ವಿಜಯಪುರ(ಡಿ.16): ಮುಸ್ಲಿಂ ಕುಟುಂಬವೊಂದು ಹಿಂದೂ ಸಂಸ್ಕೃತಿಯ ಪ್ರಕಾರ ನೂತನ ಮನೆಯ ಗೃಹ ಪ್ರವೇಶ ನೆರವೇರಿಸುವ ಭಾವೈಕ್ಯತೆ ಸಾರಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದಲ್ಲಿ ನಡೆದಿದೆ. ಲಾಲಸಾಬ ನದಾಫ್ ಎಂಬ ಮುಸ್ಲಿಂ ಕುಟುಂಬ ಡಿ. ತಾರೀಕಿನಂದು ನವಗ್ರಹ ಹಾಗೂ ಲಕ್ಷ್ಮಿಪೂಜೆ ಮಾಡಿ ನೂತನ ಮನೆ ಗೃಹ ಪ್ರವೇಶ ಮಾಡಿದೆ. 

"

ಲಾಲಸಾಬ ನದಾಫ್ ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದು, ಹಿಂದೂ ಧರ್ಮದ ಗೆಳಯರನ್ನ ಹೆಚ್ಚಾಗಿ ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿದ ಲಾಲಸಾಬ ನದಾಫ್, ನಾವು ಹಳ್ಳಿ ಜನರಾಗಿದ್ದು ನಾವು ಇಲ್ಲಿ ಎಲ್ಲ ಧರ್ಮದವರು ಒಂದಾಗಿಯೇ ಇರುತ್ತೇವೆ. ಅಲ್ಲದೆ ಎಲ್ಲ ಧರ್ಮವನ್ನು ಗೌರವಿಸುತ್ತೇವೆ. ಹಲವಾರು ವರ್ಷಗಳಿಂದ ನಮ್ಮ‌ ಕುಟುಂಬಮುಸ್ಲಿಂ ಧರ್ಮದೊಂದಿಗೆ ಹಿಂದೂ ಧರ್ಮವನ್ನ ಪಾಲಿಸುತ್ತ ಬಂದಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅದೇ ಕಾರಣಕ್ಕೆ ಗೃಹ ಪ್ರವೇಶದ ವೇಳೆ ಖುರಾನ್ ಪಠಣ ಮಾಡಿ ನವಗ್ರಹ ಹಾಗೂ ಲಕ್ಷ್ಮೀ ಪೂಜೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇವರ ಭಾವೈಕ್ಯತೆಯ ಭಾವ ಇತರರಿಗೂ ಮಾದರಿಯಾಗಿದೆ.