ಇದು ಭಾವೈಕ್ಯತೆಯ ಗಣಪ: ಕೇಸರಿ ಶಾಲು ಹೊದ್ದ ಮುಸ್ಲಿಂ ಭಾಂದವರನ್ನು ನೋಡಪ್ಪ!
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲೊಂದು ಸ್ಪೇಷಲ್ ಭಾವೈಕ್ಯತೆ ಗಣಪ| ಜಮಖಂಡಿಯಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಮಹಾಗಣಪತಿ ಉತ್ಸವ| ಮುಸ್ಲಿಮ್ ಬಾಂಧವರಿಂದ ಮಹಾಗಣಪತಿಗೆ ಪೂಜಾ ಕೈಂಕರ್ಯ| 10 ಸಾವಿರಕ್ಕೂ ಅಧಿಕ ಹಿಂದೂ ಭಕ್ತರಿಗೆ ಅನ್ನ ಸಂತರ್ಪಣೆ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಸೆ.08): ಆ ಮಹಾ ಗಣಪತಿಗೆ ಇಂದು ಮುಸ್ಲಿಂರೇ ತಯಾರಿಸಿದ ನೈವೇದ್ಯವಿತ್ತು, ಇತ್ತ ನೆರೆದಿದ್ದ ಸಾವಿರಾರು ಹಿಂದೂ ಭಕ್ತರಿಗೂ ಮುಸ್ಲಿಂರೇ ತಯಾರಿಸಿದ ಅನ್ನ ಸಂತಪ೯ಣೆ ಇತ್ತು. ಸಾಲದ್ದಕ್ಕೆ ಗಣಪತಿಗೆ ಮುಸ್ಲಿಂ ಬಾಂಧವರ ವಿಶೇಷ ಮಹಾಮಂಗಳಾರತಿ ಇತ್ತು.
"
ಹಬ್ಬ ಹರಿದಿನಗಳಲ್ಲೂ ಸೌಹಾರ್ದತೆ ಮರೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಗಣೇಶ್ ಉತ್ಸವದಲ್ಲಿ ಮುಸ್ಲಿಂ ಬಾಂಧವರು ಮಹಾಗಣಪತಿಗೆ ವಿಶೇಷ ಪೂಜಾ ಕೈಂಕರ್ಯ, ಅನ್ನಸಂತರ್ಪಣೆ ಮಾಡುವ ಮೂಲಕ ಹಿಂದೂ-ಮುಸ್ಲಿಂರು ಬಾಂಧವರು ಭಾವೈಕ್ಯತೆ ಮೆರೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಪೋಲೋ ಮೈದಾನದಲ್ಲಿ ಮಹಾಗಣಪತಿ ಉತ್ಸವ ಸಮಿತಿಯಿಂದ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ಮುಸ್ಲಿಮರು ಸೇರಿಕೊಂಡು ಮಹಾಗಣಪತಿಗೆ ಪೂಜಾ ಕೈಂಕಯ೯ ಹಾಗೂ 10ಸಾವಿರ ಜನರಿಗೆ ಅನ್ನಸಂತರ್ಪಣೆ ಮಾಡಿದರು. ಮುಸ್ಲಿಮರು ಅಡುಗೆ ತಯಾರಿಸಿ ಪ್ರಸಾದ ಉಣಬಡಿಸಿದ್ದು, 4ಕ್ವಿಂಟಾಲ್ ಅನ್ನ ಹಾಗೂ ಕೇಸರಿಬಾತ್’ನ್ನು ಪ್ರಸಾದವನ್ನಾಗಿ ನೀಡಿದರು.
ಇನ್ನು ಈ ಬಾರಿ ಹಿಂದೂ- ಮುಸ್ಲಿಮರು ಒಂದಾಗಿ ಗಣೇಶ್ ಉತ್ಸವದಲ್ಲಿ ಭಾಗಿಯಾಗಿದರು. ಮುಸ್ಲಿಮರು ತಮ್ಮ ತಮ್ಮ ಕೊರಳಿಗೆ ಕೇಸರಿ ಶಾಲು ಹಾಕಿಕೊಂಡು, ಮಹಾಗಣಪತಿ ಗೆ ಮಹಾಮಂಗಳಾರತಿ ಮಾಡುವ ಮೂಲಕ ವಿಶೇಷ ಪೂಜಾ ಕೈಂಕರ್ಯ ಕೈಗೊಂಡರು.
"
ಬಳಿಕ ಖುದ್ದು ತಾವೇ ತಯಾರಿಸಿದ ಅನ್ನ ಪ್ರಸಾದವನ್ನು ಅಂದಾಜು10 ಸಾವಿರಕ್ಕೂ ಅಧಿಕ ಹಿಂದೂ ಭಕ್ತರಿಗೆ ಉಣ ಬಡಿಸಿದರು. ಗಣೇಶನ ಹಬ್ಬದಲ್ಲಿ ಇಂತಹ ಹಿಂದೂ ಮುಸ್ಲಿಂರ ಭಾವೈಕ್ಯತೆ ಕ್ಷಣ ದೇಶಕ್ಕೆ ಮಾದರಿ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಒಟ್ಟಿನಲ್ಲಿ ಜಾತಿ ಜಾತಿ ಅಂತ ಬಡಿದಾಡೋ ಜನರಿರುವ ಇಂದಿನ ಕಾಲದಲ್ಲಿ ಜಮಖಂಡಿ ಪಟ್ಟಣದಲ್ಲಿ ಮುಸ್ಲಿಂ ಭಾಂದವರೆಲ್ಲಾ ಸೇರಿ ಹಿಂದೂಗಳ ಗಣೇಶನ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಮಾಡುವುದರ ಜೊತೆಗೆ ಭಾವೈಕ್ಯತೆ ಸಂದೇಶ ಸಾರಿರುವುದ ಹೆಮ್ಮೆ ತರುವ ಸಂಗತಿ.
"