಕೇಸರಿ ಬಾವುಟ, ಬ್ಯಾನರ್‌ ಅಳವಡಿಕೆಗೆ ಅವಕಾಶ ಕೊಡದ ಪೊಲೀಸ್‌ ಇಲಾಖೆ ಮತ್ತು ನಗರಸಭೆ ಖಡ್ಗ, ಹಸಿರು ಬಟ್ಟೆಗಳನ್ನು ಅಳವಡಿಕೆ ಮಾಡಲು ಅವಕಾಶ ಕೊಟ್ಟಿದೆಯೇ ಎಂದು ಟೀಕೆ ಮಾಡುತ್ತಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

Latest Videos
Follow Us:
Download App:
  • android
  • ios